newsics.com
ಬೆಂಗಳೂರು : ಮುಂಬೈನ ಗಲ್ಲಿಯೊಂದಕ್ಕೆ ತೆರಳಿದ್ದು, ಅಲ್ಲಿ ಮರಾಠಿಗರು ರಾಕಿ ಭಾಯ್, ಕೆಜಿಎಫ್ ರಾಖಿ, ಯಶ್ ಸರ್ ಬೋಲ್ನಾ ಎಂದು ಹೇಳಿದ್ದಾರೆ. ಮತ್ತೊಬ್ಬರು ಅಣ್ಣಾ ಹೇಗಿದ್ದೀರಾ.? ಎಂದು ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ಗಲ್ಲಿಯಲ್ಲಿ ಕನ್ನಡ ಪದ ಕೇಳಿದ ಕನ್ನಡಿಗರು ಖುಷ್ ಆಗಿದ್ದಾರೆ.
ಬೆಂಗಳೂರಿನ ಪೀಣ್ಯ ಬಳಿಯಿರುವ ಹೆಚ್‌ಎಂಟಿ ಕಾರ್ಖಾನೆಯ ಆಸ್ತಿಯಲ್ಲಿ ಅದ್ಧೂರಿ ಸೆಟ್ ಹಾಕಿದ್ದು, ಈ ಜಾಗದ ವಿವಾದದಿಂದಾಗಿ ರಾಜ್ಯ ಸರ್ಕಾರ ಸಿನಿಮಾ ಸೆಟ್ ತೆರವುಗೊಳಿಸಿದೆ. ಇದರಿಂದ ಟಾಕ್ಸಿಕ್ ಸಿನಿಮಾ ಶೂಟಿಂಗ್ ಮುಂಬೈಗೆ ವರ್ಗಾವಣೆ ಆಗಿದೆ. ಹೀಗಾಗಿ, ಶೂಟಿಂಗ್ ಕಾರ್ಯದಲ್ಲಿ ಭಾಗಿಯಾಗಲು ಮುಂಬೈ ಗಲ್ಲಿಗೆ ರಾಕಿಂಗ್ ಸ್ಟಾರ್ ಯಶ್ ತೆರಳಿದ್ದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ತೆರಳಿದ್ದರೂ, ಅಲ್ಲಿನ ಜನರು ಕೆಜಿಎಫ್ ರಾಕಿ ಭಾಯ್ ಎಂದು ಗುರುತಿಸಿ ಅವರನ್ನು ಮಾತನಾಡಿಸಲು ಮುಂದಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡುತ್ತಿದ್ದಂತೆ ಎಲ್ಲರೂ ಮುಖದ ಮೇಲಿನ ಮಾಸ್ಕ್ ತೆಗೆದು ಮಾತನಾಡುವಂತೆ ಗೋಗರೆದಿದ್ದಾರೆ. ಇನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ, ಕ್ಯಾಮೆರಾಗಳಲ್ಲಿ ಯಶ್ ಅವರ ವಿಡಿಯೋ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮನ್ನು ಮಾತನಾಡಿಸುವಂತೆ ಮನವಿ ಮಾಡಿದ್ದಾರೆ.
https://twitter.com/Insulter3730010/status/1855547139696550350
ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಯಶ್ ಸಣ್ಣ ಬೋಟ್‌ನಲ್ಲಿ ಕೆರೆಯ ನೀರಿನಲ್ಲಿ ಮತ್ತೊಂದು ಪ್ರದೇಶಕ್ಕೆ ತೆರಳಿದ್ದಾರೆ.