newsics.com
ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಶನಿವಾರ ಎರಡು ವರ್ಷ ಪೂರ್ಣಗೊಳಿಸಿದ್ದು, ಪಕ್ಷದ ಬಲವರ್ಧನೆಗಾಗಿ ಅವರ ಕೊಡುಗೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿನ ಪಕ್ಷದ ನಾಯಕರು ಗುಣಗಾನ ಮಾಡಿದ್ದಾರೆ.
ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಕ್ಟೋಬರ್ 26, 2022 ರಂದು ಅಧಿಕಾರ ಸ್ವೀಕರಿಸಿದ್ದರು. ಅವರು 24 ವರ್ಷಗಳಲ್ಲಿ ಈ ಹುದ್ದೆಗೆ ಆಯ್ಕೆಯಾದ ಮೊದಲ ಗಾಂಧಿಯೇತರ ನಾಯಕರಾಗಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿನ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ 82 ವರ್ಷದ ಖರ್ಗೆ ಅವರು ಸಂಭ್ರಮಿಸಿದ್ದಾರೆ. ರಾಹುಲ್ ಗಾಂಧಿ, ಅಜಯ್ ಮಾಕೇನ್, ಜೈರಾಮ್ ರಮೇಶ್ ಕುಮಾರಿ ಶೆಲ್ಜಾ ಮತ್ತಿತರ ನಾಯಕರು ಖರ್ಗೆ ಅವರಿಗೆ ಶುಭ ಕೋರಿದ್ದಾರೆ.
ಖರ್ಗೆ ಅವರ ಎರಡು ವರ್ಷಗಳ ಅಧಿಕಾರವಧಿಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸುಧಾರಣೆ ಕಂಡಿದೆ.