newsics.com
ಬೆಂಗಳೂರು : ಕಾಂತಾರ ಚೆಲುವೆ ಸಪ್ತಮಿ ಗೌಡ ಸೀರೆಯುಟ್ಟು ವಿಂಟೇಜ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಈ ಸಿಕ್ಸ್ ಪ್ಯಾಕ್ ಸುಂದರಿ ತಮ್ಮ ಹೊಸ ಹೊಸ ಫೋಟೊ ಶೂಟ್ ಮೂಲಕ ಯಾವಾಗ್ಲೂ ಸುದ್ದಿಯಲ್ಲಿರುತ್ತಾರೆ.
ಗುಲಾಬಿ ಮತ್ತು ಹಸಿರು ಬಣ್ಣದ ಆ ಸೀರೆ, ಅದಕ್ಕೆ ಪಫ್ ಬ್ಲೌಸ್, ಜಡೆ ಹೆಣೆದು ಕಟ್ಟಿದ ಉದ್ದ ಕೂದಲು. ತಲೆಗೆ ಮುಡಿದ ಮಲ್ಲಿಗೆ ಹೂವು, ಆ ವಿಂಟೇಜ್ ಕಾರು, ಇನ್ ಲ್ಯಾಂಡ್ ಲೆಟರ್ ಇವೆಲ್ಲಾ ಸೇರಿ ವಿಂಟೇಜ್ ಹೀರೋಯಿನ್ ಲುಕ್ ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ಯುವ ಸಿನಿಮಾದಲ್ಲೂ ಸಹ ತಮ್ಮ ನಟನೆಯಿಂದ ಮೆಚ್ಚುಗೆಗೆ ಪಾತ್ರವಾದ ನಟಿ ಸಪ್ತಮಿ, ಸದ್ಯ ತಮಿಳು ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
