newsics.com
ಬೆಂಗಳೂರು : ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ತನ್ನ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.
ಮಹಿಳೆಯೊಬ್ಬರು ಆತನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿ ಎಲ್ರ ಮುಂದೆ ಆತನ ಗ್ರಹಚಾರ ಬಿಡಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ರೈಲಿನಲ್ಲಿ ಮಹಿಳೆಯರ ಮುಂದೆ ಖಾಸಗಿ ಅಂಗ ಪ್ರದರ್ಶಿಸಿದ ಮೊಹಮ್ಮದ್ ತುಫೈಲ್ ಎಂಬಾತನ ಕಪಾಳಕ್ಕೆ ಚಪ್ಪಲಿ ಏಟು ನೀಡಿ, ಈಗ ತೋರಿಸೋ ಬಾ ಎಂದು ಹೇಳುತ್ತಾ ಆತನಿಗೆ ಹಿಗ್ಗಾಮುಗ್ಗಾ ಥಳಿಸುವ ದೃಶ್ಯವನ್ನು ಕಾಣಬಹುದು.
ಮೊಹಮ್ಮದ್ ತುಫೈಲ್ ಎಂಬಾತ ರೈಲಿನಲ್ಲಿ ಕುಳಿತು ಮಹಿಳಾ ಪ್ರಯಾಣಿಕರ ಮುಂದೆ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿದ್ದಾನೆ. ಇದನ್ನು ಕಂಡ ದಿಟ್ಟ ಮಹಿಳೆಯೊಬ್ಬರು ಬಾರೋ ಈಗ ಎಲ್ರ ಮುಂದೆ ತೋರಿಸೋ ಬಾ ಎಂದು ಹೇಳಿ ಆ ಕಾಮುಕನಿಗೆ ಎಲ್ಲರ ಮುಂದೆ ಹಿಗ್ಗಾಮುಗ್ಗಾ ಥಳಿಸಿ ಚಪ್ಪಲಿ ಸೇವೆ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು RealBabanaras ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
https://twitter.com/RealBababanaras/status/1833037560169332865