newsics.com
ಬೆಂಗಳೂರು: ಬೀದಿನಾಯಿಗಳ ಬಗ್ಗೆ ಸೈಲೆಂಟ್ ಆಗಿದ್ದ ಪಾಲಿಕೆ ಆಯುಕ್ತರಿಗೆ ಇಂದು ಬೀದಿನಾಯಿಗಳ ರೋಷಾವೇಷದ ಪ್ರದರ್ಶನವಾಗಿದೆ. ಗುಂಡಿ ಮುಚ್ಚುವ ಕೆಲಸ ಪರಿಶೀಲನೆ ವೇಳೆ ಬೌಬೌ ಗ್ಯಾಂಗ್ ಕಂಡು ಹೌಹಾರಿದ ಮುಖ್ಯ ಆಯುಕ್ತರು, ಇದೀಗ ಬಿಬಿಎಂಪಿ ಪಶುಪಾಲನಾ ವಿಭಾಗದ ಮೂಲಕ ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಹೆಲ್ಪ್ ಲೈನ್ ಬಿಡುಗಡೆ ಮಾಡಲಾಗಿದೆ.
ಹೆಲ್ಪ್ ಲೈನ್ ನಂಬರ್ ಬಿಡುಗಡೆ
ಇನ್ನು ಬೀದಿನಾಯಿಗಳ ರೋಷಾವೇಷವನ್ನ ಕಣ್ಣಾರೆ ಕಂಡ ಪಾಲಿಕೆ ಮುಖ್ಯ ಆಯುಕ್ತರು, ಇದೀಗ ಬಿಬಿಎಂಪಿಯ ಪಶುಪಾಲನ ಇಲಾಖೆ ಮೂಲಕ ಬೀದಿನಾಯಿಗಳ ಕಡಿತ ಹಾಗೂ ರೇಬಿಸ್ಗೆ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ. 6364893322 ಹಾಗೂ 1533 ಸಹಾಯವಾಣಿ ಬಿಡುಗಡೆ ಮಾಡಿರೋ ಪಾಲಿಕೆ, ಇದರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯ ಡಾಗ್ ಕೆನಲ್ ಹೆಚ್ಚಳಕ್ಕೂ ತಯಾರಿ ನಡೆಸಿದೆ. ಇನ್ನು ಸಂತಾನಹರಣ, ರೋಗ ನಿರೋಧಕ ಚುಚ್ಚುಮದ್ದು ನೀಡೋದನ್ನ ಕೂಡ ಹೆಚ್ಚಿಸಲು ಚಿಂತನೆ ನಡೆಸಿದೆ.
ಸಹಕಾರನಗರದಲ್ಲಿ ರೌಂಡ್ಸ್ ವೇಳೆ ಪಾಲಿಕೆ ಆಯುಕ್ತರಿಗೆ ಬೌಬೌ ಗ್ಯಾಂಗ್ ಎದುರಾಗಿದ್ದು, ನಾಯಿಗಳ ಕಾಟಕ್ಕೆ ಶಾಕ್ ಆದ ಆಯುಕ್ತರು ರಸ್ತೆಯಿಂದ ವಾಪಸ್ ಆದ್ರೂ, ಈ ವೇಳೆ ಬೀದಿನಾಯಿಗಳ ಕಂಟ್ರೋಲ್ ಬಗ್ಗೆ ಮಾತಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸದ್ಯ ನಾಯಿಗಳನ್ನ ಬೇರೆಡೆ ಬಿಡಲು ಆಗುತ್ತಿಲ್ಲ. ಒಬಿಸಿ ಮೂಲಕ ಬರ್ತ್ ಕಂಟ್ರೋಲ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.