newsics.com
ಬೆಂಗಳೂರು: ಯಶವಂತಪುರದಿಂದ ಹೊಸೂರಿಗೆ ಹೋಗಲು ಗಂಟೆಗಟ್ಟಲೇ ಪ್ರಯಾಣಿಸಬೇಕು. ಆದರೆ, ಇನ್ಮುಂದೆ ಇದಕ್ಕೆ ಬ್ರೇಕ್ ಬೀಳಲಿದೆ. ಯಶವಂತಪುರ-ಹೊಸೂರು ಮಧ್ಯೆ ಮೆಮು ರೈಲು ಸಂಚಾರಕ್ಕೆ ಭಾರತೀಯ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 06203 (66563) ಯಶವಂತಪುರ – ಹೊಸೂರು ಮೆಮು ರೈಲು ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ. ರೈಲು ಸಂಖ್ಯೆ 06204 (66564) ಹೊಸೂರು – ಯಶವಂತಪುರ ಮೆಮು ರೈಲು ಮಧ್ಯಾಹ್ನ 3.20ಕ್ಕೆ ಹೊಸೂರಿನಿಂದ ಹೊರಟು ಸಂಜೆ 5.15ಕ್ಕೆ ಯಶವಶವಂತಪುರ ತಲುಪಲಿದೆ.
ಹೊಸೂರು – ಯಶವಂತಪುರ ಮೆಮು ರೈಲು ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಹೀಲಲಿ, ಆನೆಕಲ್ ರಸ್ತೆಯಲ್ಲಿ ನಿಲ್ಲುತ್ತದೆ. ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ತುಮಕೂರು-ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ