newsics.com
ನವದೆಹಲಿ : ಗ್ರ್ಯಾಂಡ್ ಆಗಿ ಇನ್ವಿಟೇಷನ್ ಮಾಡ್ಸಿ, ಊರಿಗೆಲ್ಲಾ ಹಂಚಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಹುಡುಗನ ತಾಯಿ, ಹುಡುಗಿ ಸಾಕಿದ್ದ ನಾಯಿ ಬಗ್ಗೆ ಆಡಿದ ಒಂದು ಮಾತಿನಿಂದ ಮದುವೆನೇ ರದ್ದಾಗಿದೆ.
ಪ್ರಿಯಾಂಕಾ ಅನ್ನೋ ಎಕ್ಸ್ ಯೂಸರ್ ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯನ್ನ ಶೇರ್ ಮಾಡಿಕೊಂಡಿದ್ದಾರೆ. ನನ್ನ ಹಾಗೂ ಬಾಯ್‌ಫ್ರೆಂಡ್ ಜೊತೆಗಿನ 7 ವರ್ಷಗಳ ಸಂಬಂಧ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಆ ಬಾಯ್‌ಫ್ರೆಂಡ್ ಅಲ್ಲ, ಆತನ ತಾಯಿ ಅಂತ ಹೇಳಿಕೊಂಡಿದ್ದಾರೆ.
ಪ್ರಿಯಾಂಕಾ ಹಾಗೂ ಆಕೆಯ ಬಾಯ್‌ಫ್ರೆಂಡ್ ನಡುವೆ 7 ವರ್ಷಗಳ ಪ್ರೀತಿ ಚೆನ್ನಾಗಿಯೇ ಇತ್ತು. ಹಲವು ವರ್ಷಗಳ ಸಂಬಂಧಕ್ಕೆ ಮದುವೆಯ ಅರ್ಥ ಕೊಡೋಕೆ ಇಬ್ಬರು ಚರ್ಚೆ ಮಾಡಿಕೊಂಡಿದ್ದಾರೆ. ಆದರೆ ಇವರಿಬ್ಬರಿಗೂ ಸವಾಲು ದೊಡ್ಡದಾಗಿಯೇ ಇತ್ತು. ಹೀಗಾಗಿ, ಎರಡೂ ಮನೆಯವರನ್ನು ಒಪ್ಪಿಸಬೇಕಿತ್ತು. ಹುಡುಗಿಯ ಮನೆಯಲ್ಲಿ ಅಂತದ್ದೇನು ಸಮಸ್ಯೆ ಆಗಿಲ್ಲ. ಹುಡುಗಿಯ ನಿರ್ಧಾರವನ್ನು ಫ್ಯಾಮಿಲಿ ಒಪ್ಪಿಕೊಂಡಿದ್ದಾರೆ. ಹುಡುಗನ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಮಗಳನ್ನ ಚೆನ್ನಾಗಿ ನೋಡಿಕೊಂಡ್ರೆ ಸಾಕು ಅಂತಷ್ಟೇ ಹೇಳಿದ್ದಾರೆ. ಆದರೆ ಹುಡುಗನ ಮನೆಯಲ್ಲಿ ನೂರೆಂಟು ಪ್ರಶ್ನೆಗಳನ್ನ ಕೇಳ್ತಿದ್ದರು. ನಿನಗೆ ಅವಳೇ ಬೇಕಾ? ಬೇರೆ ಹುಡುಗೀರು ಸಿಗುತ್ತಾರೆ. ಆಸ್ತಿ ಅಂತಸ್ತು ಇರೋ, ಯಾವುದೇ ಕೆಲಸ ಮಾಡದಿದ್ದರೂ ಕೂತುಕೊಂಡ್ರೆ ಹಣ ಎಣಿಸೋ ಕುಟುಂಬದಿಂದ ಪ್ರಪೋಸಲ್ ಬಂದಿದೆ ಅಂತೆಲ್ಲಾ ತಲೆ ಒಳಗೆ ತುಂಬಿಸೋಕೆ ಹುಡುಗನಿಗೆ ತಾಯಿ ತಲೆಗೆ ತುಂಬುಸೋಕೆ ಮುಂದಾಗಿದ್ದಾರೆ.
ಹುಡುಗಿ ಹತ್ರ ಮುದ್ದಾದ ಸಾಕು ನಾಯಿ ಇದೆ. ಅತ್ಯಂತ ಪ್ರೀತಿಯಿಂದ ಸಾಕಿದ್ದಾಳೆ. ಇನ್ನು, ಹುಡುಗಿ ತಾಯಿಯ ಆರೋಗ್ಯ ಸರಿಯಿಲ್ಲ. ಹೀಗಾಗಿ ಮದುವೆಯಾದ್ಮೇಲೆ ತಾಯಿಗೆ ನಾಯಿಯನ್ನು ನೋಡಿಕೊಳ್ಳೋದಕ್ಕೆ ಸಾಧ್ಯವಿಲ್ಲ. ತಾಯಿ ಆರೋಗ್ಯದ ಕಾರಣದಿಂದ ಮನೆಯ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಬೇಕಿತ್ತು. ಹೀಗಾಗಿ ಮದುವೆಯಾದ್ಮೇಲೆ ತಾನು ಸಾಕಿದ್ದ ಸಾಕು ನಾಯಿಯನ್ನು ಕರೆದುಕೊಂಡು ಬರ್ತೀನಿ ಅಂತ ಅತ್ತೆಗೆ ಹೇಳಿದ್ದಾಳೆ. ಜೊತೆಗೆ ಮನೆಯಲ್ಲಿ ತಾಯಿ ಆರೋಗ್ಯದ ವಿಚಾರವನ್ನ ಮಾತನಾಡಿದ್ದಾಳೆ.