newsics.com
ತುಮಕೂರು: ಸ್ವಂತ ಮಗಳ ಮೇಲೆಯೇ ಆತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ನಡೆದಿದೆ.
ಹೈನುಗಾರಿಕೆ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಸುಭಾಷ್ ಎಂಬಾತನೇ ಮಗಳ ಮೇಲೆಯೇ ಅತ್ಯಾಚಾರದಂಥ ಪೈಶಾಚಿಕ ಕೃತ್ಯ ನಡೆಸಿದ ಆರೋಪಿ.
ಉತ್ತರ ಪ್ರದೇಶದ ಗಂಡ- ಹೆಂಡತಿ, ಮಗಳ ಕುಟುಂಬ ಸುಮಾರು ಎಂಟು ತಿಂಗಳಿಂದ ಇಲ್ಲಿ ವಾಸವಾಗಿತ್ತು. ರಾತ್ರಿ ಹೆಂಡತಿ ಮಲಗಿದ ನಂತರ ಸುಭಾಷ್ ತನ್ನ ಮಗಳ ಮೇಲೆ ಆತ್ಯಾಚಾರ ಮಾಡಿದ್ದು ಹೆಣ್ಣು ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ತಾಯಿ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಹೋದಾಗ ಗರ್ಭವತಿ ಆಗಿರುವುದು ಗೊತ್ತಾಗಿದೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
2023 ರ ವಿಧಾನಸಭೆ ಚುನಾವಣೆ: ಕುಣಿಗಲ್ ಶಾಸಕ ರಂಗನಾಥ್ ಆಯ್ಕೆ ಅಸಿಂಧು ಕೋರಿ ಸುಪ್ರೀಂಗೆ ಬಿಜೆಪಿ ಅರ್ಜಿ,ನೋಟಿಸ್ ಜಾರಿ
ನಿವಿನ್ ಪೌಲಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲು: ನಾನು ತಪ್ಪು ಮಾಡಿಲ್ಲ ಎಂದ ನಟ