newsics.com
ಮಂಡ್ಯ: ಕೋಟಿ ಕೋಟಿ ಗೋಲ್ಡ್ ವಂಚಿಸಿ ಪೊಲೀಸರಿಂದ ವಿಚಾರಣೆ ಎದುರಿಸುತ್ತಿರುವ ಮಂಡ್ಯದ ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ ವಿರುದ್ಧ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ನಗರದ ಗುತ್ತಲು ನಿವಾಸಿ ಮಿಕ್ಸಿ ರಿಪೇರಿ ಅಂಗಡಿ ಮಾಲೀಕ ರವಿಕುಮಾರ್ ಎಂಬಾತನಿಂದ ಮನಿ ಡಬ್ಲಿಂಗ್ ಮಾಡಿಕೊಡುವುದಾಗಿ ಪುಸಲಾಯಿಸಿ ಸುಮಾರು 40 ಲಕ್ಷ ರೂ. ಪಡೆದು ವಂಚಿಸಿದ್ದಾರೆಂದು ದೂರು ನೀಡಲಾಗಿದೆ.
ರವಿಕುಮಾರ್ ಅವರಿಗೆ ಹಣ ದ್ವಿಗುಣ ಮಾಡುವುದಾಗಿ ಐಶ್ವರ್ಯ ನಂಬಿಸಿದ್ದಳು. ಆಕೆಯ ಮಾತನ್ನು ನಂಬಿದ ರವಿಕುಮಾರ್ ತನ್ನ ಮನೆಯನ್ನು ಅಡವಿಟ್ಟು ಹಣ ಕೊಟ್ಟಿದ್ದ ಎಂದು ದೂರು ನೀಡಿದ್ದಾರೆ. ಹಂತ ಹಂತವಾಗಿ ಹಣ ಪಡೆದುಕೊಂಡ ಐಶ್ವರ್ಯ ಹಣವನ್ನು ವಾಪಸ್ಸು ನೀಡಿರಲಿಲ್ಲ.
ಹಣ ವಾಪಸ್ ಕೇಳಿದಾಗಲೆಲ್ಲ ಇಲ್ಲದ ಸಬೂಬು ಹೇಳುತ್ತಿದ್ದಳು. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಸತಾಯಿಸುತ್ತಿದ್ದಳೆನ್ನಲಾಗಿದೆ. ಇದರಿಂದ ಬೇಸತ್ತ ರವಿಕುಮಾರ್ ಇಂದು ಆಕೆಯ ವಿರುದ್ಧ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಡ್ಯದಲ್ಲಿ ಇನ್ನೂ ಅನೇಕರಿಂದ ಆಭರಣ ಪಡೆದು ವಂಚನೆ ಮಾಡಿರುವುದಾಗಿ ರವಿಕುಮಾರ್ ದೂರು ನೀಡಿದ್ದಾರೆ.
ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣ: 7 ಮಂದಿಗೆ ಜೀವಾವಧಿ ಶಿಕ್ಷೆ