newsics.com
ಪಾಕಿಸ್ತಾನ : ಅಜ್ಜಿಯ ಪುಣ್ಯ ತಿಥಿಯ ಸಲುವಾಗಿ ಭಿಕ್ಷುಕ ಕುಟುಂಬ 1.25 ಕೋಟಿ ರೂ. ಖರ್ಚು ಮಾಡಿ ಊರ ಮಂದಿಗೆ ಔತಣಕೂಟವನ್ನು ಏರ್ಪಡಿಸಿದ್ದು, ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಪಾಕಿಸ್ತಾನದಲ್ಲಿ ನಡೆದಿದ್ದು, ಇಲ್ಲಿನ ಗುಜ್ರನ್‌ವಾಲಾದಲ್ಲಿ ಭಿಕ್ಷುಕ ಕುಟುಂಬವೊಂದು 1.25 ಕೋಟಿ ಪಾಕಿಸ್ತಾನಿ ರೂಪಾಯಿ (ಪಿಕೆಆರ್) ಖರ್ಚು ಮಾಡಿ ಬರೋಬ್ಬರಿ 20 ಸಾವಿರ ಮಂದಿಗೆ ಹಬ್ಬದೂಟವನ್ನು ಏರ್ಪಡಿಸಿದೆ. ಅಜ್ಜಿಯ ಮರಣದ 40 ನೇ ದಿನದ ಪುಣ್ಯತಿಥಿಯ ಅಂಗವಾಗಿ ಈ ಕುಟುಂಬ ಊರ ಮಂದಿಗೆ ಈ ಭರ್ಜರಿ ಔತಣಕೂಟ ಏರ್ಪಡಿಸಿದೆ.
ಬರೋಬ್ಬರಿ 20 ಸಾವಿರ ಜನರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೊತೆಗೆ ಅಥಿತಿಗಳು ಹೋಗಿ ಬರಲು ಸುಮಾರು 2,000 ವಾಹನಗಳ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು. ಭಿಕ್ಷುಕ ಕುಟುಂಬ ಅಜ್ಜಿಯ ಪುಣ್ಯ ತಿಥಿಗೆ ಹಬ್ಬದ ಮೆನುವನ್ನೇ ಸಿದ್ಧಪಡಿಸಿತ್ತು. ಪಾಕಿಸ್ತಾನದ ಸಾಂಪ್ರದಾಯಿಕ ತಿನಿಸುಗಳಾದ ಸಿರಿ ಪಾಯ, ಮುರಬ್ಬ, ನಾನ್ ಮಟರ್ ಗಂಜ್ ಸೇರಿದಂತೆ ಹಲವಾರು ಖಾದ್ಯಗಳನ್ನು ತಯಾರಿಸಿದ್ದರು. ಜೊತೆಗೆ ಹಬ್ಬದೂಟಕ್ಕೆ ಸುಮಾರು 250 ಮೇಕೆಗಳನ್ನು ಕಡಿಯಲಾಗಿತ್ತು. ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಈ ಕುಟುಂಬ ಇಷ್ಟು ದೊಡ್ಡ ಔತಣಕೂಟವನ್ನು ಏರ್ಪಡಿಸಿದ್ದನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ.