Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿತ್ತಾ? ಈಗ ತಲೆ ಧಿಂ ಅಂತಿದ್ಯಾ? ಹೀಗೆ ಮಾಡಿದ್ರೆ ಹ್ಯಾಂಗೋವರ್ ಮಾತೇ ಇಲ್ಲ!
ಆರೋಗ್ಯಪ್ರಮುಖಲೈಫ್‌ಸ್ಟೈಲ್

Health Tips ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿತ್ತಾ? ಈಗ ತಲೆ ಧಿಂ ಅಂತಿದ್ಯಾ? ಹೀಗೆ ಮಾಡಿದ್ರೆ ಹ್ಯಾಂಗೋವರ್ ಮಾತೇ ಇಲ್ಲ!

Share
2 Min Read
SHARE

newsics.com

ನ್ಯೂ ಇಯರ್‌ ಸೆಲೆಬ್ರೇಷನ್‌ (New Year Celebration) ಮುಗಿದಿದೆ. ಕುಡಿದು ಕುಡಿದು ಕುಣಿದು ಕುಣಿದು ಹ್ಯಾಂಗೋವರ್ ಆಯ್ತಾ? ತಲೆ ಧಿಂ ಅಂತಿದ್ಯಾ?

ಹೊಸ ವರ್ಷದ ಪಾರ್ಟಿ ಅಂತಲ್ಲ, ಮನೆಯಲ್ಲಿ ಏನಾದರೂ ಸಂಭ್ರಮಗಳಿದ್ದಾಗ, ಬರ್ತ್‌ಡೇಗಳಿದ್ದಾಗ ಪಾರ್ಟಿ ಮಾಡೋದು ಸಾಮಾನ್ಯ. ಈ ವೇಳೆ ಕೆಲವರಿಗೆ ಕುಡಿತ ಅತಿಯಾಗಿ ಹ್ಯಾಂಗೋವರ್‌ ಆಗುತ್ತಾರೆ. ಆದ್ರೆ ಕುಡಿಯೋ ಮೊದಲು ಇದನ್ನು ತಿಂದ್ರೆ ನಿಮಗೆ ಹ್ಯಾಂಗೋವರ್‌ ಆಗೋದೇ ಇಲ್ಲ. ಯಾರೆಲ್ಲಾ ಕುಡಿದು ಹ್ಯಾಂಗೋವರ್ ಅನುಭವಿಸುತ್ತಾರೋ ಅವರಿಗೆಲ್ಲ ಇದು ಉಪಯೋಗವಾಗಲಿದೆ.

ಈ ಆಹಾರಗಳು ನಿಮಗೆ ಹ್ಯಾಂಗೋವರ್ ಸಮಸ್ಯೆಯನ್ನು ನಿಯಂತ್ರಿಸುತ್ತವೆ.

ಡ್ರಿಂಕ್ಸ್‌ಗೆ ಮುನ್ನ ಚೀಸ್/ ಪನೀರ್ ತಿನ್ನಿ:

ಮದ್ಯಪಾನ ಮಾಡುವ ಮುನ್ನ ಚೀಸ್ ತಿಂದರೆ ಹ್ಯಾಂಗೋವರ್ ಸಮಸ್ಯೆ ಬರುವುದಿಲ್ಲ ಎನ್ನುತ್ತಾರೆ, ಡಾ. ಕಿಶೋರ್. ವೈದ್ಯರ ಪ್ರಕಾರ, ಚೀಸ್ ಪ್ರೊಟೀನ್, ಕೊಬ್ಬು ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಡೈರಿ ಉತ್ಪನ್ನವಾಗಿದೆ. ಚೀಸ್ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು B ಜೀವಸತ್ವಗಳು ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಹಾಗಾಗಿ ಮದ್ಯಪಾನ ಮಾಡುವ ಮುನ್ನ ಪನೀರ್ ಅಥವಾ ಚೀಸ್ ಐಟಂಗಳನ್ನು ತಿನ್ನುವುದು ಒಳ್ಳೆಯದು.

ಹಾಲಿನ ಉತ್ಪನ್ನವನ್ನು ಸೇವಿಸುವುದರಿಂದ ಮದ್ಯಪಾನದ ಪರಿಣಾಮವೂ ಕಡಿಮೆಯಾಗುತ್ತದೆ. ಚೀಸ್ ತಿಂದ ನಂತರ ಆಲ್ಕೋಹಾಲ್ ದೇಹವನ್ನು ಪ್ರವೇಶಿಸಿದಾಗ, ಅದು ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಪಾರ್ಟಿಯ ಮೊದಲು ತಿನ್ನುವುದು ಹ್ಯಾಂಗೋವರ್ ತಡೆಯಲು ಸಹಾಯ ಮಾಡುತ್ತದೆ.

ನೀರು ಕುಡಿಯಿರಿ:

ಪ್ರತಿ ಪೆಗ್ ನಂತರ ನೀರು ಕುಡಿಯುವುದು ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಒಂದು ಲೋಟ ಆಲ್ಕೋಹಾಲ್ ಕುಡಿದ ನಂತರ ಒಂದು ಲೋಟ ನೀರು ಕುಡಿಯುವುದರಿಂದ ಮದ್ಯದ ಪರಿಣಾಮ ದೇಹದ ಮೇಲೆ ಕಡಿಮೆ ಬೀರುತ್ತದೆ. ಇನ್ನು ಈ ವೇಳೆ ಕೂಲ್‌ಡ್ರಿಂಕ್ಸ್‌ನಂತಹ ಯಾವುದನ್ನೂ ಕುಡಿಯಬಾರದು.

ನಿಂಬೆ ರಸ ಸೇವಿಸಿ:

ಪಾರ್ಟಿಯಲ್ಲಿ ಆಲ್ಕೋಹಾಲ್ ಕುಡಿಯುವ ಜತೆಗೆ ನಿಂಬೆ ರಸವನ್ನು ಕುಡಿಯಬಹುದು ಎಂದು ವೈದ್ಯರು ಹೇಳುತ್ತಾರೆ. ಇದು ಮದ್ಯದ ಪರಿಣಾಮವನ್ನೂ ಕಡಿಮೆ ಮಾಡುತ್ತದೆ.

ತೆಂಗಿನ ನೀರು ಕುಡಿಯಿರಿ:

ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ ಮತ್ತು ರಾತ್ರಿ ಮಲಗುವ ಮೊದಲು ತೆಂಗಿನ ನೀರನ್ನು ಕುಡಿಯಿರಿ ಎಂದು ತಜ್ಞರು ಹೇಳುತ್ತಾರೆ.

ಆಲ್ಕೋಹಾಲ್‌ರಹಿತ ಜ್ಯೂಸ್ ಬೆಸ್ಟ್:

ಪಾರ್ಟಿ ಮಾಡಿದರೂ ಮದ್ಯಪಾನ ಮಾಡಬಾರದು, ಹ್ಯಾಂಗೋವರ್ ಆಗಬಾರದು ಅಂತಿದ್ದರೆ ಮುಂದಿನ ಹೊಸ ವರ್ಷಾಚರಣೆ ಅಥವಾ 2025ರಲ್ಲಿ ವಿವಿಧ ಪಾರ್ಟಿಗಳಲ್ಲಿ ಈ ಆಲ್ಕೋಹಾಲ್‌ರಹಿತ ಡ್ರಿಂಕ್ಸ್ ಟ್ರೈ ಮಾಡಿ.

ವಾಟರ್ ಮೆಲನ್ ಮಿಂಟ್ ಮಾಕ್ಟೈಲ್ (watermelon mint mocktail):

ಕಲ್ಲಂಗಡಿ, ನಿಂಬೆ ರಸ, ತಾಜಾ ಪುದೀನ ಎಲೆಗಳು ಮತ್ತು ಸಕ್ಕರೆ ಅಥವಾ ಜೇನುತುಪ್ಪವನ್ನು ಒಟ್ಟಿಗೆ ಬೆರೆಸಿ ಈ ಪಾನೀಯವನ್ನು ತಯಾರಿಸಲಾಗುತ್ತದೆ. ಪಾರ್ಟಿ ವೈಬ್ ನೀಡಲು ಈ ಡ್ರಿಂಕ್ಸ್‌ಗೆ ಸೋಡಾ ಕೂಡ ಬೆರೆಸಿ ಮಾಕ್‌ಟೈಲ್‌ ಮಾಡಿಕೊಂಡು ಕುಡಿಯಬಹುದು.

ಫ್ರೂಟ್ ಪಂಚ್ (Fruit Punch):

ಎಲ್ಲಾ ಸೀಸನ್ ಹಣ್ಣುಗಳನ್ನು ಸಣ್ಣ ಪೀಸ್‌ಗಳನ್ನಾಗಿ ಕತ್ತರಿಸಿ, ಇವುಗಳನ್ನು ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ ನಂತರ ಸೋಡಾ ಅಥವಾ ಫ್ರೆಶ್ ಫ್ರೂಟ್ ಜ್ಯೂಸ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಐಸ್ ಕ್ಯೂಬ್‌ಗಳನ್ನು ಸೇರಿಸಿ ಗ್ಲಾಸ್ನಲ್ಲಿ ಸರ್ವ್ ಮಾಡಿ.

ವರ್ಜಿನ್ ಮೊಜಿಟೊ (Virgin Mojito):

ವರ್ಜಿನ್ ಮೊಜಿಟೊ ಹೊಸ ವರ್ಷದ ಪಾರ್ಟಿಗೆ ಕಂಪ್ಲೀಟ್ ಡ್ರಿಂಕ್ ಆಗಿದೆ. ಇದನ್ನು ಪುದೀನ ಎಲೆಗಳು, ನಿಂಬೆ ರಸ, ಜೇನುತುಪ್ಪ ಮತ್ತು ಸೋಡಾವನ್ನು ಬೆರೆಸಿ ತಯಾರಿಸಲಾಗುತ್ತದೆ. ಇದರಲ್ಲೂ ವೆರೈಟಿ ಟೇಸ್ಟ್‌ಗಳಿದ್ದು, ಇವುಗಳನ್ನು ಕೂಡ ನೀವು ಟ್ರೈ ಮಾಡಬಹುದು.

Health Tips ಅಸಿಡಿಟಿಗೆ ಈ ಕಾಯಿ ರಾಮಬಾಣ: ಇದು ಎಷ್ಟು ಪ್ರಯೋಜನಕಾರಿ?

TAGGED:If you do thisthere will be no hangover!
Share This Article
Facebook Twitter Copy Link Print
Previous Article HAPPY NEW YEAR ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮಾಚರಣೆ
Next Article Another case in Mandya ಐಶ್ವರ್ಯ ಗೌಡ ವಿರುದ್ಧ ಮಂಡ್ಯದಲ್ಲಿ ಮತ್ತೊಂದು ಕೇಸ್: 40 ಲಕ್ಷ ರೂ. ವಂಚನೆ ಆರೋಪ

Popular Posts

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

You Might Also Like

ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read
ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read
ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?