Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಕಾಫಿ ಸೇವನೆಗೂ ಮುನ್ನ ಇರಲಿ ಹೆಚ್ಚು ಎಚ್ಚರ! ಗರ್ಭಪಾತಕ್ಕೂ ಕಾರಣವಾದೀತು…
ಆರೋಗ್ಯಪ್ರಮುಖಲೈಫ್‌ಸ್ಟೈಲ್

ಕಾಫಿ ಸೇವನೆಗೂ ಮುನ್ನ ಇರಲಿ ಹೆಚ್ಚು ಎಚ್ಚರ! ಗರ್ಭಪಾತಕ್ಕೂ ಕಾರಣವಾದೀತು…

Share
2 Min Read
SHARE

newsics.com

ಹೆಚ್ಚು ಕಾಫಿ ಸೇವನೆ ದೀರ್ಘಕಾಲಿಕ ರೋಗಗಳನ್ನು ತಂದೊಡ್ಡುವ ಸಾಧ್ಯತೆಗಳಿದ್ದು, ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಅತಿಯಾದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಹಾಗೂ ಆತಂಕ ಸಮಸ್ಯೆ ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಆತಂಕ (Anxiety) ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುವ ಸಾಕಷ್ಟು ರೋಗಿಗಳು ಸಾಮಾನ್ಯವಾಗಿ ಅತಿಯಾದ ಕಾಫಿ ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಏಕೆಂದರೆ ಕೆಲಸದ ಸಮಯದಲ್ಲಿ ಕಾಫಿ ಸುಲಭವಾಗಿ ಲಭ್ಯವಿರುವ ಕಾರಣ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಆದರೆ, ಇದರಿಂದ ಅನೇಕ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದರೂ ಗಮನಹರಿಸುವುದಿಲ್ಲ.

ನಮ್ಮಲ್ಲಿ ಅನೇಕರು ಕೆಲಸದ ಒತ್ತಡ ದೂರಾಗಿಸಲು ಅತಿಯಾಗಿ ಕಾಫಿ ಸೇವನೆ ಮಾಡುವುದುಂಟು. ಅತಿಯಾದ ಕಾಫಿ ಸೇವನೆ ರಕ್ತದೊತ್ತಡವನ್ನು ಹಾಗೂ ಆತಂಕದ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಜನರಲ್ ಹಾಸ್ಪಿಟಲ್ ಸೈಕಿಯಾಟ್ರಿಯಲ್ಲಿನ ಅಧ್ಯಯನಗಳಲ್ಲಿ ಒಂದಾಗಿರುವ ಮಾಸಿಕ ಆರೋಗ್ಯ ಜರ್ನಲ್ ಈ ಕುರಿತು ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಅತಿಯಾದ ಕೆಫೀನ್ ಸೇವನೆಯು ಆತಂಕ ಹೆಚ್ಚುವಂತೆ ಮಾಡುತ್ತದೆ ಎಂದು ತಿಳಿದುಬಂದಿದೆ.

ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿನ ಮತ್ತೊಂದು ಸಂಶೋಧನೆಯು ಅಧಿಕ ಕೆಫೀನ್ ಸೇವನೆಯನ್ನು ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ಹೃದಯ ರಕ್ತನಾಳದ ಅಸ್ವಸ್ಥತೆಗಳ ಅಪಾಯ ಹೆಚ್ಚಿಸುತ್ತದೆ ಎಂದು ತಿಳಿಸಿದೆ.

ಪ್ರತಿನಿತ್ಯ ಮೂರು-ನಾಲ್ಕು ಕಪ್‌ಗಳು ಅಥವಾ 400 ಮಿಗ್ರಾಂ ಕೆಫೀನ್ ಸೇವಿಸುವುದು ಸುರಕ್ಷಿತವೆಂದು ಹೇಳಲಾಗುತ್ತದೆ. ಆದರೆ, ಅದಕ್ಕಿಂತೂ ಹೆಚ್ಚು ಸೇವನೆ ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.

ಕಾಫಿ ಸೇವನೆ ವಿಚಾರದಲ್ಲಿ ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಅತಿಯಾದ ಕೆಫೀನ್ ಸೇವನೆ ಗರ್ಭಪಾತ ಮತ್ತು ಕಡಿಮೆ ತೂಕದ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಕಾಫಿ ಸೇವನೆಯು ನೇರವಾಗಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಅತಿಯಾದ ಕಾಫಿ ಸೇವನೆಯು ಹೆಚ್ಚಿದ ರಕ್ತದೊತ್ತಡ ಸೇರಿದಂತೆ ವಿವಿಧ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಇದು ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ ಮತ್ತು ಕಬ್ಬಿಣಾಂಶ ಕೊರತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಅತಿಯಾದ ಕಾಫಿ ಸೇವನೆಯು ಆಸ್ಟಿಯೊಪೊರೋಸಿಸ್ (ದುರ್ಬಲ ಮೂಳೆಗಳು) ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

ತಲೆನೋವು, ಆಯಾಸ, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡಬಹುದು. ಕಾಫಿ ಜತೆಗೆ ಸಕ್ಕರೆ ಸೇವನೆ ಕೂಡ ಹೆಚ್ಚಾಗುವುದರಿಂದ ಆಗಾಗ ಮೂತ್ರ ವಿಸರ್ಜನೆ, ಅನಿಯಮಿತ ಹೃದಯ ಬಡಿತ, ಕಿರಿಕಿರಿ ಮತ್ತು ಆತಂಕಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಕಾಫಿ ಸೇವನೆಯು ಸಾಮಾನ್ಯ ಅಭ್ಯಾಸ. ಆದರೆ, ಯಾವುದೂ ಅತಿಯಾಗಬಾರದು. ಕೆಲಸದ ಒತ್ತಡ ನಿರ್ವಹಿಸಲು ಸಾಕಷ್ಟು ಜನರು ಹಲವು ಬಾರಿ ಕಾಫಿ ಸೇವನೆ ಮಾಡುವುದುಂಟು. ಅತಿಯಾದ ಕೆಫೀನ್ ಸೇವನೆಯು ನಿದ್ರಾಹೀನತೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಆ್ಯಸಿಡ್ ರಿಫ್ಲೆಕ್ಸ್’ನಂತಹ ಜೀರ್ಣ ಸಮಸ್ಯೆಗಳನ್ನು ಪ್ರಚೋದಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಫ್ಯಾನ್‌ ನ ಈ ರೀತಿ ಕ್ಲೀನ್‌ ಮಾಡಿ ಕಷ್ಟನೇ ಅನ್ಸಲ್ಲ!

TAGGED:Be careful before drinking coffee! It also causes miscarriage...
Share This Article
Facebook Twitter Copy Link Print
Previous Article ಬೇಲೂರಲ್ಲಿ ಬೀಡುಬಿಟ್ಟ 50ಕ್ಕೂ ಹೆಚ್ಚು ಕಾಡಾನೆ, ಹೆಚ್ಚಿದ ಆತಂಕ
Next Article ಯೋಗ ಶಿಕ್ಷಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಯತ್ನ, ಸಮಾಧಿಯಿಂದ ಎದ್ದು ಬಂದ ವಿವಾಹಿತೆ!

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?