Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ‌…ಇಷ್ಟೆಲ್ಲ ಇದ್ದರೂ ಗುರುಪ್ರಸಾದ್ ಸಾವಿಗೆ ಶರಣಾಗಿದ್ದೇಕೆ? ಸದಾ ಕಾಡುವ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು…
ಕರ್ನಾಟಕಪ್ರಮುಖಮನರಂಜನೆ

‌…ಇಷ್ಟೆಲ್ಲ ಇದ್ದರೂ ಗುರುಪ್ರಸಾದ್ ಸಾವಿಗೆ ಶರಣಾಗಿದ್ದೇಕೆ? ಸದಾ ಕಾಡುವ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು…

Share
3 Min Read
SHARE

newsics.com

ಗುರುಪ್ರಸಾದ್ ರಾಮಚಂದ್ರ ಶರ್ಮಾ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ. ಮಠ ಸಿನಿಮಾ ಮೂಲಕ ಜನಪ್ರಿಯರಾಗಿದ್ದರು. ಗುರುಪ್ರಸಾದ್ ಸಾವಿನ ನಂತರ ಮನಸೋಇಚ್ಛೆ ಮಾತನಾಡುತ್ತಿರುವ ನಟ ಜಗ್ಗೇಶ್ ಖ್ಯಾತಿಗೆ ಬಂದದ್ದೂ ಗುರುಪ್ರಸಾದ್ ಅವರ ಮಠ ಸಿನಿಮಾ ಮೂಲಕವೇ. ನಿರ್ಮಾಪಕ,ನಟ ಮತ್ತು ಸಾಹಿತಿಯೂ ಆಗಿ ಇವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. 1972 ನವೆಂಬರ್ 2ರಂದು ಕನಕಪುರದಲ್ಲಿ ಜನಿಸಿದ್ದ ಗುರುಪ್ರಸಾದ್ ಆತ್ಮಸ್ಥೈರ್ಯ ತುಂಬಬಲ್ಲ ವ್ಯಕ್ತಿಯಾಗಿದ್ದರು.
ಸೋಲುಗಳನ್ನು ಮೆಟ್ಟಿನಿಂತು ಹೊಸ ರೀತಿ ಸಿನಿಮಾ ನೀಡುತ್ತೇನೆ ಎಂಬ ದೃಢ ನಿರ್ಧಾರದಲ್ಲಿದ್ದ ಅವರು ಏಕಾಏಕಿ ಸಾವಿನ ನಿರ್ಧಾರ ಮಾಡಿರುವುದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ.
ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದ ಗುರುಪ್ರಸಾದ್‌ ಅವರು ಇತ್ತೀಚೆಗೆ ರಂಗನಾಯಕ ಸಿನಿಮಾದ ಸೋಲಿನಿಂದ ಕುಗ್ಗಿದ್ದರು. ಹಾಗೆ ಸಾಲ, ಕೌಟುಂಬಿಕ ಹಿನ್ನೆಲೆಗಳು, ಸಿನಿಮಾ ಸೋಲು ಹೀಗೆ ಎಲ್ಲವೂ ಒಮ್ಮೆ ಅವರನ್ನು ಕಾಡಿರಬಹುದಾದ ಸಾಧ್ಯತೆಯಿದೆ. ಹೀಗಾಗಿಯೇ ಅವರು ಸಾವಿನ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಗುರುಪ್ರಸಾದ್ ರಾಮಚಂದ್ರ ಶರ್ಮಾ ಇವರ ಪೂರ್ಣ ಹೆಸರು. ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿ ನವಿರಾದ ಹಾಸ್ಯದ ಮೂಲಕ ಸಮಾಜದ ಕಟು ಸತ್ಯಗಳನ್ನು ತಿಳಿಸುವಲ್ಲಿ ಇವರು ಯಶಸ್ವಿಯಾಗಿದ್ದರು.

2009 ರಲ್ಲಿ ಇದೇ ಜೋಡಿ `ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಿ ಹೆಸರಾಗಿತ್ತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ಕೂಡ ದೊರಕಿತ್ತು.

ಗುರುಪ್ರಸಾದ್ ಅವರು ಮಾಡಿದ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಿದರೂ ಬೇಸರವಾಗದು ಅಂತಹ ಸಿನಿಮಾಗಳನ್ನು ಮಾಡಿ ಹೆಸರುವಾಸಿಯಾಗಿದ್ದರು. ಮಠ ಸಿನಿಮಾವನ್ನು ಹತ್ತಾರು ಬಾರಿ ನೋಡಿದವರೂ ಇದ್ದಾರೆ. ನಂತರದಲ್ಲಿ ರಂಗನಾಯಕ ಸಿನಿಮಾ ಮಾಡಿ ಮತ್ತೆ ಎಲ್ಲರಿಗೂ ಮನರಂಜನೆ ನೀಡಿದವರು ಗುರುಪ್ರಸಾದ್‌. ಆದರೆ ರಂಗನಾಯಕ ಅವರ ಕೈಹಿಡಿಯಲಿಲ್ಲ.

ರಂಗನಾಯಕ ಸಿನಿಮಾ ಸೋಲಿನ ಬಳಿಕ ಗುರು ಪ್ರಸಾದ್ ಬಹಳ ನೊಂದಿದ್ದರು ಎನ್ನಲಾಗಿದೆ. ಯಾರ ಸಂಪರ್ಕಕ್ಕೂ ಬಾರದೆ ಒಬ್ಬರೇ ಇರುತ್ತಿದ್ದರು. ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದ ಅವರು ಖಿನ್ನತೆಗೆ ಒಳಗಾಗಿದ್ದರಂತೆ. ಅಲ್ಲದೆ ಕುಟುಂಬಸ್ಥರು ಜತೆಗಿರದೆ ಒಂಟಿತನ ಕಾಡಿತ್ತು. ಹಾಗೆ 8 ತಿಂಗಳಿನಿಂದ ಅವರು ಮನೆಯಿಂದ ಹೊರಬರುವುದು ಅಪರೂಪವಾಗಿತ್ತು ಎನ್ನಲಾಗಿದೆ.

ಸಿನಿಮಾ ಸೋಲಿನ ನಂತರ ಬಹಳ ನೊಂದಿದ್ದರಂತೆ. ಅಲ್ಲದೆ ಹೆಚ್ಚು ಸಾಲ ಮಾಡಿಕೊಂಡಿದ್ದ ಅವರು ಸಾಲ ತೀರಿಸಲು ಪರದಾಡಿದ್ದಾರೆ. ಹಲವರ ಬಳಿ ಹಣ ಪಡೆದಿದ್ದ ಅವರು ವಾಪಸ್ ನೀಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಅವರು ಸಾಲಗಾರರ ಕಾಟ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮಾತು‌ ಮತ್ತು ಬರವಣಿಗೆಯಲ್ಲಿ ಬಹಳ ಹಿಡಿತ ಹೊಂದಿದ್ದ ಗುರುಪ್ರಸಾದ್ ಇವರು ಹಿಟ್‌ ಸಿನಿಮಾಗಳ ಮೂಲಕವೇ ತಮ್ಮ ಹೆಸರುವಾಸಿಯಾಗಿದ್ದರು. ಮಠ ಸಿನಿಮಾದಲ್ಲಿ ಇವರು ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ದರೋಡೆಕೋರ, ಪೊಲೀಸ್‌, ಪೂಜಾರಿ, ವಕೀಲ ಹೀಗೆ ಹಲವಾರು ಪಾತ್ರಗಳಲ್ಲಿ ಗುರುಪ್ರಸಾದ್ ಕಾಣಿಸಿಕೊಂಡಿದ್ದರು.

ಪುಟಾಣಿ ಪಂಟ್ರು ಸೀಸನ್ 2, ಥಕ ದಿಮಿ ಥಾ ಡಾನ್ಸ್‌ ಶೋ, ಭರ್ಜರಿ ಕಾಮಿಡಿ ಈ ಎಲ್ಲ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿದ್ದರು. ಬಿಗ್‌ ಬಾಸ್‌ 2ನಲ್ಲಿ ಇವರು ವೈಲ್ಡ್‌ಕಾರ್ಡ್‌ ಮೂಲಕ ಎಂಟ್ರಿಕೊಟ್ಟ ಸ್ಪರ್ಧಿಯೂ ಆಗಿದ್ದರು.

ಅಡೆಮಾ ಸಿನಿಮಾ ಶೂಟಿಂಗ್ ನಡೆಯುತಿತ್ತು. ಆದ್ರೆ, ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದೇ ಕುತೂಹಲ. ಮಾಹಿತಿ ಪ್ರಕಾರ ಕೌಟುಂಬಿಕ ಕಲಹ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ. ಡೆತ್ ನೋಟ್ ಬರೆದಿಟ್ಟಿದ್ದು, ಏನೆಲ್ಲಾ ಅಂಶಗಳಿವೆ ಎಂಬುದು ಕುತೂಹಲ ಗರಿಗೆದರುವಂತೆ ಮಾಡಿದೆ.

ಇಷ್ಟೆಲ್ಲ ಇದ್ದರೂ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವುದು ಮಾತ್ರ ಅರಗಿಸಿಕೊಳ್ಳಲಾರದ ಸತ್ಯ. ಮೂರು ಕೋಟಿ ಸಾಲ ಇವರಿಗಿದ್ದ ಜನಪ್ರಿಯತೆಗೆ ಅಥವಾ ಸಾಮರ್ಥ್ಯಕ್ಕೆ ತೀರಿಸಲಾರದ‌ ದೊಡ್ಡ ಸಾಲವೇನೂ ಆಗಿರಲಿಲ್ಲ. ಆದರೆ ಸೋತಿದ್ದೆಲ್ಲಿ? ಕುಡಿತದ ದಾಸರಾಗಿ ಸೋಲು ಕಂಡರಾ? ಸಾಲ ಶೂಲಕ್ಕೆ ಹೆದರಿದರಾ? ಅವಮಾನದಿಂದ ನಲುಗಿದರಾ? ಡಿಪ್ರೆಷನ್‌ಗೆ ಒಳಗಾದ್ರಾ? ಅಥವಾ ಚೆಕ್‌ ಬೌನ್ಸ್ ಕೇಸ್‌ನಲ್ಲಿ ಬಂಧನಕ್ಕೊಳಗಾಗುತ್ತೇನೆಂಬ ಭಯದಿಂದ ಕುಗ್ಗಿ ಸಾವಿನ ಮನೆಯ ಹಾದಿ ತುಳಿದರಾ? ಅಥವಾ ಅತಿಯಾದ ಸ್ವಾಭಿಮಾನ, ಅತಿಯಾದ ಅಹಂಕಾರ ಅವರನ್ನು ಈ ಸ್ಥಿತಿಗೆ ತಂದಿತಾ? ಸರಿಯಾಗಿ ನಿದ್ರೆ ಬಾರದೆ ನಿದ್ದೆ ಮಾತ್ರೆಯ ದಾಸರಾದರಾ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಾರದೇನೋ…

ವಿಭಿನ್ನ ದೃಷ್ಟಿಕೋನದ ನಟ, ನಿರ್ದೇಶಕ ಗುರುಪ್ರಸಾದ್ ಸಾವಿನ ಮನೆಯ ಕದ ತಟ್ಟಿದ್ದೇಕೆ? ಅಂಥದ್ದೇನಾಗಿತ್ತು?

TAGGED:Why did Guruprasad surrender to death despite all this? Dozens of unanswered questions...
Share This Article
Facebook Twitter Copy Link Print
Previous Article ಬಿಗ್ಬಾಸ್ ಮನೆಯಿಂದ 4ನೇ ವಾರಕ್ಕೆ ಆಟ ಅಂತ್ಯ ಮಾಡಿದ ಸ್ಪರ್ಧಿ ಮಾನಸ
Next Article ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ತೃತೀಯ, 04-11-2024, ಸೋಮವಾರ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?