newsics.com
ಬೆಂಗಳೂರು : ನವರಾತ್ರಿಯಲ್ಲಿ ಕಠಿಣ ವ್ರತ ಆಚರಣೆಯ ಸಮಯದಲ್ಲೇ ಕಿಚ್ಚ ಸುದೀಪ್ ಹೊಸ ಅವತಾರ ರಿವೀಲ್ ಆಗಿದೆ.
ಕಿಚ್ಚ ಸುದೀಪ್ ಅವರು ಸಖತ್ ವರ್ಕೌಟ್ ಮಾಡಿದ್ದು ಕಟ್ಟು ಮಸ್ತಾದ ತಮ್ಮ ದೇಹವನ್ನು ಪ್ರದರ್ಶಿಸಿದ್ದಾರೆ.ಕಿಚ್ಚ ಸುದೀಪ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಸಿನಿಮಾ ಬಿಲ್ಲ ರಂಗ ಬಾಷಗೆ ತಯಾರಿಗಿರುವ ಫೋಟೋ ರಿಲೀಸ್ ಮಾಡಿದ್ದಾರೆ. ಫುಲ್ ವರ್ಕೌಟ್ ಮಾಡಿರುವ ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಹೊಸ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸುದೀಪ್ ಅವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
