newsics.com
ನವದೆಹಲಿ : ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಅಂತಾ ಹೆತ್ತವರು ಮಣ್ಣು ಮಾಡಿದ್ದರು. 6 ತಿಂಗಳ ಹಿಂದೆ ಗೋರಿಯಲ್ಲಿ ಹೂತಿದ್ದ ಬಾಲಕಿ ಶವವನ್ನ ಹೊರ ತೆಗೆದು ಮರು ಶವಪರೀಕ್ಷೆ ನಡೆಸಲಾಗಿದೆ.
ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಕಳೆದ ಮೇ 12 ರಂದು ಸಾಪ್ರೀನ್ ವಂಟಿ ಎನ್ನುವ 10 ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಕುಟುಂಬಸ್ಥರು ತಮ್ಮದೆ ಜಮೀನಿನಲ್ಲಿ ಶವವನ್ನ ಹೂತು ಅಂತ್ಯಕ್ರಿಯೆ ನೆರವೇರಿಸಿದ್ದರು. ಆದ್ರೆ ಇದಾಗ 6 ತಿಂಗಳ ಬಳಿಕ ಮತ್ತೆ ಬಾಲಕಿಯ ಶವವನ್ನ ಹೊರ ತೆಗೆದು ಶವಪರೀಕ್ಷೆ ಪಡೆಸಲಾಗಿದೆ. ವಿಜಯಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ಇಂಡಿ ಉಪವಿಭಾಗಾಧಿಕಾರಿ ಹಬೀದ್ ಗದ್ಯಾಳ ನೇತೃತ್ವದಲ್ಲಿ ಬಾಲಕಿಯ ಶವ ಪರೀಕ್ಷೆ ನಡೆಸಲಾಯಿತು.
ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಲ್ಲ ಬದಲಿಗೆ ಇದೊಂದು ವ್ಯವಸ್ಥಿಯ ಕೊಲೆ ಎನ್ನುವ ಆರೋಪ ಬಾಲಕಿ ತಂದೆ ಸಲೀಂ ವಂಟಿ ಹಾಗೂ ತಾಯಿ ಶಬಾನಾರ ಗಂಭೀರ ಆರೋಪವಾಗಿದೆ. 6 ತಿಂಗಳ ಹಿಂದೆ ತಮ್ಮ ಮಗಳನ್ನ ಕರೆಂಟ್ ನೀಡಿ ಸಂಬಂಧಿಕರೆ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಬಾಲಕಿ ಸಾಪ್ರೀನ್ ಸಾವು ಅಸಹಜ ಎನ್ನವ ವಿಚಾರವಾಗಿ ಸಂಬಂಧಿಕರ ವಿರುದ್ಧ ದೂರು ನೀಡಲು ಚಡಚಣ ಠಾಣೆಗೆ ತಂದೆ ಸಲೀಂ ತಾಯಿ ಶಾಬಾನಾ ಹೋಗಿದ್ದರು. ಆದ್ರೆ ಪೊಲೀಸರು ದೂರು ಸ್ವೀಕರಿಸಿಲ್ಲ, ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಸಲೀಂ ದೂರಿದ್ದಾರೆ. ಬಳಿಕ ಮಗಳ ಸಾವಿನ ಬಗ್ಗೆ ಇದ್ದ ಅನುಮಾನ ಹಾಗೂ ಪತ್ನಿಯ ಹತ್ಯೆಗೆ ನಡೆದ ಯತ್ನ ಬಗ್ಗೆ ಬೆಂಗಳೂರು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಮಹಾನಿರ್ದೇಶಕರು ಸಾಪ್ರೀನ್ ಶವ ಪರೀಕ್ಷೆಗೆ ಆದೇಶ ನೀಡಿದ್ದರು. ಈ ಆದೇಶದ ಅನ್ವಯ ಮೊನ್ನೆಯಷ್ಟೆ ಶವ ಪರೀಕ್ಷೆ ನಡೆದಿದೆ. ಶವ ಪರೀಕ್ಷೆಯ ವರದಿ ಬಂದ ಮೇಲೆ ಅಸಲಿ ವಿಚಾರ ಬಯಲಿಗೆ ಬರಲಿದೆ.