Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Menstrual fluctuations | ಋತುಚಕ್ರ ಏರುಪೇರಾಗ್ತಿದ್ಯಾ? ಮುಟ್ಟು ಹೆಚ್ಚು ಕಮ್ಮಿಯಾಗಲು ಈ ಅಂಶಗಳೇ ಕಾರಣ!
ಆರೋಗ್ಯಪ್ರಮುಖಲೈಫ್‌ಸ್ಟೈಲ್

Menstrual fluctuations | ಋತುಚಕ್ರ ಏರುಪೇರಾಗ್ತಿದ್ಯಾ? ಮುಟ್ಟು ಹೆಚ್ಚು ಕಮ್ಮಿಯಾಗಲು ಈ ಅಂಶಗಳೇ ಕಾರಣ!

Share
2 Min Read
SHARE

newsics.com

ಮಹಿಳೆಯ ಋತುಚಕ್ರವು ಆಕೆಯ ಸಂತಾನೋತ್ಪತ್ತಿ ಆರೋಗ್ಯದ ಸೂಚನೆಯಾಗಿದೆ. ಯಾವುದಾದರೂ ಒಂದು ತಿಂಗಳು ಮುಟ್ಟಾಗದಿದ್ದರೆ (ಪಿರಿಯಡ್) ಗರ್ಭಧಾರಣೆಯನ್ನು (Pregnancy) ಖಚಿತಪಡಿಸಿಕೊಳ್ಳಲು ಪರೀಕ್ಷೆ ಮಾಡಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ಯಾವುದೇ ರಕ್ತಸ್ರಾವ ಆಗುವುದಿಲ್ಲ. ಆದರೆ, ಕೆಲವು ಮಹಿಳೆಯರು ಗರ್ಭಿಣಿಯಾಗದಿದ್ದರೂ ತಡವಾಗಿ ಮುಟ್ಟಾಗುತ್ತಾರೆ. ಇದರಿಂದ ಮಹಿಳೆಯರು ಆತಂಕಕ್ಕೊಳಗಾಗುತ್ತಾರೆ. ಇದು ಹಾರ್ಮೋನುಗಳ ಅಸಮತೋಲನ ಮತ್ತು ಆರೋಗ್ಯ ಸಮಸ್ಯೆಗಳಿಂದ ಉಂಟಾಗುತ್ತದೆ.

ಶೇ.5ರಿಂದ ಶೇ. 35.6 ರಷ್ಟು ಮಹಿಳೆಯರಲ್ಲಿ ಅವರ ವಯಸ್ಸು ಮತ್ತು ವೃತ್ತಿಯ ಆಧಾರದ ಮೇಲೆ ಈ ಸಮಸ್ಯೆ ಕಂಡುಬರುತ್ತದೆ. ಆದರೆ ಗರ್ಭಿಣಿಯಾಗದಿದ್ದರೂ ಮುಟ್ಟು ವಿಳಂಬವಾದರೆ ನೀವು ಯೋಚಿಸಲೇಬೇಕು. ಇದಕ್ಕೆ ಈ 7 ಪ್ರಮುಖ ಕಾರಣಗಳಿರಬಹುದು.

ಸ್ಥೂಲಕಾಯ

ಇತ್ತೀಚಿನ ದಿನಗಳಲ್ಲಿ ದೊಡ್ಡವರು, ಚಿಕ್ಕವರು ಎಂಬ ವಯಸ್ಸಿನ ಭೇದ-ಭಾವವಿಲ್ಲದೇ ಅನೇಕ ಮಂದಿ ಬೊಜ್ಜು ಮತ್ತು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಸ್ಥೂಲಕಾಯತೆಯು ಮಹಿಳೆಯರ ದೇಹದಲ್ಲಿ ಪ್ರಮುಖ ಸಂತಾನೋತ್ಪತ್ತಿ ಹಾರ್ಮೋನ್ ಈಸ್ಟ್ರೊಜೆನ್ ಉತ್ಪಾದನೆ ಹೆಚ್ಚಿಸಲು ಕಾರಣವಾಗಬಹುದು. ಅತಿಯಾಗಿ ಬಿಡುಗಡೆಯಾಗುವ ಈಸ್ಟ್ರೊಜೆನ್ ಋತುಚಕ್ರದ ಅಡ್ಡಿಗೆ ಕಾರಣವಾಗಬಹುದು. ಈಸ್ಟ್ರೊಜೆನ್ ಬಿಡುಗಡೆಯು ಮುಟ್ಟನ್ನು ಸಂಪೂರ್ಣವಾಗಿ ನಿಲ್ಲಿಸುವುದಕ್ಕೆ ಕಾರಣವಾಗಬಹುದು. ಇದು ತೂಕ ಹೆಚ್ಚಳದ ಕಾರಣದಿಂದ ತಡವಾಗಿ ಮುಟ್ಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆಹಾರ ಮತ್ತು ವ್ಯಾಯಾಮದಂತಹ ಜೀವನಶೈಲಿಯ ಬದಲಾವಣೆ ಮೂಲಕ ತೂಕ ಇಳಿಸಿಕೊಳ್ಳಬಹುದು.

ಅತಿಯಾದ ವ್ಯಾಯಾಮ

ಅತಿಯಾಗಿ ವ್ಯಾಯಾಮ ಮಾಡುವುದು ಅಪಾಯಕಾರಿ. ಕೆಲ ಮಹಿಳೆಯರು ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡುವುದರೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅತಿಯಾದ ವ್ಯಾಯಾಮದಿಂದ, ದೇಹವು ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಸಂತಾನೋತ್ಪತ್ತಿ ಹಾರ್ಮೋನುಗಳ ಬಿಡುಗಡೆಗೆ ಅಡ್ಡಿಯನ್ನು ಉಂಟುಮಾಡುತ್ತದೆ. ಇದರಿಂದ ಮುಟ್ಟು ವಿಳಂಬವಾಗುತ್ತದೆ. ಅಲ್ಲದೆ ಅಮೆನೋರಿಯಾ ಎಂಬ ಸಮಸ್ಯೆ ಉಂಟಾಗುತ್ತದೆ ಮತ್ತು ಮೂಳೆ ದೌರ್ಬಲ್ಯ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್)

ಹಲವು ಮಹಿಳೆಯರು ಇತ್ತೀಚೆಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಇರುವವರಲ್ಲಿ ಮುಟ್ಟು ವಿಳಂಬವಾಗಬಹುದು ಅಥವಾ ಸಂಪೂರ್ಣವಾಗಿ ನಿಲ್ಲಬಹುದು. PCOS ನ ಲಕ್ಷಣಗಳು ಅನಿಯಮಿತ ಮುಟ್ಟು, ಅತಿಯಾದ ಕೂದಲು ಬೆಳವಣಿಗೆ, ಮೊಡವೆ ಮತ್ತು ತೂಕ ಹೆಚ್ಚಳವನ್ನುಂಟುಮಾಡಬಹುದು.

ಒತ್ತಡ, ಆತಂಕ

ಬದಲಾದ ಜೀವನಶೈಲಿ ಮಹಿಳೆಯರಲ್ಲಿ ಒತ್ತಡ ಹೆಚ್ಚುತ್ತಿದ್ದು, ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಜತೆಗೆ ದೇಹದ ತೂಕ ಏರುಪೇರಾಗುತ್ತದೆ. ಒತ್ತಡವು ಮಹಿಳೆಯರಲ್ಲಿ ಋತುಚಕ್ರವನ್ನು ಅಡ್ಡಿಪಡಿಸುತ್ತದೆ. ದೀರ್ಘಕಾಲದ ಒತ್ತಡವು ಇತರ ಆರೋಗ್ಯ ಸಮಸ್ಯೆಗಳ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಒತ್ತಡ ಮತ್ತು ಆತಂಕವನ್ನು ಹೋಗಲಾಡಿಸಲು ಯೋಗ ಮತ್ತು ಧ್ಯಾನ ಸಹಕಾರಿ.

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆ ಇರುವವರಿಗೂ ಸಮಯಕ್ಕೆ ಸರಿಯಾಗಿ ಪಿರಿಯಡ್ಸ್ ಆಗುವುದಿಲ್ಲ. ಥೈರಾಯ್ಡ್ ಗ್ರಂಥಿಯು ಮಾನವ ದೇಹದ ಚಯಾಪಚಯವನ್ನು ನಿಯಂತ್ರಿಸುತ್ತದೆ. ಆದ್ದರಿಂದ, ಹಾರ್ಮೋನ್ ಮಟ್ಟವು ಏರುಪೇರಾಗುವ ಸಾಧ್ಯತೆಯಿದೆ. ಈ ಬದಲಾವಣೆಗಳು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು ಹಾಗೂ ಮುಟ್ಟನ್ನು ನಿಲ್ಲಿಸಲು ಕಾರಣವಾಗಬಹುದು.

ಹಾರ್ಮೋನ್ ಅಸಮತೋಲನ

ಹಾರ್ಮೋನ್ ಅಸಮತೋಲನ ಮಹಿಳೆಯರಲ್ಲಿ ಅನಿಯಮಿತ ಅವಧಿಗೆ (ಪಿರಿಯಡ್ಸ್) ಕಾರಣವಾಗುತ್ತದೆ. ಕೆಲವೊಮ್ಮೆ ತಡವಾಗಿ ಮುಟ್ಟು ಸಂಭವಿಸಿ ಕ್ರಮೇಣ ಸಂಪೂರ್ಣವಾಗಿ ನಿಲ್ಲುವ ಅಪಾಯವಿದೆ.

ಪ್ರೊಲ್ಯಾಕ್ಟಿನ್ ಅಧಿಕ ಉತ್ಪಾದನೆ

ಹಾಲುಣಿಸುವ ಸಮಯದಲ್ಲಿ ಸಾಮಾನ್ಯವಾಗಿ ಉತ್ಪತ್ತಿಯಾಗುವ ಪ್ರೊಲ್ಯಾಕ್ಟಿನ್ ಹಾರ್ಮೋನ್ ಪಿರಿಯಡ್ ಸರ್ಕಲ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹಲವು ಹಾಲುಣಿಸುವ (ಸ್ತನ್ಯಪಾನ) ಮಹಿಳೆಯರಲ್ಲಿ ಮುಟ್ಟು ಬರುವುದಿಲ್ಲ ಅಥವಾ ಅನಿಯಮವಾಗಿರುತ್ತದೆ.

Chanakya Neeti | ಮಹಿಳೆಯ‌ ಮೈಮಾಟ ನೋಡಿಯೇ ಹೇಳಬಹುದು ಆಕೆಯ ಸ್ವಭಾವ!

TAGGED:These factors are the reason for the lack of menstruation!
Share This Article
Facebook Twitter Copy Link Print
Previous Article Cricket Stadium | ತುಮಕೂರಿನಲ್ಲಿ ನಿರ್ಮಾಣಗೊಳ್ಳಲಿದೆ 150 ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
Next Article Today’s Almanac | ಶುಭೋದಯ… ಇಂದಿನ ಪಂಚಾಂಗ, ಕಾರ್ತೀಕ ಮಾಸ ಕೃಷ್ಣ ಪಕ್ಷ ಚತುರ್ದಶಿ, 30-11-2024, ಶನಿವಾರ, ದರ್ಶ ಅಮಾವಾಸ್ಯೆ

Popular Posts

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

You Might Also Like

ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read
ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?