newsics.com
ಅಡುಗೆ ಮನೆಯ ಸಿಂಕ್ ಬ್ಲಾಕ್ ಆದಾಗ ಆಗುವ ಅನುಭವ ಬಹಳ ಕೆಟ್ಟದಾಗಿರುತ್ತದೆ. ಅದು ಕೂಡಾ ಒಮ್ಮೊಮ್ಮೆ ತೀರಾ ಅವಸರದಲ್ಲಿರುವ ವೇಳೆ ಈ ರೀತಿ ಸಿಂಕ್ ಒಮ್ಮೆಲೇ ಬ್ಲಾಕ್ ಆದಾಗ ಏನು ಮಾಡಬೇಕು ಎನ್ನುವುದೇ ತೋಚುವುದಿಲ್ಲ. ಆದ್ದರಿಂದ ಈ ಸಿಂಪಲ್ ಟ್ರಿಕ್ಸ್ ಬಳಸಿ, ಸುಲಭವಾಗಿ ಸಿಂಕ್ ಅನ್ನು ಸ್ವಚ್ಛಗೊಳಿಸಿ.
ಕಟ್ಟಿಕೊಂಡಿರುವ ಕಿಚನ್ ಸಿಂಕ್ ಅನ್ನು ಸ್ವಚ್ಛಗೊಳಿಸಲು ಉತ್ತಮ ಆಯ್ಕೆ ಎಂದರೆ ಅದು ಕಾಫಿ ಪುಡಿಯಾಗಿದೆ. ಇದಕ್ಕಾಗಿ ನೀವು ಕಾಫಿ ಪುಡಿಯ ಜೊತೆಗೆ ಲಿಕ್ವೆಟ್ ಸೋಪ್ ಮತ್ತು ಬಿಸಿ ನೀರನ್ನು ಬಳಸ ಬೇಕಾಗುತ್ತದೆ. ಕಿಚನ್ ಸಿಂಕ್ ನಲ್ಲಿ ನೀರು ತುಂಬಿಕೊಂಡಿದ್ದರೆ ಮೊದಲು ಕಾಫಿ ಪುಡಿ ಹಾಕಿ, ನಂತರ ಲಿಕ್ವಿಡ್ ಸೋಪ್ ಹಾಕಿ. ಇದಾದ ನಂತರ, ಮಿಶ್ರಣಕ್ಕೆ ಬಿಸಿ ನೀರನ್ನು ಸುರಿಯಿರಿ. ಹೀಗೆ ಮಾಡುವುದರಿಂದ ಸಿಂಕ್ನಲ್ಲಿ ಆವರಿಸಿರುವ ಕೊಳಕು ನಿವಾರಣೆಯಾಗುತ್ತದೆ. ಇದಲ್ಲದೇ, ಇದು ಜಾಲರಿ ಸುತ್ತ ಬರುವ ಯಾವುದೇ ರೀತಿಯ ಕೆಟ್ಟ ವಾಸನೆಯನ್ನು ತೆಗೆದು ಹಾಕುತ್ತದೆ.
ನೀವು ವಾರಕ್ಕೊಮ್ಮೆ ಅಥವಾ 10 ದಿನಗಳಿಗೊಮ್ಮೆ ಅಡುಗೆ ಮನೆಯ ಸಿಂಕ್ ಅನ್ನು ಸ್ವಚ್ಛಗೊಳಿಸಬೇಕು. ಸಿಂಕ್ ಕಟ್ಟಿಕೊಂಡಿದ್ದರೂ ಅಥವಾ ಇಲ್ಲದಿದ್ದರೂ ಈ ನಿಯಮವನ್ನು ಪಾಲಿಸಿ. ನಿಯಮಿತವಾಗಿ ಈ ಕೆಲಸ ಮಾಡಿ. ಇದಷ್ಟೇ ಅಲ್ಲದೇ, ಕಿಚನ್ ಸಿಂಕ್ ಕಟ್ಟಿಕೊಳ್ಳದಂತೆ ತಡೆಯಲು ನೀವು ಅನುಸರಿಸಬೇಕಾದ ಮತ್ತಷ್ಟು ಕೆಲ ವಿಷಯಗಳಿವೆ. ಅದೇನಪ್ಪಾ ಅಂದರೆ ಆಹಾರದ ಕಣಗಳನ್ನು ನೇರವಾಗಿ ಸಿಂಕ್ ಗೆ ಹಾಕಬೇಡಿ.