newsics.com
ಬೆಂಗಳೂರು : ಯುವಕನ ಮೇಲೆ ದುಷ್ಕರ್ಮಿಗಳು ಲಾಂಗು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ಮುನೇಶ್ವರದಲ್ಲಿ ನಡೆದಿದೆ.
ಅರುಣ್ ಹಲ್ಲೆಗೊಳಗಾದ ಯುವಕ ಎಂದು ತಿಳಿದುಬಂದಿದೆ.ಲಾಂಗು ಮಚ್ಚುಗಳಿಂದ ನಡು ರಸ್ತೆಯಲ್ಲಿ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಬ್ಯಾಡರಹಳ್ಳಿಯ ಮುನೇಶ್ವರ ನಗರದಲ್ಲಿ ನಿನ್ನೆ ರಾತ್ರಿ ಒಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಾಹಿತಿ ಸಿಗುತ್ತಿದ್ದಂತೆ ಘಟನೆಕ್ಕೆ ಹೊಯ್ಸಳ ಪೊಲೀಸರು ಆಗಮಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.