newsics.com
ಹೆಚ್ಚು ಲೈಂಗಿಕ ಆಸಕ್ತಿ ಹೊಂದಿರುವವರು ನೆಮ್ಮದಿಪಡುವ ವಿಚಾರವೊಂದು ಬಹಿರಂಗವಾಗಿದೆ. ದೈನಂದಿನ ಲೈಂಗಿಕ ಸಂಬಂಧಗಳು ಆಯುಷ್ಯ ವೃದ್ಧಿಗೆ ಕಾರಣವಾಗುತ್ತವೆ ಎಂದು ಸಂಶೋಧನಾ ಅಧ್ಯಯನವೊಂದು ಹೇಳಿದೆ.
ಇತ್ತೀಚಿನ ಈ ಸಂಶೋಧನೆಯು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ನಮ್ಮ ಆರೋಗ್ಯದ ಮೇಲೆ ಆಳವಾದ ಪರಿಣಾಮಗಳನ್ನು ಬಹಿರಂಗಪಡಿಸಿದೆ.
ಸೆಕ್ಸ್‌ನಿಂದ ಮಹಿಳೆಯ ಆಯುಷ್ಯ ಹೆಚ್ಚಳ:
ವಾರಕ್ಕೊಮ್ಮೆಯಾದರೂ ಲೈಂಗಿಕ ಸಂಬಂಧದಲ್ಲಿ ತೊಡಗದ ಮಹಿಳೆಯರಿಗೆ ಸಾವಿನ ಅಪಾಯವು ಶೇ.70ರಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ.
ನಿಯಮಿತ ಲೈಂಗಿಕ ಸಂಬಂಧಗಳು ಮಹಿಳೆಯರ ಆರೋಗ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂಬುದನ್ನು ಸ್ಪಷ್ಟಪಡಿಸಿವೆ. ಲೈಂಗಿಕ ಸಂಬಂಧಗಳು ಸಂತೋಷವನ್ನು ಮಾತ್ರವಲ್ಲದೆ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತವೆ ಎಂಬುದನ್ನು ಸಾಬೀತುಪಡಿಸಿವೆ.
ಸಂಭೋಗದ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳಾದ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ಗಳು ಹೃದಯ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ. ಇದಕ್ಕಾಗಿಯೇ ಸಕ್ರಿಯ ಲೈಂಗಿಕ ಜೀವನವನ್ನು ಹೊಂದಿರುವ ಮಹಿಳೆಯರು ಹೆಚ್ಚು ಕಾಲ ಬದುಕುತ್ತಾರೆ ಎಂದು ಅಧ್ಯಯನ ಹೇಳಿದೆ.
ಪುರುಷರಿಗೂ ಇದೆ ಲಾಭ:
ಬ್ರಿಟಿಷ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಾರಕ್ಕೊಮ್ಮೆಯಾದರೂ ಲೈಂಗಿಕ ಸಂಬಂಧದಲ್ಲಿ ತೊಡಗುವ ಪುರುಷರು ಮರಣ ಹೊಂದುವ ಅಪಾಯ ಕಡಿಮೆ. ಅಷ್ಟೇ ಅಲ್ಲ, ನಿಯಮಿತ ಲೈಂಗಿಕ ಚಟುವಟಿಕೆಯು ಪುರುಷರಲ್ಲಿ ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡುತ್ತದೆ.
ಜಪಾನ್‌ನ ಯಮಗಟಾದಲ್ಲಿ ನಡೆಸಲಾದ ಈ ಅಧ್ಯಯನವು, 20 ಸಾವಿರ ಜನರನ್ಜು ಒಳಗೊಂಡಿತ್ತು. ಕಡಿಮೆ ಲೈಂಗಿಕ ಆಸಕ್ತಿ ಹೊಂದಿರುವ ವ್ಯಕ್ತಿಗಳು, ವಿಶೇಷವಾಗಿ ಮಧ್ಯವಯಸ್ಕರು ಮತ್ತು ವಯಸ್ಸಾದವರು ಮರಣದ ಅಪಾಯವನ್ನು ಹೆಚ್ಚು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಮಾನಸಿಕ ಆರೋಗ್ಯಕ್ಕೂ ಸಹಕಾರಿ:
ಸಂಭೋಗದ ಸಮಯದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಅನ್ನು ಹೆಚ್ಚಾಗಿ “ಲವ್ ಹಾರ್ಮೋನ್” ಎಂದು ಕರೆಯಲಾಗುತ್ತದೆ. ಇದು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ಅಲ್ಲದೆ, ಎಂಡಾರ್ಫಿನ್ಗಳು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತವೆ. ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತವೆ. ಲೈಂಗಿಕ ಸಂಬಂಧಗಳು ನಿಮ್ಮ ಸಂಬಂಧವನ್ನು ಬಲಪಡಿಸುವುದಲ್ಲದೆ ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬುದನ್ನು ಈ ಸಂಶೋಧನಾ ಅಧ್ಯಯನ ಸ್ಪಷ್ಟವಾಗಿ ಹೇಳಿದೆ.
ರಾತ್ರಿ, ಬೆಳಗ್ಗೆ ಬಾಳೆಹಣ್ಣು ತಿಂದರೆ ಹೀಗೆಲ್ಲ ಆಗತ್ತೆ, ಯಾವ ಸಮಯ ಬೆಸ್ಟ್?