newsics.com
ಬೆಂಗಳೂರು : ಬಾಹುಬಲಿ ಸಿನಿಮಾದ ಕಟ್ಟಪ್ಪನ ಪಾತ್ರದ ಮೂಲಕ ಜನಪ್ರಿಯರಾಗಿರುವ ತಮಿಳಿನ ಖ್ಯಾತ ನಟ ಸತ್ಯರಾಜ್ ಅವರ ಪತ್ನಿ ಮಹೇಶ್ವರಿ ಕಳೆದ ನಾಲ್ಕು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದಾರೆ.
ಸತ್ಯರಾಜ್ ಪತ್ನಿ ಮಹೇಶ್ವರಿ ಬಗ್ಗೆ ಬಹುತೇಕರಿಗೆ ತಿಳಿದಿರುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ, ತಾಯಿಯ ಬಗ್ಗೆ ಸತ್ಯ ರಾಜ್ ಪುತ್ರಿ ದಿವ್ಯಾ ಭಾವುಕ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಂತೆ ಸತ್ಯರಾಜ್ ಪತ್ನಿ ಮಹೇಶ್ವರಿ ಕಳೆದ ನಾಲ್ಕು ವರ್ಷಗಳಿಂದ ಕೋಮಾದಲ್ಲಿದ್ದಾರಂತೆ. ಅವರಿಗೆ PEG ಟ್ಯೂಬ್ ಮೂಲಕ ಆಹಾರ ನೀಡಲಾಗುತ್ತಿದೆ ಎಂದು ಹೇಳಿರುವ ಅವರು, ವೈದ್ಯಕೀಯ ಪ್ರಗತಿಗಾಗಿ ಆಶಾವಾದದಿಂದ ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ನನ್ನ ತಾಯಿಯನ್ನು ಮತ್ತೆಸಹಜ ಸ್ಥಿತಿಗೆ ತರುತ್ತೇವೆ ಎಂದು ನಂಬಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ನನ್ನ ತಂದೆ ಒಬ್ಬಂಟಿ ಪೋಷಕರಾಗಿದ್ದಾರೆ. ಅಪ್ಪನ ಅಮ್ಮ ಕೂಡ ಕೆಲವು ವರ್ಷಗಳ ಹಿಂದೆ ತೀರಿಕೊಂಡರು. ನಾನು ಕೂಡ ನನ್ನ ಅಪ್ಪನಿಗೆ ಒಬ್ಬಂಟಿ ಮಗಳಾಗಿದ್ದೇನೆ. ನಾವಿಬ್ಬರೂ ಸೇರಿ ಪವರ್ಫುಲ್ ಒಬ್ಬಂಟಿ ಪೋಷಕರ ಕ್ಲಬ್ ಅನ್ನು ರಚಿಸಿದ್ದೇವೆ. ಬ್ರೈನ್ ಹೆಮರೇಜ್, ಅಂದರೆ ಮೆದುಳಿನಲ್ಲಿ ರಕ್ತಸ್ರಾವವಾದ ಕಾರಣ ತನ್ನ ತಾಯಿ ಮಹೇಶ್ವರಿ ಕೋಮಾಕ್ಕೆ ಹೋದರು ಎಂದು ದಿವ್ಯಾ ಸತ್ಯರಾಜ್ ಹೇಳಿದ್ದಾರೆ.