newsics.com
ತುಮಕೂರು: ಸೊಸೆ ಮೇಲೆ ಅತ್ಯಾಚಾರ ಎಸಗಿದ ಮಾವನನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ.
ಸಲೀಂ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ನವೆಂಬರ್ 2ರಂದು ಆರೋಪಿಯು ಪತ್ನಿ ಹಾಗೂ ಮಗ ಮನೆಯಲ್ಲಿಲ್ಲದಾಗ ಸೊಸೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸೊಸೆ ದೂರಿನಲ್ಲಿ ಉಲೇಖಿಸಿದ್ದಾರೆ.
ನನಗೆ ಮದುವೆಯಾಗಿ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಕಳೆದ ವಾರದಿಂದ ಮಾವ ಅನುಚಿತವಾಗಿ ವರ್ತಿಸುತ್ತಿದ್ದು, ಅತ್ಯಾಚಾರದ ನಂತರ ವಿಷಯ ಬಹಿರಂಗಗೊಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಮಾವನ ವರ್ತನೆ ಸಹಿಸದೆ ಪತಿಯ ಗಮನಕ್ಕೆ ತಂದಾಗ ಪತಿಯೂ ತಂದೆಯ ಪರ ಮಾತನಾಡಿದರು. ಪೋಷಕರ ಗಮನಕ್ಕೆ ತಂದಾಗ, ಚಿಕ್ಕಮ್ಮ ಫೋನ್ ಮಾಡಿ ವಿಚಾರಿಸಿದ್ದಾರೆ. ಆಗ ಸುಳ್ಳು ಆರೋಪ ಮಾಡುತ್ತಿರುವ ಸೊಸೆ ಮೇಲೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ದೂರಿದ್ದಾರೆ.
ಇನ್ನು ಮಾವ ಸಲೀಂ, ಗಂಡ ಮುಜಾಹಿದ್ ಮತ್ತು ಅತ್ತೆ ಮುಬೀನ ವಿರುದ್ಧ ಸೊಸೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಸಲೀಂನನ್ನು ಬಂಧಿಸಿದ್ದಾರೆ.