newsics.com
ಬೆಂಗಳೂರು: ಪ್ರಖ್ಯಾತ ವಾಗ್ಮಿ, ಹಾಸ್ಯ ಭಾಷಣದಿಂದಲೇ ಜನಪ್ರಿಯರಾಗಿದ್ದ ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು(67) ಸೋಮವಾರ ನಿಧನರಾದರು.
ದೀರ್ಘ ಕಾಲದಿಂದ ಅನಾರೋಗ್ಯದಲ್ಲಿದ್ದ ಜಯಪ್ರಕಾಶ್ ಬರಗೂರು ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಜಯಪ್ರಕಾಶ್ ಬರಗೂರು ಅವರಿಗೆ ಕೆಲವು ವರ್ಷಗಳಿಂದ ಹೃದಯ ಸಮಸ್ಯೆ ಭಾದಿಸುತ್ತಿತ್ತು. ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದ ಹಾಗೂ ಹಾಲಿ ಸಂಸದರಾಗಿರುವ ಡಾ.ಸಿ.ಎನ್. ಮಂಜುನಾಥ್ ಜಯಪ್ರಕಾಶ್ ಅವರಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದರು. ಈ ಬಗ್ಗೆ ಸ್ವತಃ ಸುಧಾ ಬರಗೂರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಆದರೆ, ಹೃದಯ ಸಮಸ್ಯೆಯ ಕಾರಣದಿಂದಾಗಿಯೇ ಸಾವು ಕಂಡಿದ್ದಾರೆಯೇ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಜಯಪ್ರಕಾಶ್ ಬರಗೂರು ಅವರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ಮಂಗಳವಾರ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕತ್ರಿಗುಪ್ಪೆಯ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಳಿ ಇರುವ ಸುಧಾ ಬರಗೂರು ಅವರ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಬಗ್ಗೆ ಸ್ವತಃ ಸುಧಾ ಬರಗೂರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಆದರೆ, ಹೃದಯ ಸಮಸ್ಯೆಯ ಕಾರಣದಿಂದಾಗಿಯೇ ಸಾವು ಕಂಡಿದ್ದಾರೆಯೇ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಜಯಪ್ರಕಾಶ್ ಬರಗೂರು ಅವರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ಮಂಗಳವಾರ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕತ್ರಿಗುಪ್ಪೆಯ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಳಿ ಇರುವ ಸುಧಾ ಬರಗೂರು ಅವರ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಹಾಸ್ಯ ಕಾರ್ಯಕ್ರಮದಲ್ಲಿ ತಮ್ಮ ಪಟಪಟ ಮಾತುಗಳ ಮೂಲಕ ಜನಪ್ರಿಯರಾಗಿರುವ ಸುಧಾ ಬರಗೂರು, ಹಾಸ್ಯದ ಮೂಲಕವೇ ಸಮಾಜದ ಸಮಸ್ಯೆಗಳನ್ನು ಜನರ ಮುಂದಿಡುತ್ತಿರುವ ಸುಧಾ ಬರಗೂರು ಜೀವನದಲ್ಲೀಗ ಮೌನ ಆವರಿಸಿದೆ.
ಕಳೆದ ವರ್ಷ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ಅವರ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ವೇಳೆ ಸುಧಾ ಬರಗೂರು ಮಾತನಾಡಿದ್ದರು. ತಮ್ಮ ಪತಿ ಜಯಪ್ರಕಾಶ್ ಅವರು ಮಂಜುನಾಥ್ ಅವರ ಆರೈಕೆ ಹಾಗೂ ಚಿಕಿತ್ಸೆಯಿಂದಲೇ ಬದುಕುಳಿದಿದ್ದರು ಎಂಬ ಅಸಲಿ ಸಂಗತಿಯನ್ನು ತಿಳಿಸಿದ್ದರು.
ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ಅವರ ಹಾರ್ಟ್‌ನಲ್ಲಿ ಸಮಸ್ಯೆ ಇದ್ದ ದಿನದಲ್ಲಿ, ಅವರ ಪತಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಿದ್ದು ಡಾ. ಮಂಜುನಾಥ್ ಎಂದು ಸುಧಾ ಬರಗೂರು ಹೇಳಿದ್ದರು.