newsics.com
ಸ್ಯಾಂಡಲ್‌ವುಡ್‌ನ ಸಪ್ತಮಿ ಗೌಡ ನೇರಳೆ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿಯೇ ಕಾಣಿಸುತ್ತಿದ್ದಾರೆ. ದಸರ ಹಬ್ಬಕ್ಕೆ ಚೆಂದಗೆ ರೆಡಿ ಆಗಿ ಪೋಸ್ ಕೊಟ್ಟಿದ್ದು, ಸೋಶಿಯಲ್ ಮಿಡಿಯಾದಲ್ಲಿ ಕಾಂತರ ಬೆಡಗಿಯ ಪೋಟೊ ಸಖತ್ ವೈರಲ್ ಆಗ್ತಿವೆ..

ಹೌದು,..ಸಪ್ತಮಿ ಗೌಡ ಸದ್ಯ ಮೈಸೂರಿನಲ್ಲಿಯೇ ಇದ್ದಾರೆ ಅನಿಸುತ್ತದೆ. ದಸರ ಹಬ್ಬ ಅಲ್ವೇ.? ಊರ ಹಬ್ಬ ಅನ್ನುವ ಹಾಗೆ ಖುಷಿಯಿಂದಲೇ ಓಡಾಡಿದ್ದಾರೆ. ಚೆಂದಗೆ ಸೀರೆಯುಟ್ಟು ಹೊಳೆಯುತ್ತಿದ್ದಾರೆ. ಸಪ್ತಮಿ ಗೌಡ ನೇರಳೆ ಬಣ್ಣದ ಸೀರೆಯಲ್ಲಿ ತುಂಬಾನೆ ಸುಂದರವಾಗಿಯೇ ಕಾಣಿಸುತ್ತಿದ್ದಾರೆ. ಒಳ್ಳೆ ಹೈಟ್ ಕೂಡ ಇದೆ. ಹಾಗಾಗಿಯೇ ಸೀರೆ ಇನ್ನೂ ಚೆಂದಗೆ ಕಾಣಿಸುತ್ತಿದೆ. ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಸಪ್ತಮಿ, ತಮ್ಮ ಫ್ಯಾನ್ಸ್ ಜೊತೆಗೆ ಕನೆಕ್ಟ್ ಯಾವಗಲು ಕನೆಕ್ಟ್ ಇರತ್ತಾರೆ ಹೇಳಬಹುದು.

ಸಪ್ತಮಿ ಗೌಡ ಸದ್ಯ ಯಾವುದೇ ಚಿತ್ರ ಒಪ್ಪಿದಂತೆ ಕಾಣಿಸೋದಿಲ್ಲ. ಆದರೆ, ಮಾಡಿರೋ ಕಾಂತಾರ ಚಿತ್ರ ಈಗಲೂ ನೇಮ್ ಆ್ಯಂಡ್ ಫೇಮ್ ಉಳಿಸಿದೆ. ಯುವ ಚಿತ್ರದಲ್ಲಿ ನಟಿಸಿರೋದು ಗೊತ್ತೇ ಇದೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಅದ್ಭುತ ಪಾತ್ರವನ್ನೆ ಮಾಡಿದ್ದರು. ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲೂ ಸಪ್ತಮಿ ಗೌಡ ನಟಿಸಿದ್ದಾರೆ. ಈ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ.