newsics.com
ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಜತ್ ಆರ್ಭಟ ಹೆಚ್ಚಾಗಿದೆ. ಕಳೆದ ಸಂಚಿಕೆಯಲ್ಲಿಯೂ ಗೌತಮಿ ಜತೆ ಗುದ್ದಾಡಿದ್ದರು. ಮಾತಿನ ಬಗ್ಗೆ ಗಮನ ಇರಲಿ ಎಂದು ಸುದೀಪ್ ಹೇಳಿದ್ದರು.
ಇದೀಗ ಹೊಸ ಪ್ರೋಮೊ ಔಟ್ ಆಗಿದೆ. ಒಂದು ಟಾಸ್ಕ್ ಬಿಗ್ ಬಾಸ್ ನೀಡಿತ್ತು. ತಮ್ಮೊಳಗೆ ಚರ್ಚಿಸಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ರಜತ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ ತ್ರಿವಿಕ್ರಮ್ ತಂಡ.
ಇಲ್ಲಿ ಎಲ್ಲರನ್ನು ವೈಯಕ್ತಿಕವಾಗಿ ಆಡಿ ಎಂದು ಪ್ರವೋಕ್ ಮಾಡುತ್ತಾರೆ. ಅವರನ್ನೇ ಅವರು ಮೇಲು ಅಂದುಕೊಂಡಿದ್ದಾರೆ ಎಂದು ತ್ರಿವಿಕ್ರಮ್ ಕಾರಣ ಕೊಟ್ಟರು. ಅದಕ್ಕೆ ರಜತ್ ಅವರು ನಾನೇ ಹೀರೋ, ನಾನೇ ಕರಾಬು, ನಾಮಿನೇಟ್ ಮಾಡಿ ಬಿಟ್ರೆ ಚೇಂಜ್ ಆಗ್ತೀನಾ ನಾನು? ಬೇರೆಯವರನಾ ಹೀರೋ ಅಂತಿನಾ? ನಾನೇ ಹೀರೋ ಎಂದು ಅಬ್ಬರಿಸಿದ್ದಾರೆ.
ಹೌದು, ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಅವರು ತಮ್ಮ ಉಗ್ರಾವತಾರ ತೋರಿಸುತ್ತಿದ್ದಾರೆ. ಅವರ ಮಾತಿನ ಬಗ್ಗೆ ಗಮನ ಇರಲಿ ಎಂದು ಸುದೀಪ್ ಹೇಳಿದ್ದರು. ಆದರೆ, ಈ ಮಾತುಗಳಿಗೆ ರಜತ್ ಅವರು ಕಿಮ್ಮತ್ತು ನೀಡಿಲ್ಲ. ಈಗ ಅವರನ್ನೇ ನಾಮಿನೇಟ್ ಮಾಡಲಾಗಿದೆ.
‘
https://www.instagram.com/reel/DDqXVWEvZZC/?igsh=ajY5d2N0aTlzaDN6