newsics.com
30 ವರ್ಷದ ಯುವತಿ, ನಾನು ಇನ್ನು ಸಿಂಗಲ್. ಹಾಗಾಗಿ ಒಳ್ಳೆಯ ಪಾರ್ಟನರ್ ಹುಡುಕಾಟದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಆಸ್ಟೇಲಿಯಾದ ಫರ್ಥ್ ನಿವಾಸಿಯಾಗಿರುವ ಡೈಶಾ ಡೇಲ್ ಎಂಬ ಯುವತಿ ಬಾಯ್‌ಫ್ರೆಂಡ್ ಹುಡುಕಾಟದಲ್ಲಿದ್ದಾಳೆ. ವಯಸ್ಸು ಆಗ್ತಿದೆ, ಯಾರೂ ಲೈಫ್ ಪಾರ್ಟನರ್ ಇಲ್ಲವಾ ಎಂದು ಜನರು ನನಗೆ ಟಾಂಗ್ ಕೊಡುತ್ತಿರುತ್ತಾರೆ ಎಂದು ಡೈಶಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ಡೈಶಾ, 30ನೇ ವಯಸ್ಸಿನಲ್ಲಿ ಒಂಟಿಯಾಗಿರುವ ಕಾರಣ, ಯಾರು ನನ್ನ ಜೊತೆ ಡೇಟ್ ಮಾಡಲ್ಲ ಎಂದಿದ್ದಾಳೆ. ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಆಗಿರುವ ಡೈಶಾ ಇದೀಗ ಜೀವನ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ನನ್ನ ವಯಸ್ಸಿನ ಕಾರಣ ಯಾರೂ ನನ್ನ ಜೊತೆ ಡೇಟ್‌ಗೆ ಬರಲ್ಲ. ನಾನಿನ್ನೂ ಸಿಂಗಲ್ ಅಂದ್ರೆ ಯಾರೂ ನಂಬಲ್ಲ. ಕೆಲವರು ನನ್ನ ವಯಸ್ಸನ್ನ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದು ಡೈಶಾ ಹೇಳಿಕೊಂಡಿದ್ದಾಳೆ.