Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Xbox ವಿಶ್ವದಾದ್ಯಂತ ಕೈಕೊಟ್ಟ ಎಕ್ಸ್‌ಬಾಕ್ಸ್ ಸರ್ವರ್; ಆನ್‌ಲೈನ್ ಗೇಮ್‌ಗಳನ್ನು ಆಡಲಾಗದೆ ಗೇಮರ್‌ಗಳ ಪರದಾಟ
ಪ್ರಮುಖSportsದೇಶ

Xbox ವಿಶ್ವದಾದ್ಯಂತ ಕೈಕೊಟ್ಟ ಎಕ್ಸ್‌ಬಾಕ್ಸ್ ಸರ್ವರ್; ಆನ್‌ಲೈನ್ ಗೇಮ್‌ಗಳನ್ನು ಆಡಲಾಗದೆ ಗೇಮರ್‌ಗಳ ಪರದಾಟ

Share
2 Min Read
SHARE

newsics.com | ನ್ಯೂಸಿಕ್ಸ್

ವಾಷಿಂಗ್ಟನ್: ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಪ್ರಸಿದ್ಧ ಗೇಮಿಂಗ್ ಪ್ಲಾಟ್‌ಫಾರ್ಮ್ ‘ಎಕ್ಸ್‌ಬಾಕ್ಸ್’ (Xbox) ಬೃಹತ್ ಪ್ರಮಾಣದ ಸರ್ವರ್ ದೋಷಕ್ಕೆ ತುತ್ತಾಗಿದ್ದು, ಜಾಗತಿಕ ಮಟ್ಟದಲ್ಲಿ ಸಾವಿರಾರು ಗೇಮರ್‌ಗಳು ತಮ್ಮ ನೆಚ್ಚಿನ ಆನ್‌ಲೈನ್ ಗೇಮ್‌ಗಳನ್ನು ಆಡಲು ಸಾಧ್ಯವಾಗದೆ ಪರದಾಡಿರುವ ಘಟನೆ ವರದಿಯಾಗಿದೆ.

 

ಸರ್ವರ್‌ ಕೈಕೊಟ್ಟ ತಕ್ಷಣವೇ, ಗೇಮ್‌ಗಳನ್ನು ಲೋಡ್ ಮಾಡುವಾಗ ಬಳಕೆದಾರರಿಗೆ ‘0x87e107df’ ಎಂಬ ಎರರ್ ಕೋಡ್ ಕಾಣಿಸಿಕೊಂಡಿದೆ. ಡಿಜಿಟಲ್ ಗೇಮ್‌ಗಳ ಲೈಸೆನ್ಸ್‌ಗಳನ್ನು ಎಕ್ಸ್‌ಬಾಕ್ಸ್ ಲೈವ್ ಸರಿಯಾಗಿ ಪರಿಶೀಲಿಸಲು (Verify) ವಿಫಲವಾದಾಗ ಸಾಮಾನ್ಯವಾಗಿ ಈ ರೀತಿಯ ತಾಂತ್ರಿಕ ಸಮಸ್ಯೆ ಉಂಟಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಗೇಮರ್‌ಗಳ ಆಕ್ರೋಶ: ಆಟಗಾರರ ಬಳಿ ಉತ್ತಮ ಇಂಟರ್ನೆಟ್ ಸಂಪರ್ಕವಿದ್ದರೂ ಸಹ ಯಾವುದೇ ಗೇಮ್‌ಗಳು ಓಪನ್ ಆಗುತ್ತಿರಲಿಲ್ಲ. ನೆಟ್‌ವರ್ಕ್ ಸಮಸ್ಯೆ, ಕನ್ಸೋಲ್ ಸೆಟ್ಟಿಂಗ್ಸ್ ಬದಲಾಯಿಸಲು ಆಗದಿರುವುದು ಹಾಗೂ ‘ಡೆಡ್ ಬೈ ಡೇಲೈಟ್’ ಮತ್ತು ‘ಕಾಲ್ ಆಫ್ ಡ್ಯೂಟಿ’ ನಂತಹ ಜನಪ್ರಿಯ ಗೇಮ್‌ಗಳು ರನ್ ಆಗದ ಕಾರಣ ಗೇಮರ್‌ಗಳು ಆನ್‌ಲೈನ್‌ನಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಎಷ್ಟೇ ಬಾರಿ ಕನ್ಸೋಲ್ ರಿಸ್ಟಾರ್ಟ್ ಮಾಡಿದರೂ ಸಮಸ್ಯೆ ಬಗೆಹರಿಯಲಿಲ್ಲ.

‘0x87e107df’ ಎರರ್ ಕಾಣಿಸಿಕೊಳ್ಳಲು ಕಾರಣವೇನು? ಮೈಕ್ರೋಸಾಫ್ಟ್ ಸರ್ವರ್‌ಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾದಾಗ, ಎಕ್ಸ್‌ಬಾಕ್ಸ್ ಲೈವ್ ಮೂಲಕ ಬಳಕೆದಾರರು ಖರೀದಿಸಿದ ಡಿಜಿಟಲ್ ಗೇಮ್‌ನ ಮಾಲೀಕತ್ವವನ್ನು ದೃಢೀಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಇಂಟರ್ನೆಟ್ ಇದ್ದರೂ ಗೇಮ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಮೈಕ್ರೋಸಾಫ್ಟ್ ನೀಡಿದ ಮುನ್ನೆಚ್ಚರಿಕೆ ಕ್ರಮಗಳು

  • ನೆಟ್‌ವರ್ಕ್ ಸೆಟ್ಟಿಂಗ್ಸ್ ತೆರೆದು ಕನ್ಸೋಲ್ ಅನ್ನು ‘ಆಫ್‌ಲೈನ್ ಮೋಡ್’ (Offline mode) ಗೆ ಬದಲಾಯಿಸಿ.
  • ನಿಮ್ಮ ಎಕ್ಸ್‌ಬಾಕ್ಸ್ ಕನ್ಸೋಲ್ ಅನ್ನು ಒಮ್ಮೆ ರಿಸ್ಟಾರ್ಟ್ ಮಾಡಿ.
  • ಮರುಪ್ರಾರಂಭಗೊಂಡ ಬಳಿಕ ಮತ್ತೆ ಇಂಟರ್ನೆಟ್‌ಗೆ ಕನೆಕ್ಟ್ ಮಾಡಿ.
  • ಸರ್ವರ್‌ಗಳ ಸ್ಥಿತಿಯನ್ನು ತಿಳಿಯಲು ಎಕ್ಸ್‌ಬಾಕ್ಸ್‌ನ ಅಧಿಕೃತ ಸರ್ವಿಸ್ ಸ್ಟೇಟಸ್ ಪುಟ ಪರಿಶೀಲಿಸಿ.

ಘಟನೆ ಕುರಿತು ‘ಎಕ್ಸ್’ (X) ವೇದಿಕೆಯಲ್ಲಿ ಮಾಹಿತಿ ನೀಡಿರುವ ಎಕ್ಸ್‌ಬಾಕ್ಸ್ ಸಪೋರ್ಟ್ ತಂಡ, “ಬಳಕೆದಾರರು ಲಾಗಿನ್ ಮಾಡಲು ಮತ್ತು ಗೇಮ್‌ಗಳನ್ನು ಸ್ಟಾರ್ಟ್ ಮಾಡಲು ಎದುರಿಸುತ್ತಿರುವ ತೊಂದರೆ ನಮ್ಮ ಗಮನಕ್ಕೆ ಬಂದಿದೆ. ನಮ್ಮ ಎಂಜಿನಿಯರ್‌ಗಳು ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತಿದ್ದಾರೆ” ಎಂದು ತಿಳಿಸಿದೆ.

We are aware that some users are encountering errors when attempting to sign in, see your game library, or launch games. Our engineers are actively working to mitigate the issue. For updates, please follow along here or on https://t.co/Ehlmwc7gX0.

— XBOX Support (@XBOXSupport) July 27, 2026

ಸರ್ವರ್ ಹಂತದಲ್ಲೇ ದೋಷವಿರುವುದರಿಂದ ಕನ್ಸೋಲ್ ರಿಸ್ಟಾರ್ಟ್ ಮಾಡುವುದರಿಂದ ತಕ್ಷಣಕ್ಕೆ ಪರಿಹಾರ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಗೇಮರ್‌ಗಳು ಯಾವುದೇ ಗೇಮ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಅಥವಾ ‘ಫ್ಯಾಕ್ಟರಿ ರಿಸೆಟ್’ ಮಾಡಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗೆ ಮಾಡುವುದರಿಂದ ಡೇಟಾ ನಷ್ಟವಾಗುವ ಸಾಧ್ಯತೆಯಿದ್ದು, ಕಂಪನಿಯು ಸರ್ವರ್ ಸರಿಪಡಿಸುವವರೆಗೆ ಕಾಯುವುದೇ ಸುರಕ್ಷಿತ ಮಾರ್ಗವಾಗಿದೆ.

 

Rain Alert ವಾಯುಭಾರ ಕುಸಿತದ ಪ್ರಭಾವ; ಕರ್ನಾಟಕದ ವಿವಿಧೆಡೆ ಮಳೆರಾಯನ ಆರ್ಭಟ

TAGGED:#xbox #server down #Gamers #News #Newsics
Share This Article
Facebook Twitter Copy Link Print
Previous Article Rain Alert ವಾಯುಭಾರ ಕುಸಿತದ ಪ್ರಭಾವ; ಕರ್ನಾಟಕದ ವಿವಿಧೆಡೆ ಮಳೆರಾಯನ ಆರ್ಭಟ
Next Article Health ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಪಾನೀಯ ಸೇವಿಸಿ

Popular Posts

Rapido Ride Cancellation Fine ಸರ್ಕಾರದ ಹೊಸ ನಿಯಮ; ಕ್ಯಾಬ್ ರೈಡ್ ರದ್ದುಗೊಳಿಸಿದರೆ ಚಾಲಕರಿಗೆ ಭಾರಿ ದಂಡದ ಬಿಸಿ

2 Min Read

Commonwealth Games 2026: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟ ಜ್ಞಾನೇಶ್ವರಿ ಯಾದವ್

1 Min Read

Ram Mandir ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ಎಸ್‌ಐಟಿ ನೇತೃತ್ವ ವಹಿಸಲಿರುವ ಐಪಿಎಸ್ ಅಧಿಕಾರಿ ಎಸ್. ಕಿರಣ್

2 Min Read

Namma Metro ಯೆಲ್ಲೋ ಲೈನ್ ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ, ತಾತ್ಕಾಲಿಕವಾಗಿ ಮೆಟ್ರೋ ಸಂಚಾರ ಸ್ಥಗಿತ

1 Min Read

You Might Also Like

ಪ್ರಮುಖಆರೋಗ್ಯ

Health ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಪಾನೀಯ ಸೇವಿಸಿ

2 Min Read
ಕರ್ನಾಟಕಪ್ರಮುಖ

Rain Alert ವಾಯುಭಾರ ಕುಸಿತದ ಪ್ರಭಾವ; ಕರ್ನಾಟಕದ ವಿವಿಧೆಡೆ ಮಳೆರಾಯನ ಆರ್ಭಟ

2 Min Read
ಪ್ರಮುಖದೇಶ

Mekedatu Project ಮೇಕೆದಾಟು ಯೋಜನೆಗೆ ತಮಿಳುನಾಡು ಅನುಮತಿ ಅಗತ್ಯವಿಲ್ಲ; ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ

2 Min Read
ಪ್ರಮುಖCrimeದೇಶ

Tragedy ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟ್ ಕೈತಪ್ಪಿದ್ದಕ್ಕೆ ಮನನೊಂದು ಯುವತಿ ಆತ್ಮಹ*ತ್ಯೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?