newsics.com
ಬೆಂಗಳೂರು : ಅಭಿಷೇಕ್ ಅಂಬರೀಶ್ ಕುಟುಂಬ ಈಗ ಅವಿವಾ ಬಿದ್ದಪ್ಪಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಅಂಬಿ ಕುಟುಂಬದ ಆಪ್ತರು, ನಟ ನಟಿಯರು ಭಾಗಿಯಾಗಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಲನಚಿತ್ರದ ಹಲವು ಗಣ್ಯರು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರಕ್ಕೆ ಸಾಕ್ಷಿಯಾಗಿದ್ದರು.
ಸ್ವನಿವಾಸದಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಹಸಿರು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಅವಿವಾ ಮಿಂಚುತ್ತಿದ್ದರು. ಕೆಲವೇ ಕೆಲವು ಅತಿಥಿಗಳು ಕಾರ್ಯಕ್ರಮದಲ್ಲಿ ಹಾಜರಾಗಿದ್ದು ಸದ್ಯ ಕೆಲವು ಫೋಟೋಗಳು ವೈರಲ್ ಆಗಿವೆ