ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿರುವ ಹನುಮಂತ ಪ್ರತಿ ವಾರ ಅವರಿಗೆ ಉತ್ತಮವಾಗಿ ವೋಟ್ಗಳು ಬರುತ್ತಿವೆ. ಆದರೆ ಯಾಕೋ ಹನುಮಂತ ಅವರು ಬಿಗ್ ಬಾಸ್ ಆಟವನ್ನು ತೊರೆಯುವ ಬಗ್ಗೆ ಮಾತನಾಡಿದ್ದಾರೆ.
‘ಬಿಗ್ ಬಾಸ್ಗೆ ನಾನು ನೇರವಾಗಿ ಹೇಳಿಬಿಡುತ್ತೇನೆ. ಕಷ್ಟ ಆಗುತ್ತಿದೆ ನನ್ನನ್ನು ಕಳಿಸಿ ಬಿಡಿ’ ಎಂದು ಹನುಮಂತ ಅವರು ಹೇಳಿದ್ದಾರೆ. ‘ನೀನು ಯಾಕೆ ಶೋಭಕ್ಕನ ಥರ ಆಡುತ್ತಿದ್ದೀಯ’ ಎಂದು ಧನರಾಜ್ ಅವರು ಹೇಳಿದರು. ಯಾಕೆಂದರೆ, ಶೋಭಾ ಶೆಟ್ಟಿ ಕೂಡ ಇದೇ ರೀತಿ ಮಾತನಾಡಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ತಮ್ಮ ಮನಸ್ಸಿನ ಗೊಂದಲ ಏನು ಎಂಬುದನ್ನು ಹನುಮಂತ ವಿವರಿಸಿದ್ದಾರೆ
ಭಾನುವಾರದ ಸಂಚಿಕೆಯಲ್ಲಿ ಹನುಮಂತ ಅವರು ಈ ಕುರಿತು ಧನರಾಜ್ ಜೊತೆ ಚರ್ಚೆ ಮಾಡಿದ್ದಾರೆ. ಆದರೆ ಧನರಾಜ್ ಅವರು ಹನುಮಂತನಿಗೆ ಧೈರ್ಯ ತುಂಬಿದ್ದಾರೆ.