newsics.com
ಇಸ್ಲಾಮಾಬಾದ್: ಧಾರ್ಮಿಕ ಯಾತ್ರೆಗಳಾದ ಉಮ್ರಾ ಮತ್ತು ಹಜ್ ಯಾತ್ರೆಗಳ ಹೆಸರಿನಲ್ಲಿ ವೀಸಾ ಪಡೆದು ಸೌದಿಗೆ ಬರುವ ಕೆಲ ಪಾಕಿಸ್ತಾನಿಗಳು ಅಲ್ಲೇ ಭಿಕ್ಷಾಟನೆಯಲ್ಲಿ ತೊಡಗಿಕೊಂಡು ಅಲ್ಲೇ ಖಾಯಂ ಆಗಿ ಉಳಿಯುತ್ತಿದ್ದಾರೆ.
ಪಾಕಿಸ್ತಾನದ ಈ ಭಿಕ್ಷುಕರ ಹಾವಳಿ ಗಲ್ಫ್ ದೇಶ, ಸೌದಿ ಅರೇಬಿಯಾಗೆ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸೌದಿ ಅರೇಬಿಯಾ ಸರ್ಕಾರ ಉಮ್ರಾ ಹಾಗೂ ಹಜ್ ವೀಸಾ ನೀಡಿ ಭಿಕ್ಷುಕರನ್ನು ತನ್ನ ದೇಶಕ್ಕೆ ಕಳುಹಿಸದಂತೆ ಸ್ಟ್ರಿಕ್ಟ್ ಆಗಿ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಧಾರ್ಮಿಕ ವೀಸಾದ ಹೆಸರಿನಲ್ಲಿ ಪಾಕಿಸ್ತಾನದಿಂದ ಅರಬ್ ದೇಶಕ್ಕೆ ಪ್ರವಾಹದಂತೆ ಭಿಕ್ಷುಕರು ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸೌದಿ ರಾಷ್ಟ್ರ ಈ ಬಗ್ಗೆ ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.