newsics.com
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಆಪರೇಷನ್ ಮಾಡಿಸಬೇಕು, ಜಾಮೀನು ಕೊಡಿ ಎಂದು ಅವರ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಈಗ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಗೆ ಬೆನ್ನು ನೋವು ತೀವ್ರವಾಗಿದ್ದು ದೈನಂದಿನ ಕೆಲಸ ಮಾಡಲೂ ಸಮಸ್ಯೆಯಾಗುತ್ತಿದೆ. ಈ ನಡುವೆ ಅವರಿಗೆ ಜೈಲಿನಲ್ಲೇ ವೈದ್ಯರ ಸಲಹೆ ಮೇರೆಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ.
ಮಂಗಳವಾರ ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಬಂದಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ಅವರ ಪರ ವಕೀಲರು ಕೋರ್ಟ್‌ಗೆ ವಿವರಣೆ ನೀಡಿದ್ದಾರೆ. ದರ್ಶನ್‌ಗೆ ತೀವ್ರವಾಗಿ ಬೆನ್ನು ನೋವು ಕಾಡುತ್ತಿದೆ. ಅವರಿಗೆ ಸೋಮವಾರ ವಿಮ್ಸ್‌ನಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ. ವೈದ್ಯರು ಆಪರೇಷನ್ ಮಾಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಜಾಮೀನು ನೀಡಿ ಎಂದು ದರ್ಶನ್ ಪರ ವಕೀಲ ಸಿ.ವ ನಾಗೇಶ್ ಕೋರ್ಟ್‌ಗೆ ಮನವಿ ಮಾಡಿದರು.
ನ್ಯಾಯಾಧೀಶರು ಅವರ ವೈದ್ಯಕೀಯ ವರದಿ ನೀಡುವಂತೆ ಸೂಚಿಸಿದ್ದಾರೆ. ವೈದ್ಯಕೀಯ ವರದಿ ಮತ್ತು ಎಸ್ ಪಿಪಿ ಪ್ರಸನ್ನಕುಮಾರ್ ಆಕ್ಷೇಪಣೆಗೆ ಕೋರ್ಟ್ ಅವಕಾಶ ನೀಡಿದ್ದು, ಅಕ್ಟೋಬರ್ 28ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.
ಬೆಂಗಳೂರಲ್ಲಿ ಭಾರೀ ಮಳೆ, ಕಟ್ಟಡ ಕುಸಿತ: ಐವರ ಸಾವು? ಮೂವರ ಶವ ಹೊರಕ್ಕೆ, ಅವಶೇಷಗಳಡಿ 17ಕ್ಕೂ ಹೆಚ್ಚು ಕಾರ್ಮಿಕರು
ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ಮೋದಿ-ಪುಟಿನ್ ಭೇಟಿ; ಯುದ್ಧದ ಕುರಿತು ಮಾತುಕತೆ
ಬೇಲ್ ಸಿಗ್ತಿಲ್ಲ, ಬೆನ್ನುನೋವು ಬಿಡ್ತಿಲ್ಲ! ಟೆನ್ಶನ್ ಆದ ಗಂಡನನ್ನು ನೋಡಲು ಓಡೋಡಿ ಬಂದ ವಿಜಯಲಕ್ಷ್ಮಿ!
‘ಪುಷ್ಪ 2’ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡ್ತಾರಾ ಶ್ರದ್ಧಾ ಕಪೂರ್..?
ಲವ್ ಸ್ಟೋರಿ ಶುರು ಮಾಡಿದ್ರೆ ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ: ಚೈತ್ರಾ ಕುಂದಾಪುರ ವಾರ್ನಿಂಗ್