newsics.com
ಹಾಸನ : ಹಾಸನದ ಅದಿ ದೇವತೆ ಹಾಸನಾಂಬೆ ತಾಯಿಯ ದರ್ಶನ ಅಂತ್ಯಗೊಂಡಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಹಾಸನಾಂಬ ದೇವಿಯ ಈ ವರ್ಷದ ದರ್ಶನಕ್ಕೆ ಇಂದು ವಿಶ್ವರೂಪ ದರ್ಶನದ ಬಳಿಕ ಶಾಸೊತ್ರೕಕ್ತವಾಗಿ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.
ಶಾಸಕ ಸ್ವರೂಪ್‌ಪ್ರಕಾಶ್ . ಜಿಲ್ಲಾಧಿಕಾರಿ ಸತ್ಯಭಾಮ, ಎಸ್,ಪಿ ಮಹಮದ್ ಸುಜೆತಾ , ಉಪವಿಭಾಗಾಧಿಕಾರಿ ಮಾರುತಿ ಸೇರಿದಂತೆ ಮತ್ತಿತರ ಗಣ್ಯರ ಸಮುಖದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.
ಇದೀಗ ಇಂದು ಹಾಸನಾಂಬೆ ದೇಗುಲದ ಗರ್ಭಗುಡಿ ಬಂದ್ ಮಾಡಲಾಗಿದೆ. ಅಕ್ಟೋಬರ್ 24 ಗುರುವಾರ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ 25 ರಿಂದ ನವೆಂಬರ್ 03 ನಸುಕಿನ ಜಾವ 6 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಂಬತ್ತು ದಿನಗಳಲ್ಲಿ ದಾಖಲೆಯ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದರು. ಮತ್ತು ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿದೆ.