Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಹುಷಾರು, ಮುಂದಿನ 3 ಗಂಟೆಯಲ್ಲಿ ಬೆಂಗಳೂರಲ್ಲಿ ಭಾರೀ‌ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ
ಕರ್ನಾಟಕಪ್ರಮುಖ

ಹುಷಾರು, ಮುಂದಿನ 3 ಗಂಟೆಯಲ್ಲಿ ಬೆಂಗಳೂರಲ್ಲಿ ಭಾರೀ‌ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

Share
2 Min Read
SHARE

newsics.com

ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೋಮವಾರ (ಅ.21) ಬೆಳಗ್ಗೆ ಎಚ್ಚರಿಕೆ ನೀಡಿದೆ.

ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಹಾಗೂ ಸಣ್ಣಪುಟ್ಟ ಸಂಚಾರ ದಟ್ಟಣೆ ಉಂಟಾಗಲಿದೆ. ದುರ್ಬಲ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆ ಕಾರಣ ಮನೆಯೊಳಗೆ ಇರಿ, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಹೊರಗಿನ ಪ್ರಯಾಣವನ್ನು ತಪ್ಪಿಸಿ, ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ಅಲ್ಲದೆ, ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ. ನಿಮ್ಮ ಮನೆಯ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್‌ಪ್ಲಗ್ ಮಾಡಿ. ನೀವು ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಹವಾಮಾನ ಇಲಾಖೆ ಸಲಹೆಗಳನ್ನು ನೀಡಿದೆ.

ಕಳೆದ 3-4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರಿನ ಜನ ಹೈರಾಣಾಗಿದ್ದಾರೆ. ಬೆಂಗಳೂರು ಮಹಾನಗರ ಭಾಗಶಃ ಮುಳುಗಡೆಯಾಗಿದೆ. ಹಲವಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಭಾನುವಾರ ರಾತ್ರಿ ಕೊಂಚ ಬಿಡುವು ಕೊಟ್ಟಿದ್ದ ಮಳೆ ತಡರಾತ್ರಿ 2 ಗಂಟೆಯಿಂದ ಬೆಳಗಿನವರೆಗೂ ನಿರಂತರ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು, ಅದನ್ನು ಹೊರಹಾಕುವಲ್ಲಿ ನಿವಾಸಿಗಳು ಸುಸ್ತಾಗಿದ್ದಾರೆ. ಚರಂಡಿಗಳು ಕೂಡ ತುಂಬಿ ಹರಿಯುತ್ತಿದ್ದು, ಕೊಳಚೆ ನೀರು ಹಲವೆಡೆ ಮನೆಗಳಿಗೆ ನುಗ್ಗಿದೆ.

ರಸ್ತೆಗಳಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ತೀವ್ರ ಪರದಾಡುತ್ತಿದ್ದಾರೆ. ಕೆಲ ರಸ್ತೆಗಳಲ್ಲಿ ನೀರು ತುಂಬಿದ್ದು, ಎಲ್ಲಿ ಗುಂಡಿಯಿದೆ ಮತ್ತು ಚೇಂಬರ್ ಎಲ್ಲಾದರೂ ಓಪನ್ ಆಗಿದೆಯೇ ಎಂಬ ಭಯದಲ್ಲೇ ಜನರು ಓಡಾಡುವಂತಾಗಿದೆ.

ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ ಕೂಡ ಮುಟ್ಟಿದೆ. ಬೆಳಗಿನ ಪಾಳಿಯಲ್ಲಿ ಕೆಲಸಕ್ಕೆ ಹೋಗಬೇಕಾದ ಬಹುತೇಕ ಮಂದಿ ಮಳೆಯಲ್ಲೆ ನೆನೆದುಕೊಂಡೇ ತಮ್ಮ ಕಚೇರಿಗಳನ್ನು ತಲುಪಿದ್ದಾರೆ.

ಸೋಮವಾರ ಬೆಳಗ್ಗೆ ನಗರದ ಮೆಜೆಸ್ಟಿಕ್, ಚಾಮರಾಜಪೇಟೆ, ಮೈಸೂರು ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ವಿಧಾನಸೌಧ, ಶಾಂತಿನಗರ, ಜಯನಗರ, ತ್ಯಾಗರಾಜನಗರ, ಶ್ರೀನಗರ, ಕೆಆರ್ ಮಾರುಕಟ್ಟೆ, ಟೌನ್ ಹಾಲ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ ಹಾಗೂ ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ, ಮಾಗಡಿ ರಸ್ತೆ, ಯಲಹಂಕ, ಬನ್ನೇರುಘಟ್ಟ ರಸ್ತೆ, ಕೆಆರ್ ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ, ಬೆಳ್ಳಂದೂರು, ಮಾರತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜೆಪಿ ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ನಾಯಂಡಹಳ್ಳಿ, ಕೆಂಗೇರಿ, ನಾಗರಬಾವಿ, ಆರ್.ಆರ್. ನಗರ, ಕೋಣನಕುಂಟೆ, ತಲಘಟ್ಟಪುರ ಸೇರಿದಂತೆ ಹಲವಡೆ ಭಾರೀ ಮಳೆ ಸುರಿದಿದೆ.

ಸತತ ಮಳೆ ಹಿನ್ನೆಲೆ: ಬೆಂಗಳೂರು ನಗರದ ಶಾಲೆಗಳಿಗೆ ಇಂದು ರಜೆ ಘೋಷಣೆ- ಜಿಲ್ಲಾಧಿಕಾರಿ ಆದೇಶ

ಅಜ್ಜಿಯನ್ನು ಕೊಂದು ಆಕೆಯ ರಕ್ತವನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿ ತ್ರಿಶೂಲದಿಂದ ಇರಿದುಕೊಂಡ ಮೊಮ್ಮಗ!

TAGGED:Be carefulheavy rain in Bangalore in the next 3 hours: Meteorological department warns
Share This Article
Facebook Twitter Copy Link Print
Previous Article ಅಜ್ಜಿಯನ್ನು ಕೊಂದು ಆಕೆಯ ರಕ್ತವನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿ ತ್ರಿಶೂಲದಿಂದ ಇರಿದುಕೊಂಡ ಮೊಮ್ಮಗ!
Next Article ಚನ್ನಪಟ್ಟಣಕ್ಕೆ ಡಿಕೆ ಸುರೇಶ್, ಸಂಡೂರಿಗೆ ಅನ್ನಪೂರ್ಣ – ಶೀಘ್ರವೇ ಪ್ರಕಟಣೆ ಸಾಧ್ಯತೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?