newsics.com
ಉಗುರು ಬಿಡುವುದು ಪ್ರಸ್ತುತ ಕಾಲದಲ್ಲಿ ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ಈ ಉಗುರಿನಿಂದಲೇ ಮಹಿಳೆಯೊಬ್ಬರು ಗಿನ್ನೆಸ್ ದಾಖಲೆ ಬರೆದಿದ್ದಾರೆ.

ಹೆಸರು ಡಯಾನಾ ಆರ್ಮ್ಸ್ಟ್ರಾಂಗ್. ಈಕೆ ಬರೋಬ್ಬರಿ 27 ವರ್ಷದಿಂದ ಉಗುರನ್ನೇ ಕತ್ತರಿಸಿಲ್ಲವಂತೆ. ಇದೇ ವಿಚಾರವಾಗಿ ಡಯಾನಾ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಮಹಿಳೆ 42 ಅಡಿ 10.4 ಇಂಚು ಉದ್ದದ ಉಗುರನ್ನು ಹೊಂದಿದ್ದಾರೆ. ಅಂದರೆ 1,306.58 ಸೆಂ.ಮೀ. ಉದ್ದದ ಉಗುರನ್ನು ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ.
ಡಯಾನಾ ಆರ್ಮ್ಸ್ಟ್ರಾಂಗ್ 1997ರಿಂದ ಉಗುರನ್ನು ಕತ್ತರಿಸಿಲ್ಲವಂತೆ. ಡಯಾನಾ ತನ್ನ ಉಗುರನ್ನು ಪಾಲಿಶ್ ಮಾಡಲು ಹತ್ತು ಗಂಟೆ ತೆಗೆದುಕೊಳ್ಳುತ್ತಾರಂತೆ. ನಾಲ್ಕೈದು ವರ್ಷಗಳಿಗೊಮ್ಮೆ ತಪಾಸಣೆ ಮಾಡಿಸುತ್ತಾರೆ. ಈಕೆಯ ಉಗುರಿಗೆ ಹದಿನೈದರಿಂದ ಇಪ್ಪತ್ತು ಬಾಟಲಿ ನೇಲ್ ಪಾಲಿಶ್ (ಬಣ್ಣ) ಖರ್ಚಾಗುತ್ತಂತೆ.