newsics.com
ರಾಯ್ಬರೇಲಿ(ಉತ್ತರ ಪ್ರದೇಶ): ಇದು ಅಂತಿಂಥ ಕೋತಿಯಲ್ಲ. ಚಪಾತಿ ಲಟ್ಟಿಸತ್ತೆ, ಪಾತ್ರೆ ತೊಳೆಯತ್ತೆ….
ರಾಯ್ಬರೇಲಿ ಜಿಲ್ಲೆಯಲ್ಲೀಗ ರಾಣಿ ಹೆಸರಿನ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕೋತಿ ಚಪಾತಿ ಲಟ್ಟಿಸುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಮನೆಗೆಲಸಗಳನ್ನು ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ದಿನನಿತ್ಯದ ಮನೆಯ ಕೆಲಸಗಳನ್ನು ಮಾಡುತ್ತಿರುವ ಕೋತಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಪ್ರದೇಶದ ರಾಯ್ಬರೇಲಿ ಬಳಿಯ ಖಾಗಿಪುರ್ ಸಾದ್ವಾ ಎಂಬ ಸಣ್ಣ ಹಳ್ಳಿಯಲ್ಲಿ ರಾಣಿ ಎಂಬ ಕೋತಿಯಿದೆ. ತನ್ನಲ್ಲಿ ಮಾನವೀಯ ಗುಣ ಮತ್ತು ಸಹಾಯ ಮಾಡುವ ಗುಣದಿಂದಾಗಿ ಇಡೀ ಹಳ್ಳಿಯ ಜನರಿಗೆ ರಾಣಿ ಅಚ್ಚುಮೆಚ್ಚು.
ರಾಣಿ ಸುಮಾರು ಎಂಟು ವರ್ಷಗಳ ಹಿಂದೆ ಗ್ರಾಮಕ್ಕೆ ಬಂದಿದ್ದು, ಅಂದಿನಿಂದ ಅಶೋಕ್ ಮತ್ತು ಆತನ ಕುಟುಂಬದೊಂದಿಗೆ ವಾಸಿಸುತ್ತಿದೆ. ರಾಣಿ ಕೋತಿ ಕುಟುಂಬದ ಇತರ ಸದಸ್ಯರಂತೆ ಮನೆಕೆಲಸಗಳನ್ನು ಮಾಡುತ್ತಿದೆ.
ಪಾತ್ರೆಗಳನ್ನು ತೊಳೆಯುವುದು, ಚಪಾತಿಗಳನ್ನು ಲಟ್ಟಿಸೋದು ಮತ್ತು ಮಸಾಲೆಗಳನ್ನು ರುಬ್ಬುವುದು ಮುಂತಾದ ಕೆಲಸಗಳಲ್ಲಿ ರಾಣಿ ಸಹಾಯ ಮಾಡುತ್ತದೆ. ಮನೆಯ ಹೆಂಗಸರು ಅಡುಗೆ ಮಾಡುವಾಗಲೆಲ್ಲ ಅವರಿಗೆ ರಾಣಿ ಸಹಾಯ ಮಾಡುತ್ತದೆ ಎನ್ನುತ್ತಾರೆ ಕುಟುಂಬಸ್ಥರು.
ರಾಣಿ ಅಶೋಕ್ ಮನೆಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಯ ಇತರ ಮನೆಗಳಿಗೆ ಭೇಟಿ ನೀಡುತ್ತದಂತೆ. ಬೇರೆ ಅವರ ಮನೆಗಳಲ್ಲಿಯೂ ಕೆಲಸ ಮಾಡುತ್ತಂತೆ. ಕೆಲವೊಮ್ಮೆ ಅವರ ಮನೆಗಳಲ್ಲಿ ದೈನಂದಿನ ಕೆಲಸ ಮುಗಿಸಿ ರಾತ್ರಿಯನ್ನೂ ಕಳೆಯುತ್ತಂತೆ. ಅಶೋಕ ಅವರ ಮನೆ ರಾಣಿಯ ಮನೆಯಾದರೂ ಇಡೀ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲೂ ಕಾಣಿಸಿಕೊಳ್ಳುತ್ತದೆ ಈ ರಾಣಿ ಕೋತಿ.
ಇಡೀ ಗ್ರಾಮದ ಜನ ರಾಣಿಯನ್ನು ಮೆಚ್ಚಿಕೊಂಡಿದ್ದಾರೆ. ರಾಣಿ ಎಲ್ಲಿಗೆ ಹೋದರೂ, ಜನರು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಅಷ್ಟೇ ಅಲ್ಲ, ಅವಳಿಗೆ ಹಾಸಿಗೆಯನ್ನೂ ಸಿದ್ಧಪಡಿಸುತ್ತಾರಂತೆ. ಯೂಟ್ಯೂಬ್ನಲ್ಲಿ ರಾಣಿಯ ವೀಡಿಯೊಗಳ ಮೂಲಕ ಕುಟುಂಬವು 5 ಲಕ್ಷ ರೂಪಾಯಿಗಳನ್ನು ಗಳಿಸಿದೆ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.
https://twitter.com/i/status/1873676244388282544
Bigg Boss kannada ಅಕ್ಕನ ಪರಿಚಯವೇ ಸಿಗಲಿಲ್ಲ: ಯಾರಿಗೂ ಬೇಡ ಮೋಕ್ಷಿತಾ ಸ್ಥಿತಿ
pet dog died ಸಾಕು ನಾಯಿ ಸತ್ತಿದ್ದಕ್ಕೆ ಬೇಸತ್ತು ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ