Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips ಹಳದಿ ಹಲ್ಲುಗಳಿಂದ ಮುಜುಗರ ಆಗ್ತಿದ್ಯಾ?: ಫಳಫಳ ಮಿಂಚಲು ಈ ರೀತಿ ಮಾಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

Health Tips ಹಳದಿ ಹಲ್ಲುಗಳಿಂದ ಮುಜುಗರ ಆಗ್ತಿದ್ಯಾ?: ಫಳಫಳ ಮಿಂಚಲು ಈ ರೀತಿ ಮಾಡಿ

Share
2 Min Read
SHARE

newsics.com

ಜನರು ಮೊದಲು ಗಮನಿಸುವುದೇ ನಮ್ಮ ಸ್ಮೈಲ್. ನಮ್ಮ ಹಲ್ಲುಗಳು ಹೃದಯಸ್ಪರ್ಶಿ ಸ್ಮೈಲ್‌ನ ಅವಶ್ಯಕ ಭಾಗವಾಗಿವೆ. ನಾವು ಹೆಚ್ಚಾಗಿ ಮುತ್ತಿನಂತೆ ಇರುವ ನಮ್ಮ ಹಲ್ಲುಗಳನ್ನು ನಿರ್ಲಕ್ಷಿಸುತ್ತೇವೆ. ನಮ್ಮ ಹಲ್ಲುಗಳು ಮತ್ತು ಬಾಯಿಯ ಆರೋಗ್ಯದ ಸ್ಥಿತಿ ನಮ್ಮ ಒಟ್ಟಾರೆ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.
ಹಲ್ಲುಗಳ ಹಳದಿ ತೆಗೆಯಲು ಹಲವರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಕಡಿಮೆ ಸಮಯದಲ್ಲಿ ನಿಮ್ಮ ಹಲ್ಲುಗಳಿಂದ ಹಳದಿ ಪದರವನ್ನು ತೆಗೆದುಹಾಕಲು ಈ ರೀತಿ ಮಾಡಿ. ಕೆಲವು ಆಹಾರಗಳನ್ನು ತಿನ್ನುವುದರಿಂದ ನಿಮ್ಮ ಹಲ್ಲುಗಳ ಮೇಲಿನ ಹಳದಿ ಬಣ್ಣದ ಪದರವು ತಾನಾಗಿಯೇ ಹೋಗುತ್ತದೆ. ಇದರಿಂದ ನಿಮ್ಮ ಹಲ್ಲುಗಳು ನೈಸರ್ಗಿಕವಾಗಿ ಮುತ್ತುಗಳಂತೆ ಬಿಳಿಯಾಗಿ ಕಾಣುತ್ತವೆ. ಅದಕ್ಕಾಗಿ ನೀವು ಇವುಗಳನ್ನು ತಿನ್ನಬೇಕು.

ಆರೋಗ್ಯಕರ ತರಕಾರಿಗಳಲ್ಲಿ ಬ್ರೊಕೊಲಿ ಕೂಡ ಒಂದು. ಇದರಲ್ಲಿ ಫೈಬರ್ ಹೇರಳವಾಗಿ ಸಿಗುತ್ತದೆ. ಬ್ರೊಕೊಲಿಯಲ್ಲಿರುವ ಗುಣಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಹಲ್ಲುಗಳ ಹಳದಿ ತೆಗೆಯಲು ಸಹಾಯ ಮಾಡುತ್ತವೆ.

ಹಲ್ಲುಗಳನ್ನು ಆರೋಗ್ಯವಾಗಿಡಲು ಕ್ಯಾಲ್ಸಿಯಂ ತುಂಬಾ ಮುಖ್ಯ. ಆದ್ದರಿಂದ ಕ್ಯಾಲ್ಸಿಯಂ ಹೆಚ್ಚಾಗಿರುವ ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ಹಲ್ಲುಗಳ ಬಿಳುಪನ್ನು ಕಾಪಾಡುತ್ತದೆ. ಹಲ್ಲುಗಳ ಹಳದಿ ತೆಗೆಯಲು, ನೀವು ಹಾಲು, ಮೊಸರು, ಚೀಸ್ ತಿನ್ನಬೇಕು. ಇವುಗಳಲ್ಲಿರುವ ಪೋಷಕಾಂಶಗಳು ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.

ನಿಮ್ಮ ಹಲ್ಲುಗಳು ಮುತ್ತುಗಳಂತೆ ಬಿಳಿಯಾಗಿ ಮಿಂಚಬೇಕೆಂದರೆ ಸ್ಟ್ರಾಬೆರಿಗಳನ್ನು ತಿನ್ನಬೇಕು. ಇದರಲ್ಲಿರುವ ಕಿಣ್ವಗಳು, ಮಾಲಿಕ್ ಆಮ್ಲವು ಹಲ್ಲುಗಳ ಹಳದಿ ಪದರವನ್ನು ತೆಗೆದುಹಾಕುತ್ತದೆ. ಇದರಿಂದ ನಿಮ್ಮ ಹಲ್ಲುಗಳು ಬಿಳಿಯಾಗುತ್ತವೆ.

ಹಲ್ಲುಗಳ ಬಿಳುಪನ್ನು ಕಾಪಾಡುವಲ್ಲಿ ಸಿಟ್ರಸ್ ಹಣ್ಣುಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಇದಕ್ಕಾಗಿ ನೀವು ಕಿತ್ತಳೆ ಜತೆಗೆ ಈ ಜಾತಿಗೆ ಸೇರಿದ ಹಣ್ಣುಗಳನ್ನು ಸೇವಿಸಬಹುದು. ಇವು ಬಾಯಿಯ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅಲ್ಲದೆ, ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಬಾಯಿ ಸ್ವಚ್ಛಗೊಳಿಸಲು ತುಂಬಾ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ. ಇದು ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಹಲ್ಲುಗಳು ಮತ್ತು ಒಸಡುಗಳನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಇದರೊಂದಿಗೆ ಹಲ್ಲುಗಳಲ್ಲಿ ಸಿಲುಕಿರುವ ಆಹಾರ ಕಣಗಳನ್ನು ತೆಗೆದುಹಾಕುತ್ತದೆ.

ಕೆಂಪು ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ಹಲ್ಲುಗಳು ಮತ್ತು ಒಸಡುಗಳು ಬಲಗೊಳ್ಳುತ್ತವೆ. ಅಲ್ಲದೆ, ಬಾಯಿ ವಾಸನೆ ದೂರವಾಗುತ್ತದೆ. ಹಲ್ಲುಗಳ ಹಳದಿ ಬಣ್ಣ ಕೂಡ ಹೋಗುತ್ತದೆ. ಇದರಿಂದ ನಿಮ್ಮ ಹಲ್ಲುಗಳು ಬಿಳಿಯಾಗಿ ಮಿಂಚುತ್ತವೆ.

Health Tips ಕಣ್ಣೀರಿನಲ್ಲಿ ಎಷ್ಟು ವಿಧ?: ಅಳು ಬರಲು ಕಾರಣವೇನು? ತಜ್ಞರು ಏನಂತಾರೆ?

TAGGED:Health Tips Embarrassed by yellow teeth?: Do this to make your teeth shine
Share This Article
Facebook Twitter Copy Link Print
Previous Article Plane crash ಅಂಗಡಿಗಳಿಗೆ ಅಪ್ಪಳಿಸಿದ ವಿಮಾನ: 10 ಪ್ರಯಾಣಿಕರು ಸಾವು, 12‌ ಮಂದಿಗೆ ಗಾಯ
Next Article Health Tips ಕಣ್ಣೀರಿನಲ್ಲಿ ಎಷ್ಟು ವಿಧ?: ಅಳು ಬರಲು ಕಾರಣವೇನು? ತಜ್ಞರು ಏನಂತಾರೆ?

Popular Posts

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read
ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?