Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರೇಣುಕಾಸ್ವಾಮಿ ಕೊಲೆ ಪ್ರಕರಣ: ಹತ್ಯೆಯಲ್ಲಿ ಯಾರ ಪಾತ್ರ ಏನು?
ಕರ್ನಾಟಕಮನರಂಜನೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಹತ್ಯೆಯಲ್ಲಿ ಯಾರ ಪಾತ್ರ ಏನು?

Share
4 Min Read
SHARE

newsics.com

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಿತ್ರರಂಗದ ನಟ ದರ್ಶನ್ ಹಾಗೂ ಇತರರ ಎರಡನೇ ಹಂತದ ಅಸಲಿ ವಿಚಾರಣೆ ಪೊಲೀಸರಿಂದ ನಡೆಯುತ್ತಿದೆ.

ನಟ ದರ್ಶನ್ ಆಪ್ತ ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆಸಿ, ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಆರೋಪದ ಮೇಲೆ ನಟ ದರ್ಶನ್ ಮತ್ತು ಅವರ ಸಹವರ್ತಿಗಳನ್ನು‌ ಎರಡನೇ ಬಾರಿಗೆ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ.

ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಜನರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೆಲ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಬಂಧಿತರನ್ನು ಸದ್ಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದ್ದು, ಹತ್ಯೆಗೆ ಸಂಬಂಧಿಸಿದ ಮತ್ತಷ್ಟು ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಕೊಲೆ ಪ್ರಕರಣದಲ್ಲಿ ಯಾರ್ಯಾರ ಪಾತ್ರ ಏನಾಗಿತ್ತು ಎಂಬುದರ ಮಾಹಿತಿ ಇಲ್ಲಿದೆ..
A1- ಪವಿತ್ರಾಗೌಡ: ಕೊಲೆ ಮಾಡಲು ಮೂಲ ಕಾರಣ ಇವರೇ. ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದರು. ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂಬ ಆರೋಪವಿದೆ.
A2- ನಟ ದರ್ಶನ್: ಪವಿತ್ರಾಗೆ ಅಶ್ಲೀಲ ಸಂದೇಶ ಮಾಡಿದ್ದಕ್ಕೆ ರೇಣುಕಾಸ್ವಾಮಿ ಕಿಡ್ನಾಪ್ ಮಾಡಿಸಿರುವುದು, ಹಲ್ಲೆ ಮಾಡಿರುವುದು. ಕೊಲೆ ನಂತರ ಶವಸಾಗಿಸಲು ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಹಣ ನೀಡಿರುವ ಆರೋಪ.
A3) ಪವನ್: ಪವಿತ್ರ ಜೊತೆಗೆ ಇದ್ದು, ರಾಘವೇಂದ್ರ ಜೊತೆಗೆ ನಿರಂತ ಸಂಪರ್ಕದಲ್ಲಿ ಇದ್ದುಕೊಂಡು ಕಿಡ್ನಾಪ್ ಮಾಡಿಸಿದ್ದು. ಬೆಂಗಳೂರಿಗೆ ಬಂದ ಮೇಲೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ಆರೋಪ
A4) ರಾಘವೇಂದ್ರ: ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅದ್ಯಕ್ಷ, ರೇಣುಕಾಸ್ವಾಮಿ ಕಿಡ್ನಾಪ್ ಮಾಡುವಲ್ಲಿ ಪ್ರಮುಖ ಪಾತ್ರ. ಬೆಂಗಳೂರಿಗೆ ಬಂದ ಮೇಲೆ ಆತನ ಮೇಲೆ ಹಲ್ಲೆ ಮಾಡಿರುವುದು. ಕೊಲೆಯಾದ ಸ್ಥಳದಲ್ಲಿ ಹಾಜರಿದ್ದರು.

A5) ನಂದೀಶ: ಹಲ್ಲೆ ಮಾಡುವಾಗ ಸ್ಥಳದಲ್ಲಿ ಹಾಜರಿ, ರೇಣುಕಾಸ್ವಾಮಿಗೆ ತೀವ್ರವಾಗಿ ಹಲ್ಲೆ ಮಾಡಿದ ಆರೋಪ.
A6) ಜಗದೀಶ್ ಅಲಿಯಾಸ್ ಜಗ್ಗ: ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗ ದಿಂದ ಬಂದಿದ್ದ ತಂಡದ ಸದಸ್ಯ, ಚಿತ್ರದುರ್ಗದಿಂದ ಕರೆತಂದ ರೇಣುಕಾಸ್ವಾಮಿ ಕೊಲೆಯಾದ ನಂತರ ಎಸ್ಕೇಪ್ ಆಗಿದ್ದ. ಶುಕ್ರವಾರ ತಾನಾಗಿಯೇ ಚಿತ್ರದುರ್ಗದ ಪೊಲೀಸರಿಗೆ ಶರಣಾಗಿದ್ದ. ಈತ ದರ್ಶನ್ ಅಭಿಮಾನಿ.
A7) ಅನುಕುಮಾರ್ ಅಲಿಯಾಸ್ ಅನು: ಬೈಕ್ನಲ್ಲಿ ಹೋಗುತ್ತಿದ್ದ ರೇಣುಕಾಸ್ವಾಮಿಯನ್ನ ತನ್ನ ಆಟೋದಲ್ಲಿ ಕರೆದುಕೊಂಡು ರಾಘವೇಂದ್ರ ಬಳಿಗೆ ಕರೆತಂದಿದ್ದ. ಅಲ್ಲದೆ ಬೆಂಗಳೂರಿಗೆ ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗ ದಿಂದ ಬಂದಿದ್ದ ತಂಡದಲ್ಲೂ ಇದ್ದ. ಕೊಲೆ ಮಾಡಿದ ಬಳಿಕ ಎಸ್ಕೇಪ್ ಆಗಿದ್ದ. ಶುಕ್ರವಾರ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದ. ಈತ ದರ್ಶನ್ ಅಭಿಮಾನಿ.
A8)ರವಿ ಅಲಿಯಾಸ್ ರವಿಶಂಕರ್ : ರೇಣುಕಾಸ್ವಾಮಿ ಕಿಡ್ನಾಪ್ಗೆ ಬಳಸಿದ್ದ ಕಾರು ಚಾಲಕ. ಜಗ್ಗ ಅಲಿಯಾಸ್ ಜಗದೀಶ್ ಮೂಲಕ ಬಾಡಿಗೆ ಮಾತನಾಡಿಕೊಂಡು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆತಂದಿದ್ದ. ಕೊಲೆ ಬಳಿಕ ಪರಾರಿಯಾಗಿದ್ದ. ನಂತರ ತಾನಾಗಿಯೇ ಟ್ಯಾಕ್ಸಿ ಚಾಲಕರ ಮೂಲಕ ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಶರಣಾಗಿದ್ದ.
A9) ರಾಜು : ನಾಪತ್ತೆ, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿಕೊಂಡು ಬಂದಿದ್ದ ತಂಡದ ಸದಸ್ಯ
A10) ವಿನಯ್ : ದರ್ಶನ್ ಆಪ್ತನಾಗಿದ್ದು, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ, ಈತ ಹಲ್ಲೆ ಮಾಡಿದ್ದವರ ಪೈಕಿ ಪ್ರಮುಖ ವ್ಯಕ್ತಿ. ಮನಸೋ ಇಚ್ಚೆ ಹಲ್ಲೆ ಮಾಡಿದ ಆರೋಪವಿದೆ.
A11) ನಾಗರಾಜು ಅಲಿಯಾಸ್ ನಾಗ: ನಟ ದರ್ಶನ್ನ ಅನಧಿಕೃತ ಮ್ಯಾನೇಜರ್, ಪಾರ್ಟಿ ಕುಡಿತ ಸೇರಿ ಎಲ್ಲಾ ಕಡೆ ಇರ್ತಿದ್ದ, ಹಲ್ಲೆ ಮಾಡುವಾಗ ಜೊತೆಗೆ ಇದ್ದು ಹಲ್ಲೆ ಮಾಡಿ ಕಾಲಿನಿಂದಲೂ ಒದ್ದಿದ್ದ ಎಂಬ ಆರೋಪ.
A12) ಲಕ್ಷ್ಮಣ್ : ದರ್ಶನ್ ಕಾರು ಚಾಲಕ,ಕೊಲೆ ಮಾಡುವಾಗ ಸ್ಥಳದಲ್ಲಿ ಇದ್ದು ಹಲ್ಲೆ ಮಾಡಿದ್ದ, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದ ಆರೋಪ.
A13)ದೀಪಕ್: ದರ್ಶನ್ ಆಪ್ತನಾಗಿದ್ದ,ಹಲ್ಲೆ ಮಾಡಿದ ನಂತರ ದರ್ಶನ್, ಪ್ರದೋಶ್ ಹೇಳಿದಂತೆ ಶವಸಾಗಿಸಲು ನಿಖಿಲ್ , ಕೇಶವಮೂರ್ತಿ, ಮತ್ತು ಕಾರ್ತಿಕ್ನೊಂದಿಗೆ ಡೀಲ್ ಮತ್ತು ಶರಣಾಗಲು ಒಪ್ಪಿಸಿ ಹಣ ನೀಡಿದ್ದ. ಇಬ್ಬರಿಗೆ ತಲಾ ಐದು ಲಕ್ಷ ಹಣ ನೀಡಿದ್ದ.
A14)ಪ್ರದೂಶ್: ದರ್ಶನ್ ಜೊತೆಗೆ ಇದ್ದುಕೊಂಡು ಹಲ್ಲೆ ಮಾಡಿದ್ದ, ನಂತ್ರ ದರ್ಶನ್ ಜೊತೆಗೆ ವ್ಯವಹಾರ ಮಾಡಿ ಕೊಲೆ ಮಾಡಿದವರ ಖರ್ಚಿಗಾಗಿ ಮೂವತ್ತು ಲಕ್ಷ ಹಣವನ್ನು ಪಡೆದುತಂದಿದ್ದ, ನಂತರ ದೀಪಕ್ ಮೂಲಕ ವ್ಯವಹಾರ ಮಾಡಿಸಿ, ಆರೋಪಿಗಳು ಭಯ ಪಟ್ಟಾಗ ಮತ್ತೆ ದರ್ಶನ್ ಬೇಟಿ ಮಾಡಿಸಿ ಸರೆಂಡರ್ ಮಾಡಿಸಿದ್ದ.
A15) ಕಾರ್ತಿಕ್ ಅಲಿಯಾಸ್ ಕಪ್ಪೆ: ಶೆಡ್ನಲ್ಲಿ ಕೆಲಸ ಮಾಡಿಕೊಂಡಿದ್ದ,ಹಣ ನೀಡಿದ ಬಳಿಕ ಶವ ಸಾಗಿಸಿದ್ದ, ನಂತರ ಪೊಲೀಸರ ಮುಂದೆ ಸರಂಡರ್ ಆಗಿದ್ದ.
A16) ಕೇಶವ್ ಮೂರ್ತಿ: ರೇಣುಕಾಸ್ವಾಮಿ ಕೊಲೆಯಾದ ಬಳಿಕ ಹಣ ಪಡೆದು ಶವ ಸಾಗಿಸುವ ಕೆಲಸ ಮಾಡಿದ್ದ. ನಂತರ ಪೊಲೀಸರ ಮುಂದೆ ಶರಣಾಗಿದ್ದ.
A17) ನಿಖಿಲ್ : ರೇಣುಕಾಸ್ವಾಮಿ ಕೊಲೆಯಾದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ, ನಂತರ ಪೊಲೀಸರ ಎದುರು ಸರಂಡರ್ ಆಗಿದ್ದ.

TAGGED:#Renukaswamy #murder #Darshan #pavithragowda #karnataka #bangalore #chitradurga #newsics
Share This Article
Facebook Twitter Copy Link Print
Previous Article 10 ಲಕ್ಷ ಕಾಗೆಗಳ ಹತ್ಯೆಗೆ ಸರ್ಕಾರ ಆದೇಶ!
Next Article ಕೆರೆಯಲ್ಲಿ ಮೀನು ಹಿಡಿದು ಫ್ರೈ ಮಾಡಿ ತಿಂದ ನಟಿ ಶರಣ್ಯ ಶೆಟ್ಟಿ

Popular Posts

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

You Might Also Like

ಪ್ರಮುಖಕರ್ನಾಟಕದೇಶ

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read
ಕರ್ನಾಟಕ

Uttarakannada Trauma Center | ಕುಮಟಾದಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಆರಂಭ

3 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?