newsics.com
ಬಿಗ್ ಬಾಸ್ ಸೀಸನ್ 11ರಲ್ಲಿ ಮನೆಯ ಡ್ರಾಮಾ ಜೋರಾಗಿದೆ. ಇನ್ನು ಈ ವಾರದ ಎಲಿಮಿನೇಷನ್‌ಗೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿತ್ತು.
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಬಿಗ್ ಬಾಸ್ ಚೈತ್ರಾ ಕುಂದಾಪುರ ಅವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದರು.
ಸದ್ಯ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರು ಇದೀಗ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಈ ಮಧ್ಯೆ ಚೈತ್ರಾ ಹೊರಗಿನ ಅಭಿಪ್ರಾಯಗಳನ್ನು ಹೊತ್ತು ತಂದ್ರಾ? ಎನ್ನುವ ಅನುಮಾನ ಶುರುವಾಗಿದ್ದು. ಇದಕ್ಕೆ ಬಿಗ್ ಬಾಸ್ ಕೂಡ ವಾರ್ನ್ ಮಾಡಿದ್ದಾರೆ. ಕಿಚ್ಚ ಸುದೀಪ್ ಕೂಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು, ಹೊಸ ಪ್ರೋಮೋದಲ್ಲಿ ಚೈತ್ರಾ ಮೊದಲಿಗೆ ಹೀಗೆ ಹೇಳುತ್ತಾರೆ. ಮೂರು ದಿನದಿಂದ ವೆದರ್ ಕಂಪ್ಲೀಟ್ ಚೇಂಜ್ ಇರುತ್ತೆ. ರೆಕ್ಕೆ ಜಾಸ್ತಿ ಅಗಲ ಇದ್ಯಾ? ಮುಚ್ಚಿಕೊಂಡು ಬಿಟ್ಟಿದ್ಯಾ? ಎಂದು ಪರೋಕ್ಷವಾಗಿ ಉಗ್ರಂ ಮಂಜು ಅವರು ಕೇಳಿದ್ದಾರೆ. ಇದಕ್ಕೆ ಚೈತ್ರಾ ಅವರು ಮುರಿದು ಹೋಗಿದೆ ಎಂದಿದ್ದಾರೆ. ಬಳಿಕ ಚೈತ್ರಾ ಅವರು ಮೈಕ್ ಸರಿಸಿ ಅಲ್ಲಲ್ಲಿ ಗುಸು ಗುಸು ಮಾತನಾಡಿದ್ದಾರೆ. ಹೀಗಾಗಿ ಬಿಗ್ ಬಾಸ್ ಚೈತ್ರಾ ಪಿಸು ಮಾತಲ್ಲಿ ಮಾತನಾಡುವಂತಿಲ್ಲ ಎಂದು ಆದೇಶಿಸಿದ್ದಾರೆ. ಇದೀಗ ಈ ಪ್ರೋಮೋ ನೋಡಿ ಹೊರಗಿನ ವಿಚಾರ ಚೈತ್ರಾ ತಿಳಿದು ಬಂದಿರ ಬೇಕು ಎಂದು ಕಮೆಂಟ್ ಮಾಡಿದ್ದಾರೆ,
ಬಿಗ್ ಬಾಸ್ ಮನೆ ಹೊರಗೆ ಜನರ ಅಭಿಪ್ರಾಯದ ಬಗ್ಗೆ ಉಗ್ರಂ ಮಂಜು, ಚೈತ್ರಾ ಅವರ ಮಧ್ಯೆ ಮಹತ್ವದ ಚರ್ಚೆ ನಡೆದಿದೆ. ಚೈತ್ರಾ ಅವರು 3 ದಿನದಿಂದ ವಾತಾವರಣ ಕಂಪ್ಲೀಟ್ ಚೇಂಜ್ ಇದೆ ಅಂತೆ ಎಂದಿದ್ದಾರೆ. ಅದಕ್ಕೆ ಉಗ್ರಂ ಮಂಜು ಅವರು ಈ ವಾತಾವರಣ ಹೇಗಿದೆ ಅಂತೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಚೈತ್ರಾ ಅವರು ಹೇಳಂಗಿಲ್ಲ ಎನ್ನುವ ಉತ್ತರ ನೀಡಿದ್ದಾರೆ.
ಹೀಗೆ ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಮಧ್ಯೆ ಸಂಭಾಷಣೆ ಮಧ್ಯೆ ಪಿಸು ಮಾತುಗಳು ನಡೆದಿದೆ. ಪಿಸು ಮಾತಿನಲ್ಲಿ ಮಾತನಾಡಿದ ಚೈತ್ರಾ ನಡೆಗೆ ಬಿಗ್ ಬಾಸ್ ಎಚ್ಚರಿಸಿದ್ದಾರೆ. ಸದ್ಯ ಹೊರಗಿನ ವಿಚಾರ ಮನೆಯವರಿಗೆ ಹೇಳಲು ಹೋಗಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬುದು ಕುತೂಹಲ ಮೂಡಿಸಿದೆ.