newsics.com
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ ಎಂದು ಈ ಗ್ರಾಮದ ಯುವಕರಿಗೆ ಯಾರೂ ಕೂಡ ಕನ್ಯೆ ಕೊಡಲು ಮುಂದಾಗುತ್ತಿಲ್ಲ ಎನ್ನಲಾಗಿದೆ.
ಘಟ್ಟದ ಮೇಲಿರುವ ಈ ಗ್ರಾಮದಲ್ಲಿ ಕೇವಲ 5 ತರಗತಿಯವರೆಗೆ ಶಾಲೆ ಇದೆ. ಮುಂದಿನ ವಿದ್ಯಾಭ್ಯಾಸ ಮಾಡಬೇಕಂದ್ರೆ ಬೇರೆ ಊರಿಗೆ ಹೋಗಬೇಕಾಗುತ್ತೆ. ಓಡಾಡಲು ರಸ್ತೆ ಸರಿ ಇಲ್ಲ ಎಂದು ಈ ಗ್ರಾಮದ ಬಹುತೇಕ ಯುವಕರು ಓದು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಡಿಮೆ ವಿದ್ಯಾಭ್ಯಾಸ ಮಾಡಿದ್ದರಿಂದ ಹೊರಗಡೆ ಎಲ್ಲಿಯೂ ಕೆಲಸ ಮಾಡದೆ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ.
ಕುಮಟಾ ಸಿದ್ದಾಪುರ ಮುಖ್ಯ ರಸ್ತೆಯಿಂದ ಸುಮಾರು 8 k.m ಘಟ್ಟದ ಮೇಲಿದೆ. ಈ ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ. ಪೂರ್ತಿಯಾಗಿ ಕಾಡಿನ ಮಧ್ಯದ ಘಟ್ಟದಲ್ಲಿ ಹಾದು ಹೋಗುವ ಈ ರಸ್ತೆ ಭಾರಿ ಡೆಂಜರ್.
ರಸ್ತೆ ಸರಿ ಇಲ್ಲದಕ್ಜೆ ಗ್ರಾಮದ ಯಾವ ಯುವಕರಿಗೂ ಕನ್ಯೆ ಸಿಗುತ್ತಿಲ್ಲ. ಬೇರೆ ಕಡೆ ಹೋಗಿ ಕೆಲಸ ಮಾಡಿ ಹಣ ಸಂಪಾದನೆ ಮಾಡಬೇಕಂದ್ರೆ ಒಳ್ಳೆಯ ಶಿಕ್ಷಣ ಕೂಡ ಪಡೆದಿಲ್ಲ. ಚಿಕ್ಕ ಪುಟ್ಟ ಕೆಲಸಕ್ಕೆ ಬೇರೆ ಕಡೆ ಹೋಗಬೇಕಂದ್ರೆ ವಯಸ್ಸಾದ ತಂದೆ ತಾಯಿಯನ್ನಷ್ಟೆ ಮನೆಯಲ್ಲಿ ಬಿಟ್ಟು ಹೋಗಲು ಆಗದೆ ಯುವಕರು ಅಸಹಾಯಕರಾಗಿ ಗ್ರಾಮದಲ್ಲೇ ಕೃಷಿ ಚಟುವಟಿಕೆ ಮಾಡಿಕೊಂಡಿದ್ದಾರೆ.
1.25 ಕೋಟಿ ರೂ. ಖರ್ಚು ಮಾಡಿ 20 ಸಾವಿರ ಜನಕ್ಕೆ ಊಟ ಹಾಕಿದ ಭಿಕ್ಷುಕ! ವೈರಲ್ ವಿಡಿಯೋ ನೋಡಿ