Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಟೇಸ್ಟ್ > Kaju Katli Controversy ಕಾಜು ಕತ್ಲಿ ಸ್ವೀಟ್ ಮಾಂಸಾಹಾರಿ ಅಂತಿದಾರೆ, ನಿಜಾನಾ? ವೈದ್ಯರ ವಿಡಿಯೋದಿಂದ ಮತ್ತೆ ಸೃಷ್ಟಿಯಾಯ್ತು ವಿವಾದ
ಅನಾವರಣಟೇಸ್ಟ್ದೇಶಪ್ರಮುಖವಿದೇಶವೈರಲ್

Kaju Katli Controversy ಕಾಜು ಕತ್ಲಿ ಸ್ವೀಟ್ ಮಾಂಸಾಹಾರಿ ಅಂತಿದಾರೆ, ನಿಜಾನಾ? ವೈದ್ಯರ ವಿಡಿಯೋದಿಂದ ಮತ್ತೆ ಸೃಷ್ಟಿಯಾಯ್ತು ವಿವಾದ

Share
2 Min Read
SHARE

newsics.com

ಭಾರತದಲ್ಲಿ ಸಖತ್ ಫೇಮಸ್ ಆಗಿರುವ ಕಾಜು ಕತ್ಲಿ ಸ್ವೀಟ್ ಈಗ ವಿವಾದಕ್ಕೆ ಸಿಲುಕಿದೆ. ಏನಿದು ಕಾಜು ಕತ್ಲಿ ಸ್ವೀಟ್ ವಿವಾದ?
ವಿಶೇಷ ದಿನಗಳಲ್ಲಿ ಕೊಡುವ ಕಾಜು ಕತ್ಲಿಯನ್ನು ಇಲ್ಲಿಯವರೆಗೆ ಎಲ್ಲರೂ ಸಸ್ಯಾಹಾರಿ ಎಂದು ನಂಬಿದ್ದರು. ಈಗಲೂ ಈ ತಿನಿಸು ಮಾಂಸಾಹಾರಿ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ. ಆದರೆ ಸ್ವತಃ ವೈದ್ಯರೇ ಇದನ್ನು ಮಾಂಸಾಹಾರಿ ಎನ್ನುತ್ತಿದ್ದಾರೆ.

ಕಾಜು ಕತ್ಲಿ ಮೇಲೆ ಸಿಲ್ವರ್‌ ಪೇಪರ್ ಅಂಟಿಸಲಾಗುತ್ತದೆ. ಸಾಮಾನ್ಯವಾಗಿ ಈ ಸಿಲ್ವರ್ ಪೇಪರ್ ಪ್ರಾಣಿ ಉತ್ಪನ್ನದಿಂದ ತಯಾರಾಗುತ್ತದೆ. ಆದರೆ FSSAI ಕಾಜು ಕತ್ಲಿಗೆ ಪ್ರಾಣಿ ಉತ್ಪನ್ನದಿಂದ ತಯಾರಿಸುವ ಸಿಲ್ವರ್ ಪೇಪರ್ ಅಂಟಿಸುವುದನ್ನು ನಿಷೇಧಿಸಿತ್ತು. ನಂತರ ಸಸ್ಯಾಹಾರಿ ಸಿಲ್ವರ್ ಪೇಪರ್ ತಯಾರಿಸುವ ಕ್ರಮ ರೂಢಿಗೆ ಬಂತು.

ವೈರಲ್ ವಿಡಿಯೊ ವಿವಾದ:

ಕಾಜು ಕತ್ಲಿ ಗೋಡಂಬಿ ಪೇಸ್ಟ್, ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಿದ ಸಿಹಿತಿಂಡಿ, ಭಾರತೀಯ ಹಬ್ಬಗಳು ಮತ್ತು ಆಚರಣೆಗಳಲ್ಲಿ ಈ ಸಿಹಿ ತಿನಿಸು ಪ್ರಧಾನವಾಗಿದೆ. ಯುಎಸ್‌ ಬೋರ್ಡ್ ಪ್ರಮಾಣೀಕೃತ ಹೆಮಟಾಲಜಿಸ್ಟ್, ಆಂಕೊಲಾಜಿಸ್ಟ್ ಡಾ. ರವಿ ಕೆ. ಗುಪ್ತಾ ಅವರ ವೈರಲ್ ಆದ ವಿಡಿಯೊ ಪ್ರಕಾರ, ಕಾಜು ಕತ್ಲಿ ಮಾಂಸಾಹಾರಿ. ಇದಕ್ಕೆ ಕಾರಣ ಕಾಜು ಕಟ್ಲಿ ಮೇಲೆ ಅಂಟಿಸುವ ಸಿಲ್ವರ್ ಪೇಪರ್‌. ಇದು ಹಸು, ಎಮ್ಮೆಯಂತಹ ಪ್ರಾಣಿಯ ಕರುಳಿನಿಂದ ಮಾಡಲಾಗುತ್ತದೆ ಎಂದು ಅವರು ತಮ್ಮ ವಿಡಿಯೊದಲ್ಲಿ ಹೇಳಿದ್ದರು.

2016ರಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನೈರ್ಮಲ್ಯವಲ್ಲದ ಪರಿಸ್ಥಿತಿಗಳಲ್ಲಿ ಪ್ರಾಣಿ ಮೂಲದ ವಸ್ತುಗಳಿಂದ ಸಿಲ್ವರ್ ಪೇಪರ್ ತಯಾರಿಸುವುದನ್ನು ನಿಷೇಧಿಸಿತು. ಸಿಹಿತಿಂಡಿಗಳ ಮೇಲೆ ಕಂಡುಬರುವ ಈ ಸಿಲ್ವರ್ ಪೇಪರ್‌ ಪ್ರಾಣಿ ಮೂಲದ ಪದಾರ್ಥಗಳಿಂದ ಕೂಡ ತಯಾರಿಸಲಾಗುತ್ತದೆ. ಆದರೆ ದೆಹಲಿ ನ್ಯಾಯಾಲಯವು 2018ರಲ್ಲಿ ಈ ನಿಷೇಧವನ್ನು ತೆಗೆದುಹಾಕಿತು. ಸಿಲ್ವರ್ ಪೇಪರ್ ತಯಾರಕರು ಸುರಕ್ಷಿತ ಮತ್ತು ನೈರ್ಮಲ್ಯ ಎಂದು ಮನವಿ ಮಾಡಿದ ನಂತರ ನ್ಯಾಯಾಲಯವು ನಿಷೇಧವನ್ನು ಹಿಂತೆಗೆದುಕೊಂಡಿತು.

ಹೀಗಾಗಿ ಸಸ್ಯಾಹಾರಿ ವಿಧಾನದಲ್ಲೇ ಸಿಲ್ವರ್ ಪೇಪರ್ ತಯಾರಿಸಿ ಕಾಜು ಕತ್ಲಿಯನ್ನು ಸಸ್ಯಾಹಾರಿ‌ ಮಾಡಲು ಯತ್ನಿಸಲಾಗಿದೆ. ತಯಾರಕರು ಬಹುಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಈ ಸಿಲ್ವರ್ ಪೇಪರ್‌ ಅನ್ನು ಸಸ್ಯಾಹಾರಿ ರೀತಿಯಲ್ಲಿ ಮಾಡಲು ಪ್ರಾರಂಭಿಸಲಾಗಿದೆ. ಆದರೆ ಮಾಂಸ ಆಧಾರಿತ ಪದಾರ್ಥಗಳಿಂದ ತಯಾರಿಸಿದ ಸಿಲ್ವರ್ ಪೇಪರ್‌ ಬಳಕೆ ಇನ್ನೂ ಇವೆ. ಈ ಕಾಜು ಕತ್ಲಿಯ ಮೇಲಿನ ಬೆಳ್ಳಿಯ ಹಾಳೆ ಯಾವುದರಿಂದ ಮಾಡಲ್ಪಟ್ಟಿದೆ ಎಂದು ಊಹಿಸುವುದು ಕಷ್ಟ. ಇದನ್ನು ಮಾಂಸಾಹಾರಿ ಪ್ರಾಣಿ ಮೂಲದ ಪದಾರ್ಥಗಳೊಂದಿಗೆ ಕೂಡ ತಯಾರಿಸಬಹುದು ಅಥವಾ ಬಹುಶಃ ಸಸ್ಯಾಹಾರಿ ರೀತಿಯಲ್ಲೂ ಮಾಡಲಾಗುತ್ತದೆ. ಪ್ರಾಣಿ ಮೂಲದ ಪದಾರ್ಥಗಳಿಂದ ತಯಾರಿಸಿದರೆ ಮಾಂಸಾಹಾರ ಸೇವನೆಗೆ ದಾರಿಯಾಗುತ್ತದೆ ಎಂಬುದು ಡಾ. ರವಿ ಗುಪ್ತಾ ವಾದ.

ಸ್ವೀಟ್ ಮೇಲಿನ ಸಿಲ್ವರ್ ಪೇಪರ್‌ ಯಾವುದರಿಂದ ಮಾಡಲ್ಪಟ್ಟಿದೆ ಎಂದು ಸಿಹಿತಿನಿಸು ಮಾರಾಟ ಮಾಡುವವರನ್ನು ಕೇಳಿ. ಆದರೆ ಅವರು ಸರಿಯಾದ ಉತ್ತರ ನೀಡುತ್ತಾರೆ ಎಂಬ ವಿಶ್ವಾಸವಿಲ್ಲ. ಹಾಗಾಗಿ ಕಾಜು ಕತ್ಲಿಯನ್ನು ಸಿಲ್ವರ್ ಪೇಪರ್‌ನೊಂದಿಗೆ ತಿನ್ನಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ನಿಮ್ಮದೇ. ಕೆಲವೆಡೆ ಸಿಲ್ವರ್ ಪೇಪರ್ ಬಳಸದೆ ಕಾಜು ಕತ್ಲಿ ಮಾರಾಟ ಮಾಡಲಾಗುತ್ತಿದೆ. ಒಟ್ಟಿನಲ್ಲಿ ವೈದ್ಯರು ಹಂಚಿಕೊಂಡಿರುವ ವಿಡಿಯೋ ಕಾಜು ಕತ್ಲಿಯನ್ನು ಮತ್ತೊಮ್ಮೆ ವಿವಾದದ ಕಟಕಟೆಯಲ್ಲಿ ನಿಲ್ಲಿಸಿರುವುದಂತೂ ಸತ್ಯ.

TAGGED:Is kaju kathli sweet non-vegetarian? Controversy created again by doctor's video
Share This Article
Facebook Twitter Copy Link Print
Previous Article Boy death ಒಟ್ಟಿಗೇ ಮೂರು ಪೂರಿ ತಿನ್ನಲು ಯತ್ನಿಸಿದ ಬಾಲಕ ಉಸಿರುಗಟ್ಟಿ ಸಾವು!
Next Article Today’s Almanac ಶುಭೋದಯ, ಇಂದಿನ‌ ಪಂಚಾಂಗ, ಕಾರ್ತೀಕ ಮಾಸ ಕೃಷ್ಣ ಪಕ್ಷ ದ್ವಾದಶಿ, 27-11-2024, ಬುಧವಾರ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?