newsics.com
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿಗೆ ಕೌಂಟ್ ಡೌನ್ ಆರಂಭವಾಗಿದೆ. ಅದ್ದೂರಿಯಾಗಿ ಗಣೇಶ ಹಬ್ಬವನ್ನ ಆಚರಿಸಲು ಸಿಟಿ ಮಂದಿ ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ಬೆಂಗಳೂರಲ್ಲಿ ಗಣೇಶೋತ್ಸವ ಬಂದೋಬಸ್ತ್ಗೆ ಪೊಲೀಸರು ತಯಾರಿ ಶುರು ಮಾಡಿದ್ದಾರೆ.
ಪೊಲೀಸರು ಗಣೇಶ ಪ್ರತಿಷ್ಠಾಪನೆಗೆ 3 ರೀತಿ ಪ್ರದೇಶ ಗುರುತಿಸಿದ್ದಾರೆ. ಸೂಕ್ಷ್ಮ, ಅತೀಸೂಕ್ಷ್ಮ ಮತ್ತು ಸಾಮಾನ್ಯ ಏರಿಯಾಗಳೆಂದು 3 ರೀತಿಯಲ್ಲಿ ಸ್ಥಳ ಗುರುತಿಸಿ ದಿನದ 24 ಗಂಟೆಯೂ ಬಂದೋಬಸ್ತ್ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.
ಮೂರು ಪಾಳಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಪಟ್ಟಿ ತಯಾರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಚಾಮರಾಜಪೇಟೆ, ಜೆ.ಜೆ ನಗರ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ, ಎಸ್.ಜಿ. ಪಾಳ್ಯ, ವಿವೇಕನಗರ, ತಿಲಕ್ ನಗರ, ಬನಶಂಕರಿ, ಆರ್.ಟಿ. ನಗರ, ಜೆ.ಸಿ. ನಗರಗಳಲ್ಲಿ ಗಣೇಶ ಹಬ್ಬದಂದು ಕಟ್ಟೆಚ್ಚರ ವಹಿಸುವಂತೆ ಇನ್ಸ್‌ಪೆಕ್ಟರ್ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಪಿಐಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತ ಸಿಸಿ ಕ್ಯಾಮರಾ ಕಣ್ಗಾವಲು, ಗಣೇಶೋತ್ಸವ ಆಯೋಜಕರಿಂದ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ.