newsics.com
ಬೆಂಗಳೂರು : ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ತಮ್ಮ ಹುಟ್ಟುಹಬ್ಬವನ್ನ ಶ್ರೀಲಂಕಾದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.
ಅಕ್ಟೋಬರ್ 13ರಂದು ತಮ್ಮ 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನೀಳ ಸುಂದರಿ ಪೂಜಾ, ತಮ್ಮ ಬರ್ತ್ ಡೇಯನ್ನು ವೈಲ್ಡ್ ಆಗಿ ಎಂಜಾಯ್ ಮಾಡೋದಕ್ಕೆ ಶ್ರೀಲಂಕಾದ ಕಾಡಿಗೆ ತೆರಳಿದ್ದಾರೆ. ಅಲ್ಲಿನ ಸುಂದರವಾದ ತಾಣದಲ್ಲಿ ಎಂಜಾಯ್ ಮಾಡುತ್ತಾ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ನಟಿ.
ಪೂಲ್ ಬಳಿ ಕೆಂಪು ಮತ್ತು ಬಿಳಿ ಬಣ್ಣದ ಕಾಂಬಿನೇಶನ್ ಇರುವ ಟಾಪ್ ಮತ್ತು ಶಾರ್ಟ್ಸ್ ಧರಿಸಿ, ಬಿಂದಾಸ್ ಆಗಿ ಪೋಸ್ ನೀಡಿರುವ ಫೋಟೊಗಳನ್ನು ಹಾಗೂ ಖುಷಿ ಖುಷಿಯಲ್ಲಿ ಕೇಕ್ ಕತ್ತರಿಸೋ ವಿಡಿಯೋವನ್ನು ಸಹ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.