Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನಿತ್ಯ ಸ್ನಾನ ಮಾಡದ ಗಂಡ: ಮದುವೆಯಾದ ನಲವತ್ತೇ ದಿನದಲ್ಲಿ ಡಿವೋರ್ಸ್‌ಗೆ ಮುಂದಾದ ಪತ್ನಿ!
ದೇಶ

ನಿತ್ಯ ಸ್ನಾನ ಮಾಡದ ಗಂಡ: ಮದುವೆಯಾದ ನಲವತ್ತೇ ದಿನದಲ್ಲಿ ಡಿವೋರ್ಸ್‌ಗೆ ಮುಂದಾದ ಪತ್ನಿ!

Share
2 Min Read
SHARE

newsics.com

ಆಗ್ರಾ: ಸ್ನಾನದ ವಿಚಾರದಲ್ಲಿ ಗಂಡನ ನಿರ್ಲಕ್ಷಕ್ಕೆ ಬೇಸತ್ತ ಪತ್ನಿ ಮದುವೆಯಾದ ನಲವತ್ತೇ ದಿನದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.

ಗಂಡನ ಸಹವಾಸವೇ ಸಾಕು, ಒಮ್ಮೆ ನನ್ನನ್ನು ಈ ಸಂಸಾರದಿಂದ ಮುಕ್ತಿಗೊಳಿಸಿ ಎಂದು ಡಿವೋರ್ಸ್ ಮೊರೆಹೋದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಆಗ್ರಾ ನಿವಾಸಿ ರಾಜೇಶ್ ಮದುವೆ ತಿಂಗಳ ಹಿಂದೆ ನಡೆದಿದೆ. ರಾಜೇಶ್ ಮನೆಗೆ ಬಂದ ಪತ್ನಿಗೆ ಒಂದೊಂದು ದಿನ ದೂಡವುದೇ ಕಷ್ಟವಾಗಿದೆ. ಇದಕ್ಕೆ ಕಾರಣ ಪತಿ ರಾಜೇಶ್ ತಿಂಗಳಿಗೊಮ್ಮೆ ಹೆಚ್ಚೆಂದರೆ ಎರಡು ಬಾರಿ ಸ್ನಾನ ಮಾಡುತ್ತಾನೆ. ಹೆಚ್ಚು ಒತ್ತಾಯ ಮಾಡಿದರೆ ಗಂಗಾಜಲ ಸಿಂಪಡಿಸಿಕೊಳ್ಳುತ್ತಾನೆ.

ಮದುವೆಯಾದ ಬಳಿಕ ಪತ್ನಿ ಕಾಟ ತಾಳಲಾರದೆ ಕಳೆದ 40 ದಿನದಲ್ಲಿ 6 ಬಾರಿ ಸ್ನಾನ ಮಾಡಿದ್ದಾನೆ.
ಸ್ನಾನ ಮಾಡದ ಪತಿಯ ಹತ್ತಿರ ಹೋಗಲು ಪತ್ನಿಗೆ ಸಾಧ್ಯವಾಗುತ್ತಿಲ್ಲ. ವಾಂತಿಯಾಗುತ್ತಿದೆ. ಒಂದು ತಿಂಗಳು ಕಳೆದ ಪತ್ನಿಗೆ ಸಾಕೋ ಸಾಕಾಗಿದೆ. ಪತಿ ರಾಜೇಶ್‌ಗೆ ಹಲವು ಬಾರಿ ಸ್ನಾನ ಮಾಡುವಂತೆ ಪತ್ನಿ ಸೂಚಿಸಿದ್ದಾಳೆ. ಶುಚಿತ್ವ ಕಾಪಾಡಿಕೊಳ್ಳುವಂತೆ ಆಗ್ರಹಿಸಿದ್ದಾಳೆ. ಆದರೆ ಇದ್ಯಾವುದಕ್ಕೂ ರಾಜೇಶ್ ಸೊಪ್ಪು ಹಾಕಿಲ್ಲ.

40 ದಿನಗಳು ಉರುಳುತ್ತಿದ್ದಂತೆ ಪತ್ನಿ ನೇರವಾಗಿ ತವರು ಮನೆಗೆ ಆಗಮಿಸಿದ್ದಾಳೆ. ಸ್ನಾನ ಮಾಡದ ಪ್ರಾಣಿ ಜೊತೆ ಜೀವಿಸಲು ಸಾಧ್ಯವಿಲ್ಲ ಎಂದಿದ್ದಾಳೆ. ಇಷ್ಟೇ ಅಲ್ಲ ಡಿವೋರ್ಸ್‌ಗೆ ಮನವಿ ಮಾಡಿದ್ದಾಳೆ.

ಪತಿ ಮನೆ ಬಿಟ್ಟು ಹೋಗಿರುವ ವಿಚಾರ ಅಕ್ಕಪಕ್ಕದ ನಿವಾಸಿಗಳಿಗೆ ಗೊತ್ತಾಗುತ್ತಿದ್ದಂತೆ ರಾಜೇಶ್‌ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ರಾಜೇಶ್ ಹಾಗೂ ಆತನ ಪೋಷಕರು ಪತ್ನಿಯ ನಿವಾಸಕ್ಕೆ ಆಗಮಿಸಿ ಪಂಚಾಯಿತಿ ಮಾಡಲು ಆರಂಭಿಸಿದ್ದಾರೆ.

ಪ್ರತಿ ದಿನ ಸ್ನಾನ ಮಾಡುವುದಾಗಿ ರಾಜೇಶ್ ಹೇಳಿದ್ದಾನೆ. ಆದರೆ ಈತನ ಮಾತುಗಳನ್ನು ಕೇಳಿಸಿಕೊಳ್ಳಲೂ ಪತ್ನಿ ತಯಾರಿಲ್ಲ. ಸಂಸಾರ ಮುಂದುವರಿಸಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾಳೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಬಳಿಕ ಎರಡೂ ಕುಟುಂಬಸ್ಥರನ್ನು ಪೊಲೀಸರು ಸಮಾಧಾನಪಡಿಸಿದ್ದಾರೆ. ಬಳಿಕ ಇಬ್ಬರನ್ನು ಮುಂದಿನ ವಾರ ಕೌನ್ಸೆಲಿಂಗ್ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿದ್ದಾರೆ.

ಯಾವುದೇ ಕೌನ್ಸಲಿಂಗ್, ಏನೇ ಮಾಡಿದರೂ ಸಂಸಾರ ಮುಂದುವರಿಯುವುದಿಲ್ಲ ಎಂದು ಪತ್ನಿ ಹೇಳಿದ್ದಾಳೆ. ಇವೆಲ್ಲಾ ಪತ್ನಿ ಹೇಳಿಕೊಟ್ಟು ಬರಬೇಕಿಲ್ಲ. ಜೀವನದಲ್ಲೇ ಶಿಸ್ತು, ಶುಚಿತ್ವ ಇಲ್ಲದ ಮೇಲೆ ಆತನನ್ನು ಸರಿದಾರಿಗೆ ತರಲು ನಾನು ಮದುವೆಯಾಗಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾಳೆ.

ಕನ್ನಡದಲ್ಲಿ ನಟಿಯರ ರಕ್ಷಣೆಗೆ ಬರುತ್ತಿದೆ ಪಾಶ್ ಸಮಿತಿ

ಲಕ್ಷ, ಲಕ್ಷ ಕೊಟ್ಟು ಕತ್ತೆ ಖರೀದಿಗೆ ಮುಗಿಬಿದ್ದ ಜನ

TAGGED:Husband who does not bathe regularly: wife who wants to divorce on the 40th day of marriage!
Share This Article
Facebook Twitter Copy Link Print
Previous Article ಕನ್ನಡದಲ್ಲಿ ನಟಿಯರ ರಕ್ಷಣೆಗೆ ಬರುತ್ತಿದೆ ಪಾಶ್ ಸಮಿತಿ
Next Article ಕಪ್ಪಗಿದ್ದಾಳೆಂದು ಗಂಡನಿಂದ ಅವಮಾನ; ನವವಿವಾಹಿತೆ ಆತ್ಮಹತ್ಯೆ

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖಆರೋಗ್ಯಕರ್ನಾಟಕದೇಶಲೈಫ್‌ಸ್ಟೈಲ್

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read
ಕರ್ನಾಟಕದೇಶಪ್ರಮುಖ

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

2 Min Read
ಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read
ದೇಶಪ್ರಮುಖಮನರಂಜನೆವಿದೇಶ

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?