newsics.com
ಬೆಂಗಳೂರು : ಬಿಗ್‌ಬಾಸ್ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತದೆ.
ವಿಡಿಯೋದಲ್ಲಿ ನಿವೇದಿತಾ ಗೌಡ ಜೀನ್ಸ್, ಹಾಗೂ ಗುಲಾಬಿ ಹಾರ್ಟ್ ಡ್ರೆಸ್ ತೊಟ್ಟು ಇಂಗ್ಲೀಷ್ ಬೇಬಿ ಡಾಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ತುಟಿಗೆ ಲಿಪ್‌ಸ್ಟಿಕ್ ಸಹ ಹಚ್ಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಸ್ ಹಾಗೂ ವಿಡಿಯೋಸ್ ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಗಾಯಕ ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟ ಬಳಿಕವಂತೂ ಸಾಕಷ್ಟು ಸದ್ದು ಮಾಡುತ್ತಿದ್ದ ನಿವೇದಿತಾ ಅವರು ಇದೀಗ ಹೊಸ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.