newsics.com
ಬಿಗ್ ಬಾಸ್ ಕನ್ನಡ ಸೀಜನ್ 11 ಇನ್ನೇನು ಅಂತಿಮ ದಿನಗಳತ್ತ ಸಾಗುತ್ತಿದ್ದು, ಗ್ರ್ಯಾಂಡ್ ಫಿನಾಲೆ ಕೂಡ ಸಮೀಪಿಸುತ್ತಿದೆ. ಇಂತಹ ಹೊತ್ತಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್ ಮನೆಯೊಳಗೆ ಸಪ್ರೈಸ್ ಎಂಟ್ರಿ ಕೊಡುತ್ತಿದ್ದಾರೆ.
ಹೌದು, ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಪಾರು ಖ್ಯಾತಿಯ ಮೋಕ್ಷಿತಾ ಪೈ ಕುಟುಂಬಸ್ಥರು ಬಿಗ್ ಬಾಸ್ ಮನೆಯೊಳಗೆ ಬಂದ ವಿಡಿಯೋ ನೋಡಿ ಪ್ರೇಕ್ಷಕರು ಕೂಡ ಕಣ್ಣೀರು ಹಾಕುವಂತಾಗಿದೆ.
https://www.instagram.com/reel/DEQ_R-Ru-vd/?igsh=b3RpejRjam85dTF2
ಇನ್ನು ಭವ್ಯಾ ಹಾಗೂ ತ್ರಿವಿಕ್ರಮ್ ಕುಟುಂಬದವರು ಮನೆಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದರು. ಇವರ ಬಳಿಕ ರಜತ್ ಅವರ ಕುಟುಂಬ ಆಗಮಿಸಿತ್ತು. ಇದರ ಬೆನ್ನಲ್ಲೇ ಇಂದು ಮನೆಗೆ ಮೋಕ್ಷಿತಾ ಅವರ ಫ್ಯಾಮಿಲಿ ಆಗಮಿಸಿದೆ.
ಹೊಸ ವರ್ಷದಂದೇ ಮೋಕ್ಷಿತಾ ಫ್ಯಾಮಿಲಿ ಬಂದಿದೆ. ಪೋಷಕರ ಜೊತೆ ಸಹೋದರನ ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಹೋದರನನ್ನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ.
ಅಕ್ಕ ಮತ್ತು ತಮ್ಮ ಒಂದಾಗೋ ಭಾವನಾತ್ಮಕ ಘಟಳಿಗೆಯಲ್ಲಿ ಇಡೀ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ.
ವಿಶೇಷ ಚೇತನ ಸಹೋದರನನ್ನು ನೋಡಿದ ತಕ್ಷಣ ಮೋಕ್ಷಿತಾ ಅಳುತ್ತಾ ಓಡೋಡಿ ಬಂದರು. ಇಷ್ಟು ದಿನ ಬಿಟ್ಟು ಇದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ನನ್ನನ್ನು ಮರೆತು ಹೋಗಿಬಿಟ್ಟಿದ್ದಾನೆ ಎಂದು ತಮ್ಮನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಸುರಿಸಿದ್ದಾರೆ. ಅವನು ನನ್ನಾ ನೋಡ್ತಾನೇ ಇಲ್ಲ. ನನ್ನನ್ನು ಮರೆತು ಬಿಟ್ಟಿದ್ದಾರೆ ಎಂದು ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ
ಈ ಚಿಕ್ಕ ಕುಟುಂಬವನ್ನು ನೋಡಿದ ರಜತ್, ಹನುಮಂತು, ಮಂಜು, ಚೈತ್ರಾ, ಗೌತಮಿ, ತ್ರಿವಿಕ್ರಮ್, ಭವ್ಯಾ ಎಲ್ಲರೂ ಫುಲ್ ಸೈಲೆಂಟ್ ಆಗಿದ್ದರು. ಮೋಕ್ಷಿತಾ ಅಳುವುದನ್ನು ನೋಡಿ ತಡೆಯಲಾಗದೇ ಗೌತಮಿ ಕೂಡ ಅತ್ತಿದ್ದಾರೆ. ಸಹೋದರನ ಜೊತೆಗಿನ ಭಾವನಾತ್ಮಕ ಕ್ಷಣ ನೋಡಿ ಇಡೀ ಮನೆಯೇ ದುಃಖದಲ್ಲಿ ಮುಳುಗಿದೆ.