newsics.com
ಮುಂಬೈ: ನಟಿ, ಹಿಮಾಚಲದ ಮಂಡಿಯ ಬಿಜೆಪಿ ಸಂಸದೆ ಕಂಗನಾ ರಣಾವತ್ ಐಷಾರಾಮಿ ಕಾರು ಆಗಾಗ್ಗೆ ಮುಖ್ಯಾಂಶಗಳಲ್ಲಿದೆ. ಇತ್ತೀಚೆಗೆ ಎಮರ್ಜೆನ್ಸಿ ಚಿತ್ರದ ಮೂಲಕ ಸುದ್ದಿಯಾಗಿದ್ದರು. ಮುಂಬೈನ ಪಾಲಿ ಹಿಲ್‌ನಲ್ಲಿರುವ ತನ್ನ ಬಂಗಲೆಯನ್ನು ಸುಮಾರು 32 ಕೋಟಿ ರೂ.ಗೆ ಮಾರಾಟ ಮಾಡಿದ್ದಾಳೆ. ಈಗ ಐಷಾರಾಮಿ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ LWB ಅನ್ನು ಖರೀದಿಸಿದ್ದಾರೆ.
ಮುಂಬೈನ ಲ್ಯಾಂಡ್ ರೋವರ್ ಮೋದಿ ಮೋಟಾರ್ಸ್ ಶೋ ರೂಂನಿಂದ ಈ ಕಾರು ಖರೀದಿಸಿದ್ದಾರೆ. ಕಾರು ಖರೀದಿಸಿದ ಬಳಿಕ ಕಂಗನಾ ರಣವಾತ್ ಪೂಜೆ ಮಾಡಿಸಿದ್ದಾರೆ. ಸಂಬಂಧಿ ಅಶ್ವತ್ಥಾಮ ಜೊತೆ ಕಾರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದರೆ. ಬಿಳಿ ಬಣ್ಣದ ರೇಂಜ್ ರೋವರ್ ಎಸ್‌ಯುವಿ ಕಾರು ಖರೀದಿಸಿದ್ದಾರೆ. ರೇಂಜ್ ರೋವರ್ ಯಾವ ಮಾಡೆಲ್ ಕಾರು ಅನ್ನೋದು ಬಹಿರಂಗವಾಗಿಲ್ಲ. ಮುಂಬೈನಲ್ಲಿ LWB ಸೀರಿಸ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಬೆಲೆ 3.81 ಕೋಟಿ ರೂಪಾಯಿ.
ಕಂಗನಾ ರಣಾವತ್ ಬಳಿ ಕೆಲ ದುಬಾರಿ ಕಾರುಗಳಿವೆ. ಈ ಸಾಲಿಗೆ ಇದೀಗ ರೇಂಜ್ ರೋವರ್ ಸೇರಿಕೊಂಡಿದೆ. ಎಪ್ರಿಲ್ ತಿಂಗಳಲ್ಲಿ ಕಂಗನಾ ದುಬಾರಿ ಮರ್ಸಿಡಿಸ್ ಬೆಂದ್ ಮೇಬ್ಯಾಕ್ ಜಿಎಲ್‌ಎಸ್ 600 ಕಾರು ಖರೀದಿಸಿದ್ದರು. 4ಮ್ಯಾಟಿಕ್ ಕಾರಿನ ಬೆಲೆ 2.91 ಕೋಟಿ ರೂಪಾಯಿ. ಈ ಕಾರು ಕಂಗನಾ ಅವರ ಮಣಿಕರ್ಣಿಕಾ ಫಿಲ್ಮ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನೋಂದಣಿ ಮಾಡಲಾಗಿದೆ. ಇದರ ಜೊತೆಗೆ ಕಂಗನಾ ಬಳಿ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಎಸ್680 ಕಾರಿನ ಮಾಲೀಕರಾಗಿದ್ದಾರೆ. ಇದರ ಬೆಲೆ 3.43 ಕೋಟಿ ರೂಪಾಯಿ.
ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಗ್ರೀನ್‌ಸಿಗ್ನಲ್