Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭ ದಿನ… 01-09-2024, ಭಾನುವಾರ, ಆಸೆಗೆ ಮಾತ್ರ ಯೌವನ!
ಈ ದಿನಪಂಚಾಂಗ

ಶುಭ ದಿನ… 01-09-2024, ಭಾನುವಾರ, ಆಸೆಗೆ ಮಾತ್ರ ಯೌವನ!

Share
2 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭ ದಿನ

01-09-2024, ಭಾನುವಾರ

*******

ಈ ದಿನದ ಮಾತು

ಅಸೂಯೆ, ನಿರ್ದಯೆ, ಅಸಂತುಷ್ಟಿ, ಕೋಪ, ಸಂಶಯ ಪ್ರವೃತ್ತಿ, ಮತ್ತೊಬ್ಬರ ಸಂಪತ್ತು ಅಪಹರಿಸಿ ಸುಖಿಸುವುದು – ಈ ಆರು ದುರ್ಗುಣಗಳನ್ನು ತ್ಯಜಿಸಿದರಷ್ಟೇ ಮನುಷ್ಯನಿಗೆ ಸುಖ, ಶಾಂತಿ.
– ಮಿತ್ರಲಾಭ ಪರಿಚ್ಛೇದ, ಪಂಚತಂತ್ರ

***

ಈ ದಿನದ ಸುಭಾಷಿತ

ವಲೀಭಿರ್ಮುಖಮಾಕ್ರಾಂತಂ
ಪಲಿತೈರಂಕಿತಂ ಶಿರಃ |
ಗಾತ್ರಾಣಿ ಶಿಥಿಲಾಯಂತೇ
ತೃಷ್ಣೈಕಾ ತರುಣಾಯತೇ ||
(ವೈರಾಗ್ಯಶತಕ)

ಮುಖವು ಸುಕ್ಕುಗಳಿಂದ ತುಂಬಿದೆ. ತಲೆಯು ನೆರೆತ ಕೂದಲಿನಿಂದ ಕೂಡಿದೆ. ಶರೀರದ ಅಂಗಾಂಗಗಳು ಶಿಥಿಲವಾಗಿವೆ. ಆದರೆ ಆಸೆಯೊಂದೇ ಯೌವನದಿಂದ ಕೂಡಿದೆ.

***

ನೀತಿ ಕಥೆ

ಒಂದು ದಿನ ಖ್ಯಾತ ಚಿತ್ರ ಕಲಾವಿದ “ರಾಜಾ ರವಿವರ್ಮ” ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.

ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ ಕೂಡಲೇ ಅದೂ ಬಜಾರ (ರಸ್ತೆ) ದಲ್ಲಿ ಹೇಗೆ ಸಾಧ್ಯ? ಪ್ರಶ್ನಿಸಿದರು… ಮುಂದಿನ ದಿನಗಳಲ್ಲಿ ಭೇಟಿ ಯಾದಾಗ ಖಂಡಿತಾ ಬಿಡಿಸಿ ಕೊಡುತ್ತೇನೆ ಎಂದರೂ, ಪಟ್ಟು ಬಿಡದೆ ಈಗಲೇ ಬೇಕೆಂದು ಹಠ ಹಿಡಿದು ಅಂಗಲಾಚಿದಾಗ,, ಬೇರೆ ದಾರಿ ಕಾಣದೆ ಆ ಕ್ಷಣಕ್ಕೆ ಒಂದು ಚಿತ್ರವನ್ನು ಬಿಡಿಸಿ ಕೊಡುವಾಗ… ನಗುತ್ತಾ ಹೇಳುತ್ತಾನೆ… ಇದರ ಬೆಲೆ ಕೋಟಿ ರೂಪಾಯಿಗೂ ಅಧಿಕ, ಜಾಗೃತೆಯಿಂದ ಕಾಪಾಡಲು ಹೇಳಿ ಹೋಗುತ್ತಾನೆ.

ಆ ಯುವತಿ ಆಶ್ಚರ್ಯದಿಂದ ಚಿತ್ರ ನೋಡಿ, ಮರುದಿನವೇ ಪೇಟೆಗೆ ಹೋಗಿ ಪ್ರಮುಖ ಚಿತ್ರಕಾರರ ಚಿತ್ರ (Paintings) ಗಳನ್ನು ಮಾರುವ ಒಬ್ಬ ವ್ಯಕ್ತಿಯ ಹತ್ತಿರ ಹೋಗಿ ರವಿವರ್ಮ ಚಿತ್ರಿಸಿ ಕೊಟ್ಟ ಚಿತ್ರದ ಬೆಲೆ ಎಷ್ಟಿರಬಹುದು?? ಎಂದು ಕೇಳುತ್ತಾಳೆ… ಅವನೂ ಸಹ ರವಿವರ್ಮ ಹೇಳಿದ ಮಾತನ್ನೇ ಹೇಳುತ್ತಾನೆ.. ಕೋಟಿ ರೂಪಾಯಿಗೂ ಹೆಚ್ಚು ಎಂದು. ಆ ಚಿತ್ರದ ಬೆಲೆ ಕೇಳಿ ಯುವತಿಯ ಬಾಯಿಂದ ಮಾತೇ ಹೊರಡಲಿಲ್ಲ,, ಆ ತಕ್ಷಣವೇ ಮತ್ತೆ ರವಿವರ್ಮ ರನ್ನು ಭೇಟಿಯಾಗಲು ಹೊರಟಳು…

ರವಿವರ್ಮರನ್ನು ಭೇಟಿಯಾಗಿ… ನೀವು ಹತ್ತೇ ನಿಮಿಷದಲ್ಲಿ ಚಿತ್ರಿಸಿದ ಈ ಚಿತ್ರ ಇಷ್ಟೊಂದು ಬೆಲೆ ಬಾಳುವುದೆಂದು ಗೊತ್ತಿರಲಿಲ್ಲ. ನನಗೂ ಸಹ ಈ ಚಿತ್ರಕಲೆಯನ್ನು ಕಲಿಸಿಕೊಡಿ, ನಿಮ್ಮಂತೆ ಹತ್ತೇ ನಿಮಿಷದಲ್ಲಿ ಆಗದಿದ್ದರೂ.. ಹತ್ತು ದಿನಕ್ಕೆ ಒಂದು ಚಿತ್ರವನ್ನಾದರೂ ಬಿಡಿಸುವೆ ಎನ್ನುತ್ತಾಳೆ.

ರವಿವರ್ಮ ನಗುತ್ತಾ… ಸುಂದರಿ.. ನಿನಗಾಗಿ ಹತ್ತೇ ನಿಮಿಷದಲ್ಲಿ ಚಿತ್ರವನ್ನು ಬಿಡಿಸಿ ಕೊಟ್ಟೆ.. ನಿಜ, ಆದರೆ ಅದರ ಹಿಂದೆ ನನ್ನ “ಮೂವತ್ತು ವರ್ಷಗಳ” ಕಠಿಣವಾದ ಪರಿಶ್ರಮವಿದೆ. ನೀನೂ ಸಹ “ನಿನ್ನ ಮೂವತ್ತು ವರ್ಷಗಳನ್ನು” ಈ ಕಲೆಗಾರಿಕೆಗೆ ತ್ಯಾಗ ಮಾಡಿದರೆ,, ನನಗಿಂತ ಎತ್ತರಕ್ಕೆ ಬೆಳೆಯ ಬಲ್ಲೆ.

ರವಿವರ್ಮರ ಮಾತನ್ನು ಕೇಳಿ ಆ ಯುವತಿ “ಗರಬಡಿದಂತೆ” ನಿಂತು ಬಿಟ್ಟಳು…

ಅಂದರೆ,, ಒಬ್ಬ ಮೇಷ್ಟ್ರು ಅಥವಾ ಉಪನ್ಯಾಸಕನ 45 ನಿಮಿಷದ ಪಾಠದ ಹಿಂದೆ ಕೂಡ ಅವನ ಜೀವನದ ಎಷ್ಟೋ ವರ್ಷಗಳ ಕಠಿಣ ಸಾಧನೆ ಇರುತ್ತದೆ.

ತಂದೆ ~ ತಾಯಿ ನಮಗಾಗಿ ನಮ್ಮ ಒಳಿತಿಗಾಗಿ ಹೇಳಿದ ಮಾತು, ನಿಮ್ಮ ಊಹೆಗೂ ನಿಲುಕದ ಅವರ “ಪ್ರೀತಿ ~ ತ್ಯಾಗ” ದ ಹಿಂದೆ ಸಾಕಷ್ಟು ವರ್ಷ ಕಳೆದ ಅನುಭವದ, ಕಷ್ಟದ ಸರಮಾಲೆಯೇ ಇರುತ್ತದೆ.

ಹಾಗೆಯೇ… ಒಬ್ಬ” ಜ್ಞಾನಿ” ಅಥವಾ ಗುರುಗಳ ಜೊತೆ ಕಳೆದ ಕೆಲವೇ ಕೆಲವು ಕ್ಷಣ… ನಮ್ಮ ಜೀವನವನ್ನು ಬದಲಾಯಿಸಬಹುದು.

ನೀತಿ:
ಮೇಷ್ಟ್ರು ಅಥವಾ ಉಪನ್ಯಾಸಕರ ಪಾಠಗಳು, ತಂದೆ, ತಾಯಿಯರು ಕಲಿಸಿದ ಸಂಸ್ಕೃತಿ, ಸದ್ಗುರುಗಳ ಜ್ಞಾನ ಬೋಧನೆ ಕೂಡ, ರವಿವರ್ಮನ ಚಿತ್ರಗಳ ತರಹ ಊಹೆಗೂ ನಿಲುಕದಷ್ಟು ಬೆಲೆ ಬಾಳುವವು.

ದಿನ ಭವಿಷ್ಯ… 01-09-2024 ಭಾನುವಾರ, ಕರ್ಕಾಟಕ- ದಿಢೀರ್ ಧನ ಲಾಭ, ಸಿಂಹ- ಸ್ಥಿರಾಸ್ತಿ ವಿವಾದ ಇತ್ಯರ್ಥ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

TAGGED:Good day 01-09-2024 Sunday Aspiration is youth only! newsics ಶುಭ ದಿನ
Share This Article
Facebook Twitter Copy Link Print
Previous Article ಶುಭೋದಯ… ಇಂದಿನ ಪಂಚಾಂಗ, 01-09-2024 ಭಾನುವಾರ, ಮಾಸಿಕ ಶಿವರಾತ್ರಿ
Next Article ಜೈಲು ಶಿಕ್ಷೆಯ ಭಯ: ನ್ಯಾಯಾಧೀಶರೆದುರೇ ಆತ್ಮಹತ್ಯೆ ಯತ್ನ, ಸ್ಥಿತಿ ಗಂಭೀರ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?