newsics.com
ಇಂದಿನ ವೇಗದ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಹೈಸ್ಪೀಡ್ ಇಂಟರ್ನೆಟ್ ಅಗತ್ಯವಿದೆ. ಇದಕ್ಕಾಗಿ ಕೆಲವು ಉಪಯುಕ್ತ ತಂತ್ರಗಳ ಮೂಲಕ ನಿಮ್ಮ ಫೋನ್‌ನ ಇಂಟರ್ನೆಟ್ ವೇಗ ಹೆಚ್ಚಿಸುವುದು ಹೇಗೆ ಎಂಬುದನ್ನು ಹೇಳುತ್ತೇವೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕೇವಲ ಇಂಟರ್ನೆಟ್ ಸಮಸ್ಯೆ ಮಾತ್ರವಲ್ಲ ನೆಟ್ವರ್ಕ್ ತೊಂದರೆ ಅನುಭವಿಸುತ್ತಿದ್ದರೂ ಈ ಟ್ರಿಕ್ ಸಹಾಯ ಮಾಡಲಿದೆ. ಇದಕ್ಕೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಸಿಮ್ ಕಾರ್ಡ್ ಬಳಕೆಯ ವಿಧಾನವನ್ನು ಬದಲಾಯಿಸಬೇಕಾಗುತ್ತದೆ. ಸ್ಮಾರ್ಟ್ಫೋನ್ ಉಪಯೋಗಿಸುವ ಎಲ್ಲರಿಗೂ ಮೊದಲನೇ ಸಿಮ್ ಮತ್ತು ಎರಡನೇ ಸಿಮ್ ಎಂಬ ಒಂದು ಟ್ರೇ ಇರುವುದು ನೋಡಿರುತ್ತೀರಿ. ಈಗ ನೀವು ಮೊದಲನೇ ಸಿಮ್ ಟ್ರೇ ನಲ್ಲಿ ಯಾವ ಸಿಮ್ ಕಾರ್ಡ್ ಇದೆ ಮತ್ತು ಎರಡನೇ ಟ್ರೇನಲ್ಲಿ ಯಾವ ಸಿಮ್ ಕಾರ್ಡ್ ಇದೆ ಎಂಬುದನ್ನು ಪರಿಶೀಲಿಸಬೇಕು.
ನೀವು ಮೊದಲನೇ ಸಿಮ್ ಟ್ರೇನಲ್ಲಿ ಇಟ್ಟಿರುವ ಸಿಮ್ ಕೇವಲ ಕಾಲ್ಗಳಿಗೆ ಮಾತ್ರ ಮತ್ತು ಎರಡನೇ ಸಿಮ್ ಟ್ರೇನಲ್ಲಿ ಇರುವ ಸಿಮ್ ಇಂಟರ್ನೆಟ್ಗಾಗಿ ಮಾತ್ರ ಎಂದು ಉಪಯೋಗಿಸುತ್ತಿದ್ದರೆ ಅದು ದೊಡ್ಡ ತಪ್ಪು. ನಿಮ್ಮ ಸ್ಮಾರ್ಟ್ಫೋನ್ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಬಯಸಿದರೆ ಮೊದಲಿಗೆ ನೀವು ನಿಮ್ಮ ಸಿಮ್ ಕಾರ್ಡ್ಗಳನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಹೇಗೆಂದರೆ, ಇಂಟರ್ನೆಟ್ ಬಳಕೆಯ ಸಿಮ್ ಕಾರ್ಡ್ ಅನ್ನು ಮೊದಲನೇ ಸಿಮ್ ಟ್ರೇನಲ್ಲಿ ಮತ್ತು ಇನ್ನೊಂದು ಸಿಮ್ ಕಾರ್ಡ್ ಎರಡನೇ ಟ್ರೇನಲ್ಲಿ ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.
ಸಿಮ್ ಟ್ರೇ ಒಂದರಲ್ಲಿ ಡೇಟಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕರೆ ಸಿಮ್ ಟ್ರೇ ಒಂದರಲ್ಲಿ ಮತ್ತು ಡೇಟಾ ಸಿಮ್ ಟ್ರೇ ಎರಡರಲ್ಲಿ ಇದ್ದರೆ, ನೀವು ಅದನ್ನು ಡೇಟಾ ಸಿಮ್ ಟ್ರೇ ಒಂದಕ್ಕೆ ಬದಲಾಯಿಸಬೇಕು. ಈ ರೀತಿ ಮಡುವುದರಿಂದ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ವೇಗವು ಅಧಿಕವಾಗುತ್ತದೆ. ಅಂತೆಯೆ ಇಂಟರ್‌ನೆಟ್ ಬಳಸುವ ಸಿಮ್ ನೆಟ್‌ವರ್ಕ್ APN ಅನ್ನು ಬದಲಾಯಿಸಿ ಕೂಡ ನೆಟ್‌ವರ್ಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.