Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > High court order ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ರೆ 2ನೇ ವಿವಾಹ ಮಾನ್ಯವಲ್ಲ: ಕರ್ನಾಟಕ ಹೈಕೋರ್ಟ್
ಕರ್ನಾಟಕದೇಶಪ್ರಮುಖ

High court order ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ರೆ 2ನೇ ವಿವಾಹ ಮಾನ್ಯವಲ್ಲ: ಕರ್ನಾಟಕ ಹೈಕೋರ್ಟ್

Share
2 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ಸ್ಲಿಂ ವ್ಯಕ್ತಿಯ ಮೊದಲ ವಿವಾಹ ಅನೂರ್ಜಿತವಾಗಿಲ್ಲದಿದ್ದರೆ ಅಥವಾ ರದ್ದಾಗಿಲ್ಲವಾದರೆ ವಿಶೇಷ ವಿವಾಹ ಕಾಯಿದೆಯಡಿ ಎರಡನೇ ವಿವಾಹ ಮಾಡಿಕೊಂಡರೆ ಅದು ಅನೂರ್ಜಿತವಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಅಲ್ಲದೆ, ಮುಸ್ಲಿಂ ವೈಯಕ್ತಿಕ ಕಾನೂನು ಆ ಸಮುದಾಯದ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ವಿವಾಹ ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

ಆದರೆ, ವಿಶೇಷ ವಿವಾಹ ಕಾಯಿದೆಯಡಿ ವಿವಾಹವಾಗಲು ಕಕ್ಷಿದಾರರು ಆಯ್ಕೆ ಮಾಡಿಕೊಂಡರೆ ಆಗ ಕಾನೂನು ಸ್ಥಿತಿಗತಿ ಸಂಪೂರ್ಣ ಬದಲಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಮುಸ್ಲಿಂ ವ್ಯಕ್ತಿಯ ಎರಡನೇ ಪತ್ನಿ ಬಳ್ಳಾರಿಯ ಮೀನಾಕುಮಾರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿಆಲಿಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.

ಮತ್ತೊಂದು ವಿವಾಹ ಅಸಾಧ್ಯ

ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ”ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರು ಬಹು ವಿವಾಹ ಮಾಡಿಕೊಳ್ಳಲು ಅವಕಾಶ ನೀಡಿದ್ದರೂ, ವೈಯಕ್ತಿಕ ಕಾನೂನಿನಡಿ ವಿವಾಹಗಳು ಶಾಸ್ತ್ರೋಕ್ತವಾಗಿ ನಡೆದರೆ ಮಾತ್ರ ಈ ಕಾನೂನು ಸ್ಥಾನವು ಚಾಲ್ತಿಯಲ್ಲಿರುತ್ತದೆ. ವಿಶೇಷ ವಿವಾಹ ಕಾಯಿದೆಯಡಿ ವಿವಾಹವಾಗಲು ಕಕ್ಷಿದಾರರು ಆಯ್ಕೆ ಮಾಡಿಕೊಂಡರೆ ಕಾನೂನುಬದ್ಧವಾಗುತ್ತದೆ. ಆಗ ಈಗಾಗಲೇ ವಿವಾಹವಾದ ವ್ಯಕ್ತಿಯ ಹಿಂದಿನ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರೆ ಈ ಕಾಯಿದೆಯಡಿ ಮತ್ತೊಂದು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ,” ಎಂದು ಆದೇಶಿಸಿದೆ.

ಅಲ್ಲದೆ, ”ಒಮ್ಮೆ ವಾದಿ-ಪ್ರತಿವಾದಿ ತಮ್ಮ ವೈಯಕ್ತಿಕ ಕಾನೂನಿನ ಬದಲು ಕಾಯಿದೆಯ ನಿಬಂಧನೆಗಳನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿದರೆ, ಅವರು ಸಂಸತ್ತು ಜಾರಿಗೊಳಿಸಿದ ಕಡ್ಡಾಯ ಶಾಸನಬದ್ಧ ಆಡಳಿತಕ್ಕೆ ತಮ್ಮನ್ನು ತಾವು ಒಳಪಡಿಸಿಕೊಳ್ಳುತ್ತಾರೆ. ಆದ್ದರಿಂದ ಅಂತಹ ವಿವಾಹದಿಂದ ಬರುವ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ವೈಯಕ್ತಿಕ ಕಾನೂನಿನಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಕಾಯಿದೆಯ ನಿಬಂಧನೆಗಳಿಂದ ಮಾತ್ರ ನಿರ್ಧರಿಸಲಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದೆ.

2008ರಲ್ಲಿ ವಿವಾಹವಾಗಿದ್ದ ಮಹಿಳೆ

ವಿಶೇಷ ವಿವಾಹ ಕಾಯಿದೆಯಡಿ 2008ರಲ್ಲಿ ಮುಸ್ಲಿಂ ಪುರುಷನನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು ತನ್ನನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ”ವಿಶೇಷ ವಿವಾಹ ಕಾಯಿದೆಯಡಿ ಎರಡನೇ ವಿವಾಹವಾದಾಗ ಅರ್ಜಿದಾರರ ಮೊದಲ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರಿಂದ ಅರ್ಜಿದಾರರು ಮತ್ತು ಮೃತ ವ್ಯಕ್ತಿಯ ನಡುವಿನ ವಿವಾಹವು ಅನೂರ್ಜಿತವಾಗಿದೆ,” ಎಂದು ನ್ಯಾಯಾಲಯವು ಹೇಳಿದೆ.

ಜತೆಗೆ ವಿಶೇಷ ವಿವಾಹ ಕಾಯಿದೆ ಸೆಕ್ಷನ್‌ 4(ಎ) ಪ್ರಕಾರ ಮೊದಲ ಮದುವೆ ರದ್ದಾಗದೇ ಇದ್ದಾಗ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಹಿಂದಿನ ವಿವಾಹ ಚಾಲ್ತಿಯಲ್ಲಿರುವುದರಿಂದ ಕಾಯಿದೆಯಡಿ ನಡೆದ ವಿವಾಹವು ಅನೂರ್ಜಿತವಾಗಿದೆ. ಅಲ್ಲದೆ, ಅದು ಪತಿ ಮತ್ತು ಪತ್ನಿಯ ಕಾನೂನುಬದ್ಧ ಸ್ಥಾನಮಾನವನ್ನು ಪಕ್ಷಕಾರರಿಗೆ ನೀಡುವುದಿಲ್ಲ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

CWG 2026 ಜಿಮ್ನಾಸ್ಟಿಕ್​ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ​ ನೋಡಿ

Mother loses life ಪತಿಯ ಅಕ್ರಮ ಸಂಬಂಧ ತಂದ ನೋವು: 7 ತಿಂಗಳ ಹಸುಗೂಸಿನೆದುರೇ ಜೀವ ಕಳೆದುಕೊಂಡ ತಾಯಿ! ಸಾಯುವಾಗ ಗಂಡನಿಗೆ ವಿಡಿಯೋ ಕಾಲ್‌ನಲ್ಲಿ ಹೇಳಿದ್ದೇನು?

Modi strategy ವಿವಾದಕ್ಕೊಳಗಾಗಿರುವ ಶಿಕ್ಷಣ ಇಲಾಖೆ ಹೊಣೆಯನ್ನು ಪ್ರಲ್ಹಾದ ಜೋಶಿಗೇ ನೀಡಿದ್ದೇಕೆ ಮೋದಿ? ತಂತ್ರಗಾರಿಕೆ ಏನು?

TAGGED:#Muslim *person #firstmarriage #notannulled #secondmarriage #notvalid #Karnataka #HighCourt #news #newsics #kannadanews
Share This Article
Facebook Twitter Copy Link Print
Previous Article CWG 2026 ಜಿಮ್ನಾಸ್ಟಿಕ್​ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ​ ನೋಡಿ
Next Article Kargil Vijay Diwas ಕಾರ್ಗಿಲ್ ಯುದ್ಧ ನಡೆದಿದ್ದು ಯಾಕೆ? ಶತ್ರುಗಳನ್ನು ಸದೆಬಡಿದು ಭಾರತ ಗೆದ್ದ ರೋಚಕ ಕಥೆ ಇಲ್ಲಿದೆ

Popular Posts

Sports ರೋಯಿಂಗ್ ಕ್ರೀಡೆಗೆ ಭಾರೀ ಆಘಾತ; ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ ರೋವರ್ ಲಕ್ಷಯ್, ದೇಶದ ಚೊಚ್ಚಲ ವಿಶ್ವಕಪ್ ಚಿನ್ನದ ಪದಕ ಅನುಮಾನ

2 Min Read

Kargil Vijay Diwas ಕಾರ್ಗಿಲ್ ಯುದ್ಧ ನಡೆದಿದ್ದು ಯಾಕೆ? ಶತ್ರುಗಳನ್ನು ಸದೆಬಡಿದು ಭಾರತ ಗೆದ್ದ ರೋಚಕ ಕಥೆ ಇಲ್ಲಿದೆ

3 Min Read

High court order ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ರೆ 2ನೇ ವಿವಾಹ ಮಾನ್ಯವಲ್ಲ: ಕರ್ನಾಟಕ ಹೈಕೋರ್ಟ್

2 Min Read

CWG 2026 ಜಿಮ್ನಾಸ್ಟಿಕ್​ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ​ ನೋಡಿ

1 Min Read

You Might Also Like

ಕರ್ನಾಟಕಪ್ರಮುಖ

Mother loses life ಪತಿಯ ಅಕ್ರಮ ಸಂಬಂಧ ತಂದ ನೋವು: 7 ತಿಂಗಳ ಹಸುಗೂಸಿನೆದುರೇ ಜೀವ ಕಳೆದುಕೊಂಡ ತಾಯಿ! ಸಾಯುವಾಗ ಗಂಡನಿಗೆ ವಿಡಿಯೋ ಕಾಲ್‌ನಲ್ಲಿ ಹೇಳಿದ್ದೇನು?

1 Min Read
ಕರ್ನಾಟಕದೇಶಪ್ರಮುಖ

Modi strategy ವಿವಾದಕ್ಕೊಳಗಾಗಿರುವ ಶಿಕ್ಷಣ ಇಲಾಖೆ ಹೊಣೆಯನ್ನು ಪ್ರಲ್ಹಾದ ಜೋಶಿಗೇ ನೀಡಿದ್ದೇಕೆ ಮೋದಿ? ತಂತ್ರಗಾರಿಕೆ ಏನು?

2 Min Read
ಕರ್ನಾಟಕಪ್ರಮುಖ

Objection to Rain Holiday ಮಳೆ ರಜೆ ಹೆಚ್ಚಿದ್ದಕ್ಕೆ ಆಕ್ಷೇಪ: ದಕ್ಷಿಣ ಕನ್ನಡದಲ್ಲಿನ್ನು ತಾಲೂಕುವಾರು ರಜೆ ಘೋಷಣೆಗೆ ನಿರ್ಧಾರ, ಇದೇ ನೀತಿ ರಾಜ್ಯಾದ್ಯಂತ ಜಾರಿಯಾಗುತ್ತಾ?

2 Min Read
ದೇಶಪ್ರಮುಖವೈರಲ್

Slap the bank manager ಮಾಜಿ ಸಿಎಂ ಕರುಣಾನಿಧಿ‌ ಮೊಮ್ಮಗಳು ಬ್ಯಾಂಕ್‌ ಮ್ಯಾನೇಜರ್‌ ಕೆನ್ನೆಗೆ ಹೊಡೆದಿದ್ದೇಕೆ? ಮುಂದೇನಾಯ್ತು? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?