newsics.com
ಬೆಂಗಳೂರು: ಅಲಾಸ್ಕಾ ಮಂಜಿನ ಪರ್ವತದಲ್ಲಿ ಕನ್ನಡದ ಬಾವುಟ ಕನ್ನಡಿಗ ಹಾರಿಸಿದ್ದಾನೆ.
ಉತ್ತರ ಕರ್ನಾಟಕದ ಮೂಲದ ಜಿಮ್ ಟ್ರೈನರ್ ಆಗಿರುವ ಬಸವರಾಜ್ ಕಟ್ಟಿ ಅಲಾಸ್ಕಾದ ಮಂಜಿಕ ಪರ್ವತದ ಮೇಲೆ ಕನ್ನಡ ಬಾವುಟ ಹಾರಿಸಿ ಬಂದ ಕರುನಾಡ ಕುವರನಾಗಿದ್ದಾನೆ.
ಒಂದು ವರ್ಷದಲ್ಲಿ 8-9 ತಿಂಗಳು ದುಡಿಮೆ ಮಾಡುತ್ತಾ ಲಕ್ಷಾಂತರ ರೂ. ಹಣ ಸಂಪಾದನೆ ಮಾಡುತ್ತಾನೆ. ಇನ್ನು ದುಡಿಮೆ ಮೂಲಕವೇ ಜಗತ್ತಿನ ಮೂಲೆ ಮೂಲೆಯಲ್ಲಿರುವ ದೇಶಗಳಿಗೆ ಸಮುದ್ರ ಮಾರ್ಗದ ಮೂಲಕ ಹೋಗಿ ಬರುತ್ತಾನೆ. ಆದರೆ, ತಾನು ಹೋದ ಅಪರೂಪದ ಸ್ಥಳಗಳಲ್ಲಿ ಎಲ್ಲೆಡೆಯೂ ತಪ್ಪದೇ ಕನ್ನಡ ಬಾವುಟವನ್ನು ಹಾರಿಸಿ ಬರುತ್ತಾರೆ.
ವಿಶ್ವದ ಸುಂದರ ಮತ್ತು ಅಪಾಯಕಾರಿ ಪ್ರವಾಸಿ ತಾಣವಾಗಿರುವ ಅಲಾಸ್ಕಾದ 900 ಅಡಿ ದಪ್ಪನೆಯ ಮಂಜಿನ ಬೆಟ್ಟದ ಮೇಲೆ ಹೋಗಿದ್ದು, ಇಲ್ಲಿಯೂ ಕನ್ನಡದ ಬಾವುಟ ಹಾರಿಸಿ ಬಂದಿದ್ದಾರೆ.
ಅಲಾಸ್ಕಾಗೆ ಸಮುದ್ರ ಮಾರ್ಗವಾಗಿ ಹೋದರೂ ಅಲ್ಲಿ, ಬೆಟ್ಟದ ಮೇಲೆ ಹೋಗಲು ಹೆಲಿಕಾಪ್ಟರ್ನಲ್ಲಿ ಹೋಗಿದ್ದಾರೆ. ಶ್ರೀಮಂತ ಕ್ರೂಸ್ಗಳಲ್ಲಿ ಸಂಚಾರ ಮಾಡುತ್ತಿದ್ದ ಬಸವರಾಜ್ ಅವರು ಇದೇ ಮೊದಲ ಬಾರಿಗೆ ತಾವು ಹೆಲಿಕಾಪ್ಟರ್ನಲ್ಲಿ ಸಂಚಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.