Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Research Tragedy ಸಂಶೋಧನೆ ವೇಳೆ ಮಣ್ಣು ಕುಸಿದು ಪಿಎಚ್‌ಡಿ ವಿದ್ಯಾರ್ಥಿನಿ ಜೀವಂತ ಸಮಾಧಿ, ಪ್ರೊಫೆಸರ್ ಸ್ಥಿತಿ ಗಂಭೀರ, ವಿಡಿಯೋ ನೋಡಿ
ದೇಶಪ್ರಮುಖ

Research Tragedy ಸಂಶೋಧನೆ ವೇಳೆ ಮಣ್ಣು ಕುಸಿದು ಪಿಎಚ್‌ಡಿ ವಿದ್ಯಾರ್ಥಿನಿ ಜೀವಂತ ಸಮಾಧಿ, ಪ್ರೊಫೆಸರ್ ಸ್ಥಿತಿ ಗಂಭೀರ, ವಿಡಿಯೋ ನೋಡಿ

Share
1 Min Read
SHARE

newsics.com

ಅಹಮದಾಬಾದ್: ದಿಢೀರ್ ಮಣ್ಣು ಕುಸಿದ ಪರಿಣಾಮ ಸಂಶೋಧನೆ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಜೀವಂತ ಸಮಾಧಿಯಾದ ಘಟನೆ ಗುಜರಾತ್‌ನ ಲೋಥಾಲ್‌ನಲ್ಲಿ ನಡೆದಿದೆ.

ಪುರಾತತ್ವ ಇಲಾಖೆಯ ಸ್ಥಳದಲ್ಲಿ ಬುಧವಾರ ಬೆಳಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ದಿಢೀರ್ ಮಣ್ಣು ಕುಸಿದು ಐಐಟಿ ದೆಹಲಿಯ ವಿದ್ಯಾರ್ಥಿನಿ ಸುರಭಿ ವರ್ಮಾ(23) ಮೃತಪಟ್ಟಿದ್ದಾರೆ. ಇತರೆ ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ದೆಹಲಿ ಐಐಟಿಯ ಪ್ರೊಫೆಸರ್ ಯಮಾ ದೀಕ್ಷಿತ್ (45) ಎಂಬುವರ ಆರೋಗ್ಯ ಗಂಭೀರವಾಗಿದೆ. ದೀಕ್ಷಿತ್ ಐಐಟಿ ದೆಹಲಿಯ ವಾತಾವರಣ ವಿಜ್ಞಾನ ಕೇಂದ್ರದಲ್ಲಿ (ಸಿಎಎಸ್) ಸಹಾಯಕ ಪ್ರಾಧ್ಯಾಪಕರಾಗಿದ್ದು, ಸುರಭಿ ವರ್ಮಾ ಅವರ ನಿರ್ದೇಶನದಲ್ಲಿ ಸಂಶೋಧನೆ ನಡೆಸುತ್ತಿದ್ದರು. ತಂಡದ ಇತರ ಇಬ್ಬರು ಸದಸ್ಯರಾದ ಅಸೋಸಿಯೇಟ್ ಪ್ರೊಫೆಸರ್ ವಿ.ಎನ್.ಪ್ರಭಾಕರ್ ಮತ್ತು ಹಿರಿಯ ಸಂಶೋಧಕಿ ಶಿಖಾ ರೈ ಕೂಡ ಸ್ಥಳದಲ್ಲಿದ್ದರು.

ಅಹಮದಾಬಾದ್‌ನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಪುರಾತನ ಸಿಂಧೂ ನಾಗರಿಕತೆಯ ಸ್ಥಳದಲ್ಲಿ ಸಂಶೋಧನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಐಐಟಿ ದೆಹಲಿ ಮತ್ತು ಐಐಟಿ ಗಾಂಧಿನಗರದ ತಲಾ ಇಬ್ಬರು ಸೇರಿ ನಾಲ್ವರು ಸಂಶೋಧಕರ ತಂಡ ಅಧ್ಯಯನಕ್ಕಾಗಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲು ಹರಪ್ಪ ಬಂದರು ನಗರ ಲೋಥಾಲ್‌ಗೆ ತೆರಳಿತ್ತು. ಮಣ್ಣು ಪರೀಕ್ಷೆಗೆಂದು ತೆಗೆದ 10 ಅಡಿ ಆಳದ ಗುಂಡಿಗೆ ನಾಲ್ವರೂ ಇಳಿದಿದ್ದಾರೆ. ಈ ವೇಳೆ ಹಠಾತ್ ಗೋಡೆ ಕುಸಿದು ಮಣ್ಣಿನ ರಾಶಿಯಡಿಯಲ್ಲಿ ಎಲ್ಲರೂ ಹೂತು ಹೋಗಿದ್ದರು.

ಸಂಶೋಧಕಿ ಸುರಭಿ ವರ್ಮಾ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಓಂಪ್ರಕಾಶ್ ಜಾಟ್ ಮಾಹಿತಿ ನೀಡಿದ್ದಾರೆ.

ಮಣ್ಣು ಜಿಗುಟಾಗಿದ್ದುದರಿಂದ ಮತ್ತು ನೀರಿನ ಮಟ್ಟ ಹಠಾತ್ ಏರಿದ್ದರಿಂದ ಕೆಸರಿನಲ್ಲಿ ಮುಳುಗಿದ್ದ ಸುರಭಿ ವರ್ಮಾ ಹೊರ ಬರಲಾರದೇ ಉಸಿರುಗಟ್ಟಿ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

https://twitter.com/i/status/1861821485633118476

https://x.com/DeshGujarat/status/1861746585216123287?t=PVT7gkhb-nvpphML512p6w&s=19

Killed live in partner ಲಿವ್ ಇನ್ ಸಂಗಾತಿ‌ ಮೇಲೆ ಅತ್ಯಾಚಾರ, 50 ಪೀಸ್ ಮಾಡಿ ಕೊಂದು ಕಾಡಲ್ಲಿ‌ ಬಿಸಾಡಿದ ಆರೋಪಿ! ಕಾರಣ ಏನು?

Gold and Silver Price ಚಿನ್ನ ತುಸು ಅಗ್ಗ, ಬೆಳ್ಳಿ‌ ಬೆಲೆಯಲ್ಲಿಲ್ಲ ವ್ಯತ್ಯಾಸ

TAGGED:During the researchthe professor's condition is criticalthe soil collapsed and the PhD student was buried alive
Share This Article
Facebook Twitter Copy Link Print
Previous Article Killed live in partner ಲಿವ್ ಇನ್ ಸಂಗಾತಿ‌ ಮೇಲೆ ಅತ್ಯಾಚಾರ, 50 ಪೀಸ್ ಮಾಡಿ ಕೊಂದು ಕಾಡಲ್ಲಿ‌ ಬಿಸಾಡಿದ ಆರೋಪಿ! ಕಾರಣ ಏನು?
Next Article Daily Prediction ದಿನ ಭವಿಷ್ಯ, 28-11-2024, ಗುರುವಾರ, ಮೇಷ: ಸಂಗಾತಿ ಜತೆ ವಾದ ಬೇಡ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?